ಕೊರೊನಾ ಎರಡನೇ ಅಲೆಯ ಅಬ್ಬರದಿಂದ ರಾಜ್ಯಾದ್ಯಂತ ಲಾಕ್​ಡೌನ್ ಹೇರಲಾಗಿತ್ತು. ಈ ಲಾಕ್​ಡೌನ್​​ ಬಿಸಿ ಹೊರಗಿದ್ದವರಿಗೆ ಮಾತ್ರವಲ್ಲದೇ ಬಿಡದಿಯಲ್ಲಿದ್ದ ಬಿಗ್​ಬಾಸ್​ ಮನೆಗೂ ತಟ್ಟಿತ್ತು. ಹೌದು.. ಕನ್ನಡ ಬಿಗ್​ಬಾಸ್​ ಸೀಸನ್​ 8 ಕೊರೊನಾ ಲಾಕ್​ಡೌನ್​ ಕಾರಣ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಬಿಗ್​ಬಾಸ್​ ಮತ್ತೆ ಆರಂಭವಾಗ್ತಿದ್ದು, ​ಇದೇ ಜೂನ್​ 20ರಿಂದ ಶುರುವಾಗಲಿದೆ ಅನ್ನೋ ಮಾಹಿತಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ.

ಹೌದು.. ಬಿಗ್​ಬಾಸ್​​ ರಿಯಾಲಿಟಿ ಶೋ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೀಸನ್​ವೊಂದಕ್ಕೆ ಎರಡನೇ ಇನ್ನಿಂಗ್ಸ್​​ ಸಿಕ್ಕಿದೆ. ಹಾಗಾದ್ರೆ ಮತ್ತೆ ಶುರುವಾಗ್ತಿರುವ ಬಿಗ್​ಬಾಸ್​​​ನಲ್ಲಿ ಹೊಸ ಕಂಟೆಸ್ಟೆಂಟ್ಸ್​​ ಇರ್ತಾರಾ ಅನ್ನೋ ಗೊಂದಲ ನಿಮಗೂ ಮೂಡಿರಬಹುದು. ಜೊತೆಗೆ ಇದು ಸೀಸನ್​ ಎಂಟಾ ಅಥವಾ ಒಂಭತ್ತಾ ಅನ್ನೋ ಪ್ರಶ್ನೆಯೂ ಬರೋದು ಸಹಜ. ಇದಕ್ಕೆಲ್ಲಾ ಉತ್ತರ ನ್ಯೂಸ್​ ಫಸ್ಟ್​​ ಇಂದು ನೀಡಲಿದೆ.

ಬಿಗ್​ಬಾಸ್​​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಬಿಗ್​ಬಾಸ್​ ಸೀಸನ್​ 8 ಮುಂದುವರೆಯಲಿದೆ. ಜೊತೆಗೆ ಲಾಕ್​ಡೌನ್​ ಕಾರಣ ಶೋ ಸ್ಥಗಿತಗೊಂಡಾಗ ಇದ್ದ ಹನ್ನೊಂದು ಜನ ಕಂಟೆಸ್ಟೆಂಟ್​ಗಳು ಹಾಗೂ ದಿವ್ಯಾ ಉರುಡುಗರನ್ನ ಸೇರಿಸಿ ಹನ್ನೆರಡು ಸ್ಪರ್ಧಿಗಳು ಎರಡನೇ ಇನ್ನಿಂಗ್ಸ್​​ನಲ್ಲಿ ಪಾಲ್ಗೊಳ್ಳಲಿದ್ದಾರೆ ಅನ್ನೋ ಮಾಹಿತಿ ಸದ್ಯ ಸಿಕ್ಕಿದೆ. ಅಂದ್ಹಾಗೇ ಬಿಗ್​ಬಾಸ್​ ಪುನರಾರಂಭಗೊಳ್ಳೋ ಬಗ್ಗೆ ಕಲರ್ಸ್​ ಕನ್ನಡ ಬಿಸಿನೆಸ್​ ಹೆಡ್​​ ಪರಮೇಶ್ವರ್​ ಗುಂಡ್ಕಲ್​ ಅಧಿಕೃತ ಮಾಹಿತಿ ನೀಡಿದ್ದಾರೆ.

ಈ ಬಾರಿ ಬಿಗ್​ಬಾಸ್​ ಚೆನ್ನಾಗಿತ್ತು.. ಅರ್ಧಕ್ಕೆ ನಿಲ್ಲಬಾರದಿತ್ತು.. ಕಡೇ ಪಕ್ಷ ವಿನ್ನರ್​ ಯಾರು ಅನ್ನೋದು ಗೊತ್ತಾಗಬೇಕಿತ್ತು ಅಂತ ಹಂಬಲಿಸುತ್ತಿದ್ದವರಿಗೆ ಸದ್ಯ ಇದು ಗುಡ್​ ನ್ಯೂಸ್​ ಆಗಿರಲಿದೆ. ಜೊತೆಗೆ ಚಿತ್ರರಂಗ ಸ್ಥಗಿತಗೊಂಡು ಕಿಚ್ಚನ ಸಿನಿಮಾಗಳು ತೆರೆ ಕಾಣದೇ ಬೇಜಾರಾಗಿದ್ದವರು ಕಿಚ್ಚನನ್ನ ಮತ್ತೆ ಬಿಗ್​ಬಾಸ್​​ ವೇದಿಕೆ ಮೇಲೆ ನೋಡಿ ಸಮಾಧಾನ ಪಟ್ಟುಕೊಳ್ಳಬಹುದು.

The post ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್​ಬಾಸ್​​​ ಸೆಕೆಂಡ್​ ಇನ್ನಿಂಗ್ಸ್​​;​​ ಪುನರಾರಂಭ ಯಾವಾಗ.? appeared first on News First Kannada.

Source: newsfirstlive.com

Source link