‘ಇಡೀ ಸ್ವರ್ಗ ನಿಮ್ಮದಾಗಿರಲಿ’ – ಕೋಟಿ ರಾಮು ಜನ್ಮದಿನದ ನೆನಪಿನಲ್ಲಿ ಮಾಲಾಶ್ರೀ ಭಾವುಕ ಪತ್ರ

‘ಇಡೀ ಸ್ವರ್ಗ ನಿಮ್ಮದಾಗಿರಲಿ’ – ಕೋಟಿ ರಾಮು ಜನ್ಮದಿನದ ನೆನಪಿನಲ್ಲಿ ಮಾಲಾಶ್ರೀ ಭಾವುಕ ಪತ್ರ

ಕೊರೊನಾ ಎರಡನೇ ಅಲೆಯಲ್ಲಿ ಕನ್ನಡ ಚಿತ್ರರಂಗ ಹಲವು ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಿದೆ. ಮಹಾಮಾರಿ ಕೊರೊನಾ ಸೋಂಕಿನಿಂದ ಸ್ಯಾಂಡಲ್​​ವುಡ್​ನಲ್ಲಿ ಕೋಟಿ ರಾಮು ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಅವರು ಕೂಡ ಏಪ್ರಿಲ್ 26 ರಂದು ಸಾವನ್ನಪ್ಪಿದ್ದರು. ಇಂದು ರಾಮು ಅವರ ಜನ್ಮ ದಿನದ ನೆನಪಿನಲ್ಲಿ ನಟಿ ಮಾಲಾಶ್ರೀ ಅವರು ಭಾವುಕ ಪತ್ರವನ್ನು ಬರೆದಿದ್ದಾರೆ.

ರಾಮು ಅವರ ಬರ್ತ್​ಡೇ ದಿನವನ್ನ ಪತ್ರದ ಮೂಲಕ ಹಂಚಿಕೊಂಡ ಮಾಲಾಶ್ರೀ ರಾಮು ಅವರು, 23 ವರ್ಷ ನಿಮ್ಮ ಬರ್ತ್​​ಡೇಯನ್ನು ಹಬ್ಬದ ರೀತಿಯ ನಾವು ಆಚರಿಸಿಕೊಂಡಿದ್ವಿ.. ನೀವು ನನಗೆ ದೇವರ ವರವಾಗಿ ಬಂದ್ರಿ.. ನೀವು ನನಗೆ ವರಗಳನ್ನು ಕೊಡುವ ದೇವರಾದ್ರಿ.. ನನ್ನ ದಿನ ನೀವಾಗಿದ್ರಿ, ನನ್ನ ನಡೆ ನೀವಾಗಿದ್ರಿ, ನನ್ನ ನುಡಿ, ನಗು, ನೆಮ್ಮದಿ ನೀವಾಗಿದ್ರಿ, ನನ್ನ ಹೆಸರಿಗೆ ಬೆಳಕಾಗಿದ್ರಿ.. ನೀವು ದೂರವಾದ ಆ ಕ್ಷಣದಿಂದ ಈ ಸಾಲುಗಳನ್ನು ಬರಿಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೆ ಇದೆ.. I am misssing you so much ಎಂದು ರಾಮು ಅವರನ್ನು ನೆನೆದು ಮನಮಿಡಿಯೋ ಪತ್ರ ಬರೆದು ನೆನೆದ್ದಿದ್ದಾರೆ.

 

The post ‘ಇಡೀ ಸ್ವರ್ಗ ನಿಮ್ಮದಾಗಿರಲಿ’ – ಕೋಟಿ ರಾಮು ಜನ್ಮದಿನದ ನೆನಪಿನಲ್ಲಿ ಮಾಲಾಶ್ರೀ ಭಾವುಕ ಪತ್ರ appeared first on News First Kannada.

Source: newsfirstlive.com

Source link