‘ಇತರರಿಗೆ ಚಾನ್ಸ್​ ಕೊಡದೇ ಪದೇ ಪದೇ ನೀವೇ​ ಅಧ್ಯಕ್ಷ ಆಗ್ತೀರಲ್ಲ’ ಎಂದಿದ್ದಕ್ಕೆ ಸಾ.ರಾ. ಗೋವಿಂದು ಹೇಳಿದ್ದೇನು? | Sa Ra Govindu talks about Karnataka Film Chamber of Commerce election 2022



Karnataka Film Chamber of Commerce: ಅನೇಕ ಕಾರಣಗಳಿಂದಾಗಿ ಈ ಬಾರಿಯ ಫಿಲ್ಮ್​ ಚೇಂಬರ್​ ಎಲೆಕ್ಷನ್​ ಕೌತುಕ ಮೂಡಿಸಿದೆ. ಇಂದು (ಮೇ 28) ರಾತ್ರಿ ವೇಳೆಗೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

TV9kannada Web Team


| Edited By: Madan Kumar

May 28, 2022 | 2:57 PM




ನಿರ್ಮಾಪಕ ಸಾ.ರಾ. ಗೋವಿಂದು (Sa Ra Govindu) ಅವರು ಈಗಾಗಲೇ ಮೂರು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ನಿಂತಿದ್ದಾರೆ. ಇಂದು (ಮೇ 28) ಮಧ್ಯಾಹ್ನ 2 ಗಂಟೆಯಿಂದ ಚುನಾವಣೆ ಆರಂಭ ಆಗಿದೆ. ಸಾ.ರಾ. ಗೋವಿಂದು ಅವರಿಗೆ ಎದುರಾಳಿಯಾಗಿ ಭಾ.ಮ. ಹರೀಶ್​ (Bha Ma Harish) ಅವರು ಚುನಾವಣೆಯ ಕಣದಲ್ಲಿ ಇದ್ದಾರೆ. ಸಾ.ರಾ. ಗೋವಿಂದು ಅವರು ಬೇರೆಯವರಿಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೆಲವರಿಂದ ಕೇಳಿಬಂದಿದೆ. ಅದಕ್ಕೆ ಅವರು ಉತ್ತರ ನೀಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಈ ಬಾರಿಯ ಫಿಲ್ಮ್​ ಚೇಂಬರ್​ ಎಲೆಕ್ಷನ್ (Film Chamber Election)​ ಕೌತುಕ ಮೂಡಿಸಿದೆ. ರಾತ್ರಿ ವೇಳೆಗೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


TV9 Kannada


Leave a Reply

Your email address will not be published. Required fields are marked *