ಇಡೀ ರಾತ್ರಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರು ಮಾತ್ರವೇ ಕಾರ್ಯನಿರ್ವಹಿಸಿದರು! ಯಾಕೆ ಗೊತ್ತಾ? | All woman police night beat by nanjangud police station in mysuru


ಇಡೀ ರಾತ್ರಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರು ಮಾತ್ರವೇ ಕಾರ್ಯನಿರ್ವಹಿಸಿದರು! ಯಾಕೆ ಗೊತ್ತಾ?

ಮಹಿಳಾ ಸಿಬ್ಬಂದಿ

ಮೈಸೂರು: ಜಿಲ್ಲೆಯ ನಂಜನಗೂಡು ಉಪವಿಭಾಗದ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಪಾಳಿಯಲ್ಲಿ  ಮಹಿಳಾ ಪೊಲೀಸ್ (Woman police) ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸಿದ್ದಾರೆ. ಆ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಿನ್ನೆಲೆ ಒಟ್ಟು 50 ಮಹಿಳಾ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕದಾದ್ಯಂತ ಇದೇ ಮೊದಲ ಬಾರಿಗೆ ಕೇವಲ ಮಹಿಳಾ ಸಿಬ್ಬಂದಿಗಳು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸದ್ದಾರೆ. ಈ ಬಗ್ಗೆ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಪಿ.ಚಂಪಕಾ ಅಭಿಪ್ರಾಯ ಹಂಚಿಕೊಂಡಿದ್ದು, ಮೊದಲು ಕೇವಲ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಬೇಕು ಎಂದಾಗ ಆತಂಕವಾಗಿತ್ತು. ಆದರೆ ಈಗ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ. ನಿಖಿತಾ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳು ಈ ವಿಚಾರದೊಂದಿಗೆ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದ್ದು, ಮೈಸೂರು ಎಸ್​ಪಿ ಆರ್. ಚೇತನ್ ಅವರು ಒಪ್ಪಿಗೆ ನೀಡಿದ್ದಾರೆ. ಮಹಿಳಾ ಹೆಡ್ ಕಾನ್ಸ್‌ಟೇಬಲ್‌ ಪಿ. ಚಂಪಕಾ ಈ ಮೊದಲು ಪುರುಷ ಪೊಲೀಸ್ ಸಿಬ್ಬಂದಿಗಳ ಜತೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಗಳ ಜತೆ ರಾತ್ರಿ ಪಾಳಿ ಮಾಡಿದ್ದಾರೆ. ಆ ಮೂಲಕ ಪಿ. ಚಂಪಕಾ ಅಧಿಕಾರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

17 ವರ್ಷಗಳ ಪೊಲೀಸ್ ಸೇವೆಯಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಪಿ. ಚಂಪಕ ಎಂದೂ ಎಲ್ಲಾ ಬೀಟ್ ಪಾಯಿಂಟ್‌ಗಳನ್ನು ಅಂದರೆ ರೌಡಿಶೀಟರ್​ಗಳ ಚಲನವಲನ, ವಾಹನಗಳ ಉಸ್ತುವಾರಿ, ಅಪರಾಧಿಗಳ ಪಟ್ಟಿ ಮಾಡುವಿಕೆ, ಅನುಮಾಸ್ಪದವಾಗಿ ಓಡಾಡುವವರ ಪರಿಶೀಲನೆ ಒಟ್ಟಿಗೆ ಮಾಡಿಲ್ಲ. ಏಕೆಂದರೆ ಮಹಿಳಾ ಪೇದೆಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು ವಿಶೇಷ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಪಾಳಿಯ ಕೆಲಸದಲ್ಲಿ ತೊಡಗುತ್ತಾರೆ.

ಬುಧವಾರ ರಾತ್ರಿ 9 ಗಂಟೆಗೆ ಪ್ರಾರಂಭವಾದ ಬೀಟ್ ಸತತ ಎಂಟು ಗಂಟೆಗಳ ಕಾಲ ನಡೆಯಿತು. ಒಂಬತ್ತು ಸ್ಥಳಗಳಿಗೆ ಭೇಟಿ ಮಾಡುತ್ತಾ ಪಿ. ಚಂಪಕ, ತಮ್ಮ ದ್ವಿಚಕ್ರ ವಾಹನವನ್ನು ಓಡಿಸಿದ್ದಾರೆ. ತಮ್ಮ ಫೋನ್‌ನಲ್ಲಿ ಇ-ಬೀಟ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಉಪಸ್ಥಿತಿಯನ್ನು ನೋಂದಾಯಿಸಿದ್ದರು. ಎಂಟು ಪೊಲೀಸ್ ಠಾಣೆಗಳ 25 ಮಹಿಳಾ ಪೇದೆಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಿಗೂ ಇದು ಹೊಸ ಅನುಭವವಾಗಿತ್ತು ಎನ್ನುವುದು ವಿಶೇಷ.

ಮಹಿಳಾ ಸಬಲೀಕರಣದ ಕಾರ್ಯಕ್ರಮವೊಂದರಲ್ಲಿ ತಮಗೆ ಈ ಹೊಸ ಅವಕಾಶ ಸಿಕ್ಕಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ನಿಕಿತಾ ಹೇಳಿದ್ದಾರೆ.

ಇದನ್ನೂ ಓದಿ:
Video: ಸ್ಮಶಾನದಲ್ಲಿ ಎಚ್ಚರವಿಲ್ಲದೆ ಬಿದ್ದಿದ್ದವನ ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಪೊಲೀಸ್​ ಅಧಿಕಾರಿ; ಚೆನ್ನೈ ಮಳೆ ಮಧ್ಯೆ ಮನಕಲಕುವ ದೃಶ್ಯ

ಮಹಿಳಾ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್​ಐಆರ್ ದಾಖಲು

TV9 Kannada


Leave a Reply

Your email address will not be published. Required fields are marked *