ನವ ದೆಹಲಿ: ಇಂಧನ ಪಂಪ್‌ನಲ್ಲಿ ಕಂಡುಬಂದ ದೋಷ ಹಿನ್ನೆಲೆಯಲ್ಲಿ ಹೋಂಡಾ ಸಂಸ್ಥೆ ತನ್ನ 7 ಮಾಡೆಲ್‌ ಕಾರುಗಳಿಗೆ ಬದಲಿ ಪಂಪ್‌ ಅಳವಡಿಕೆ ಅಭಿಯಾನಕ್ಕೆ ಶನಿವಾರದಿಂದ ಚಾಲನೆ ನೀಡಲಿದೆ.

ಹೋಂಡಾ ಅಮೇಝ್, ಹೋಂಡಾ ಸಿಟಿ ಫೋರ್ತ್‌ ಜನರೇಶನ್‌, ಹೋಂಡಾ ಜಾಝ್, ಹೋಂಡಾ ಸಿವಿಕ್‌, ಹೋಂಡಾ ಬಿಆರ್‌- 5, ಹೋಂಡಾ ಸಿಆರ್‌- ವಿ ಸೇರಿದಂತೆ 2019ರಲ್ಲಿ ಉತ್ಪಾದನೆಗೊಂಡ ಒಟ್ಟು 77,954 ಕಾರುಗಳಿಗೆ ಬದಲಿ ಪಂಪ್‌ ಜೋಡಿಸಲಾಗುತ್ತಿದೆ.

ಭಾರತದಲ್ಲಿ ಈ ಮಾಡೆಲ್‌ಗಳ ಕಾರು ಮಾಲೀಕರು ಸಮೀಪದ ಹೋಂಡಾ ಡೀಲರ್‌ ಶಿಪ್‌ಗ್ಳನ್ನು ಸಂಪರ್ಕಿಸಲು ಜಪಾನಿ ಆಟೋ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ :ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್‌ಸಿಸಿ ಐಚ್ಛಿಕ ವಿಷಯವಾಗಿ ಅಳವಡಿಸಲು ನಿರ್ದೇಶನ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More