ತೆಲಂಗಾಣ: ದೇಶದಾದ್ಯಂತ ಇಂಧನ ದರ ಏರಿಕೆಯಾದ ಬೆನ್ನಲ್ಲೇ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದೆ. ಇಂದು ಕೋಲಾರದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಬೈಕ್​ಗೆ ಬೆಂಕಿ ಹಚ್ಚುವ ಮೂಲಕ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ತೆಲಂಗಾಣದಲ್ಲಿ ಬೈಕ್ ಒಂದನ್ನು ಕೆರೆಗೆ ಎಸೆದ ಘಟನೆ ನಡೆದಿದೆ.

ತೆಲಂಗಾಣದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೆಲವು ಕಾರ್ಯಕರ್ತರು ಬೈಕ್ ಒಂದನ್ನು ಎತ್ತಿ ಅನಾಮತ್ತು ಕೆರೆಗೆ ಎಸೆಯುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾರ್ಯಕರ್ತರು ಬೈಕ್ ಎತ್ತಿ ಎಸೆಯುವ ವಿಡಿಯೋ ವೈರಲ್ ಆಗಿದ್ದು ಹಲವರು ಇದೆಂಥಾ ಪ್ರತಿಭಟನೆ ಎಂದು ಪ್ರಶ್ನಿಸಿದ್ದಾರೆ.

The post ಇಂಧನ ಬೆಲೆ ಏರಿಕೆ: ಬೈಕನ್ನೇ ಎತ್ತಿ ಕೆರೆಗೆ ಬಿಸಾಡಿದ ಕಾಂಗ್ರೆಸ್ ಕಾರ್ಯಕರ್ತರು appeared first on News First Kannada.

Source: newsfirstlive.com

Source link