ಧಾರವಾಡ: ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು.. ಸರಾಯಿಯಿಂದಲೇ ಸರ್ಕಾರ ಅನ್ನೋ ಭಾವನೆ ಬರಬಾರದು ಅಂತ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.

ಕಲಘಟಗಿ ತಾಲೂಕಿನಲ್ಲಿ ಮದ್ಯದ ಹಾವಳಿ ಮೀತಿ ಮೀರಿದೆ. ಗೋವಾದಿಂದ ಸರಾಯಿ ಬರುತ್ತಿದೆ, ಅಕ್ರಮ ಸರಾಯಿ ಮಾಫಿಯಾ ಬಗ್ಗು ಬಡಿಯಬೇಕು ಎಂದಿದ್ದಾರೆ. ಕೇವಲ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದರೆ ಸಾಲದು ದೇಶದಾದ್ಯಂತ ಮದ್ಯ ನಿಷೇಧ ಮಾಡಬೇಕು. ಒಂದು ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ್ರೆ ಮತ್ತೊಂದು ರಾಜ್ಯದಿಂದ ತರಿಸಿಕೊಳ್ಳುತ್ತಾರೆ. ಹೀಗಾಗಿ ಇಡೀ ದೇಶದಲ್ಲೇ ಮದ್ಯ ನಿಷೇಧವಾಗವೇಕು ಎಂದು ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.

The post ಇಡೀ ರಾಜ್ಯದಲ್ಲಿ, ದೇಶದಲ್ಲೂ ಮದ್ಯ ನಿಷೇಧ ಮಾಡಬೇಕು: ಕಾಂಗ್ರೆಸ್ ನಾಯಕ appeared first on News First Kannada.

Source: newsfirstlive.com

Source link