ಇಕ್ಕಟ್ಟಿನಲ್ಲಿ ರಹಾನೆ-ಪೂಜಾರ..ಈ ಪ್ಲೇಯರ್ಸ್​ಗಾಗಿಯೇ ಸ್ಪೆಷಲ್​ ಪ್ಲಾನ್​ ರೂಪಿಸಿದ BCCI


ಮುಂಬರುವ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಪೂಜಾರ – ರಹಾನೆಗೆ ಜಾಗವಿಲ್ಲ. ಹಾಗೆಂದ ಮಾತ್ರಕ್ಕೆ ಇದನ್ನ ಟೆಸ್ಟ್​ ಸ್ಪೆಷಲಿಸ್ಟ್​ಗಳ ಪಾಲಿಗೆ ಟೀಮ್​ ಇಂಡಿಯಾದ ಬಾಗಿಲು ಮುಚ್ಚಿತು ಎಂದೂ ಹೇಳುವಂತಿಲ್ಲ. ಯಾಕಂದ್ರೆ ಇವರಿಗೆ ಅಂತಾ ಬಿಸಿಸಿಐ ವಿಶೇಷ ಪ್ಲಾನ್​ ರೂಪಿಸಿದೆ.

ಅಜಿಂಕ್ಯಾ ರಹಾನೆ – ಚೇತೇಶ್ವರ್​ ಪೂಜಾರ. ಒಂದು ಕಾಲದಲ್ಲಿ ಟೀಮ್​ ಇಂಡಿಯಾದ ಸ್ಪೆಷಲಿಸ್ಟ್​ ಪ್ಲೇಯರ್​​ಗಳಾಗಿದ್ದ ಈ ಇಬ್ಬರ ಭವಿಷ್ಯ ಈಗ ಅತಂತ್ರಕ್ಕೆ ಸಿಲುಕಿದೆ. ಬ್ಯಾಡ್​ ಫಾರ್ಮ್​ ಹಾಗೂ ಸ್ಥಾನಕ್ಕಿರುವ ಪೈಪೋಟಿಯಲ್ಲಿ ಇಬ್ಬರೂ ಕಳೆದು ಹೋದ್ರೂ ಅಚ್ಚರಿಯಿಲ್ಲ. ಯಾಕಂದ್ರೆ, ಸೌತ್​ ಆಫ್ರಿಕಾ ಸರಣಿಯ ಬಳಿಕ ಈ ಇಬ್ಬರ ಪಾಲಿಗೆ ಟೀಮ್​ ಇಂಡಿಯಾದ ಬಾಗಿಲು ಮುಚ್ಚಿತು ಎಂದೇ ಹೇಳಲಾಗ್ತಿದೆ.

ಶ್ರೀಲಂಕಾ ಸರಣಿಯಿಂದ ರಹಾನೆ – ಪೂಜಾರಗೆ ಕೊಕ್​.!

ಸೌತ್​ ಆಫ್ರಿಕಾ ಸರಣಿಯಲ್ಲೇ ರಹಾನೆ, ಪೂಜಾರ ಬೆಂಚ್​​ಗೆ ಸೀಮಿತವಾಗ್ತಾರೆ ಎಂದು ಹೇಳಲಾಗಿತ್ತು. ಹಾಗಿದ್ರೂ ಆಟಗಾರರ ಮೇಲೆ ನಂಬಿಕೆ ಇಟ್ಟಿದ್ದ ಟೀಮ್​ ಮ್ಯಾನೇಜ್​ಮೆಂಟ್​ ಅವಕಾಶಗಳನ್ನ ನೀಡಿತ್ತು. ಆದ್ರೆ, ಈ ಹಿರಿಯ ಆಟಗಾರರು ಆ ನಂಬಿಕೆಯನ್ನ ಹುಸಿಗೊಳಿಸಿದ್ರು. ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ ತಂಡದ ಹಿನ್ನಡೆಗೆ ಕಾರಣರಾದ್ರು. ಹೀಗಾಗಿ ಈ ಇಬ್ಬರನ್ನ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯ ಆಯ್ಕೆಗೆ ಪರಿಗಣಿಸೋದೇ ಇಲ್ಲ ಎನ್ನಲಾಗ್ತಿದೆ.

ದೇಶಿ ಅಗ್ನಿಪರೀಕ್ಷೆ ಜಯಿಸಿದ್ರೆ ಮತ್ತೆ ಸಿಗಲಿದೆ ಚಾನ್ಸ್​.!

ಫಾರ್ಮ್​ ಇಸ್​ ಟೆಂಪರ್​ವರಿ.. ಕ್ಲಾಸ್​ ಇಸ್​ ಫರ್ಮನೆಂಟ್​..! ಅನ್ನೋ ಮಾತನ್ನ ಟೀಮ್​ ಮ್ಯಾನೇಜ್​ಮೆಂಟ್​​ ಮೊದಲಿನಿಂದಲೂ ಹೇಳುತ್ತಲೆ ಬರುತ್ತಿದೆ. ಇದೀಗ ಅದೇ ಮಾತಿಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಕಟ್ಟು ಬಿದ್ದಿದ್ದು, ಈ ಇಬ್ಬರಿಗೆ ಸ್ಪೆಷಲ್​ ಟಾಸ್ಕ್​ ನಿಡೋಕೆ ಮುಂದಾಗಿದೆ. ದೇಶಿ ಕ್ರಿಕೆಟ್​ ಪಂದ್ಯಗಳನ್ನಾಡಿ ಅಲ್ಲಿ ಫಾರ್ಮ್​ ರೀಗೇನ್​ ಮಾಡಿಕೊಂಡು ಕಮ್​ಬ್ಯಾಕ್​ ಮಾಡಿ ಅನ್ನೋದು ಸಂದೇಶವಾಗಿದೆ. ಒಂದು ವೇಳೆ ದೇಶಿ ಕ್ರಿಕೆಟ್​ನ ಅಗ್ನಿ ಪರೀಕ್ಷೆಯನ್ನ ಜಯಿಸಿದ್ರೆ, ಮತ್ತೆ ಚಾನ್ಸ್​ ಸಿಗಲಿದೆ.

‘ದೇಶಿ ಕ್ರಿಕೆಟ್​ ಪಂದ್ಯಗಳನ್ನಾಡಲು ಹೇಳ್ತೀವಿ’

‘ನಾವು ಕೋಚ್​ ರಾಹುಲ್​ ಮತ್ತು ನೂತನ ನಾಯಕನ ಜೊತೆಗೆ ಮಾತನಾಡುತ್ತೆವೆ. ಆದರೆ ಅವರಿಬ್ಬರಿಗೆ ಬಾಗಿಲು ಮುಚ್ಚಿಲ್ಲ. ಆದ್ರೆ, ಅವರನ್ನ ದೇಶಿ ಕ್ರಿಕೆಟ್​​ ಪಂದ್ಯಗಳನ್ನಾಡಿ ಮತ್ತೆ ಫಾರ್ಮ್​ ಕಂಡುಕೊಂಡು ತಂಡಕ್ಕೆ ಕಮ್​ಬ್ಯಾಕ್​ ಮಾಡಲು ಪ್ರಯತ್ನಿಸಿ ಎಂದು ಹೇಳುತ್ತೇವೆ’
      -ಬಿಸಿಸಿಐ ಅಧಿಕಾರಿ

ಲಂಕಾ ಸರಣಿಯಿಂದ ಕೊಕ್​ ನೀಡಿದ್ರೂ, ನಿಮಗೆ ಮತ್ತೆ ಅವಕಾಶ ಸಿಗಲಿದೆ ಅನ್ನೋ ಸಂದೇಶವನ್ನೇನೋ ಟೆಸ್ಟ್​​ ಸ್ಪೆಷಲಿಸ್ಟ್​ಗಳಿಗೆ ಬಿಸಿಸಿಐ ನೀಡಿದೆ. ಈ ಮೂಲಕ ಪೂಜಾರ – ರಹಾನೆಗೆ ಟೀಮ್​ ಇಂಡಿಯಾದ ಬಾಗಿಲು ಸಂಪೂರ್ಣವಾಗಿ ಮುಚ್ಚಿಲ್ಲ ಅನ್ನೋದು ಖಾತ್ರಿಯಾಗಿದೆ. ಹಾಗಾದ್ರೆ, ಅವಕಾಶಕ್ಕಾಗಿ ಕಾದು ಕುಳಿತಿರುವ ಯುವ ಆಟಗಾರರ ಭವಿಷ್ಯವೇನು ಅನ್ನೋದು ಪ್ರಶ್ನೆಯಾಗಿದೆ.

News First Live Kannada


Leave a Reply

Your email address will not be published. Required fields are marked *