ಇತಿಹಾಸ ಪ್ರಸಿದ್ಧ ಮುರುಘಾಮಠದ ಆವರಣದಲ್ಲಿ ಬೃಹತ್‌ ಶಿಲಾಮಂಟಪದ ಕಳಸಾರೋಹಣ

ಇತಿಹಾಸ ಪ್ರಸಿದ್ಧ ಮುರುಘಾಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮುರುಘಾಶ್ರೀ ಬೃಹತ್ ಶಿಲಾಮಂಟಪದ ಕಳಸಾರೋಹಣ ನೆರವೇರಿಸಲಾಯಿತು. ಮುರುಘಾಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು. ಹಳೆಯ ಕಾಲದ ಶಿಥಿಲಾವಸ್ಥೆಯಲ್ಲಿದ್ದ ಈ ಬೃಹತ್ ಗೋಪುರವನ್ನು ಮತ್ತೆ ಮರುನಿರ್ಮಾಣ ಮಾಡುವ ಮೂಲಕ ಮಠದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಬಂದಂತಾಗಿದೆ.

ಶ್ರೀಮಠದ ಶಾಲಾ ವಿದ್ಯಾರ್ಥಿಗಳು ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಸೇರಿದಂತೆ ಮಾದಾರಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರಗುರು ಮುರುಘರಾಜೇಂದ್ರ ಸ್ವಾಮೀಜಿ ಮುಂತಾದ ಹರಗುರು ಚರಮೂರ್ತಿಗಳು, ಶರಣ ಸಂಸ್ಕೃತಿ ಉತ್ಸವ-2021ರ ಅಧ್ಯಕ್ಷರಾದ ಕೆ.ಎಸ್.ನವೀನ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿಗಳಾದ ಎ ಜೆ ಪರಮಶಿವಯ್ಯ, ಇಂಜಿನಿಯರುಗಳಾದ ಬಿ ಎಂ ಜಗದೀಶ್, ಚೇತನ್ ಕುಮಾರ್, ಬಸವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

News First Live Kannada

Leave a comment

Your email address will not be published. Required fields are marked *