ಭಾರತೀಯ ಮಹಿಳೆಯರು ವಿದೇಶಗಳಲ್ಲಿ ಅದ್ರಲ್ಲೂ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಮಹತ್ತರ ಸಾಧನೆಗಳನ್ನ ಮಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವರ್ಜಿನ್ ಸಂಸ್ಥೆಯಿಂದ ನಡೆದ ಸ್ಪೇಸ್ ಟ್ರಿಪ್​ನಲ್ಲಿ ಆಂಧ್ರದ ಗುಂಟೂರು ಮೂಲಕ ಶಿರಿಶಾ ಬಾಂಡ್ಲೆ ಭಾಗಿಯಾಗುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

ರಿಚರ್ಡ್ ಬ್ರಾನ್ಸನ್​ರ ಕನಸಿನ ಯಾನದ ಬೆನ್ನಲ್ಲೇ ಇದೀಗ ಬ್ಲೂ ಒರಿಜಿನ್ ಸಂಸ್ಥೆಯ ಮಾಲೀಕ ಜೆಫ್ ಬೆಜೋಸ್ ಸ್ಪೇಸ್ ಟ್ರಿಪ್ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ತಾವೂ ಸಹ ಇತಿಹಾಸ ಬರೆಯಲು ನಿರ್ಧರಿಸಿದ್ದಾರೆ. ವಿಶೇಷ ಅಂದ್ರೆ ಬ್ಲೂ ಒರಿಜಿನ್ ಸಂಸ್ಥೆಯ ಇಂಜಿನಿಯರ್​ಗಳ ಟೀಂನಲ್ಲೂ ಭಾರತೀಯ ಮೂಲದ ಮಹಿಳೆ ಇದ್ದಾರೆ. ಜೆಫ್ ಬೆಜೋಸ್ ಸ್ಪೇಸ್ ಟ್ರಿಪ್​ಗೆ ಹೊರಡಲಿರುವ ಬ್ಲೂ ಒರಿಜಿನ್ ಸಬ್​ ಆರ್ಬಿಟಲ್ ಸ್ಪೇಸ್ ರಾಕೆಟ್​​ ನ್ಯೂ ಶೆಫರ್ಡ್ ನಿರ್ಮಾಣ ಮಾಡಿದ್ದು ಇದೇ ಎಂಜಿನಿಯರ್ ಟೀಂ.

ಮಹಾರಾಷ್ಟ್ರ ಮೂಲದ ಸಂಜಲ್ ಗವಾಂಡೆ ಬ್ಲೂ ಒರಿಜಿನ್​ನಲ್ಲಿ ಎಂಜಿನಿಯರ್ ಆಗಿದ್ದಾರೆ. ಇವರು ಮಹಾರಾಷ್ಟ್ರದ ಕಲ್ಯಾಣ್-ದೊಬಿವ್ಲಿ ಕಾರ್ಪೋರೇಷನ್​ನ ನಿವೃತ್ತ ಉದ್ಯೋಗಿ ಅಶೋಕ್ ಗವಾಂಡೆಯವರ ಪುತ್ರ. ಮುಂಬೈನ ಯೂನಿವರ್ಸಿಟಿಯೊಂದರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್​ನಲ್ಲಿ ಬ್ಯಾಚುಲರ್ ಡಿಗ್ರಿ ಮುಗಿಸಿದ ಸಂಜಲ್ ಯುಎಸ್​ಗೆ ತೆರಳಿ ಮಿಚಿಗನ್ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್​ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಮಾಸ್ಟರ್ಸ್ ಮುಗಿಸಿದ ನಂತರ ಮರ್ಕ್ಯುರಿ ಮರೈನ್​ನಲ್ಲಿ ಕೆಲಸ ಮಾಡಿದ್ದಾರೆ. ನಂತರ ಟಿಯೋಟ ರೇಸಿಂಗ್ ಡೆವಲೆಪ್​ಮೆಂಟ್​​ ನಲ್ಲೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಟ್ರಿಪ್ ಟು ಸ್ಪೇಸ್: ಬಾಹ್ಯಾಕಾಶಕ್ಕೆ ಹಾರಲಿದ್ದಾಳೆ ಗುಂಟೂರಿನ ಮಹಿಳೆ

2016 ರಲ್ಲಿ ಪೈಲಟ್ ಲೈಸೆನ್ಸ್ ಪಡೆದ ಸಂಜಲ್ ನಾಸಾದಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದರಂತೆ.. ಆದ್ರೆ ಪೌರತ್ವ ಸಮಸ್ಯೆ ಎದುರಾಗಿ ಅಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರ ತಾಯಿ ಹೇಳಿದ್ದಾರೆ. ನಂತರ ಸಂಜಲ್ ನೇರ ಬ್ಲೂ ಒರಿಜಿನ್ ಸಂಸ್ಥೆಯಲ್ಲಿ ಸಿಸ್ಟಮ್ ಎಂಜಿನಿಯಿರ್ ಆಗಿ ಕೆಲಸ ಪ್ರಾರಂಭಿಸಿದ್ದಾರೆ.

ಇನ್ನು ಸಂಜಲ್ ಅವರ ತಾಯಿಗೆ ಕೆಲವರು ನಿಮ್ಮ ಮಗಳು ಹೆಣ್ಣುಮಗಳು.. ಆಕೆಗೇಕೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಎಂದು ಕೇಳಿದ್ದರಂತೆ.. ಇದರಿಂದ ಅವರ ತಾಯಿಯೂ ಸಹ ನನ್ನ ಮಗಳಿಂದ ಇಂಥ ಕೆಲಸವೆಲ್ಲಾ ಸಾಧ್ಯವಾ ಎಂದು ಚಿಂತಿಸಿದ್ದರಂತೆ. ಇದೀಗ ಸಂಜಲ್ ಮಹತ್ತರ ಸಾಧನೆ ಮಾಡುವ ಮೂಲಕ ತಂದೆ ತಾಯಿಯನ್ನಷ್ಟೇ ಅಲ್ಲದೇ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾಳೆ.. ಅವಳಿಗೆ ಏರೋಸ್ಪೇಸ್ ಡಿಸೈನ್ ಮಾಡಬೇಕೆಂಬ ಆಸೆಯಿತ್ತು.. ಆ ಕನಸನ್ನ ಇದೀಗ ಆಕೆ ನಿಜ ಮಾಡಿಕೊಂಡಿದ್ದಾಳೆಂದು ಅವರ ತಾಯಿ ಕಣ್ತುಂಬಿಕೊಂಡಿದ್ದಾರೆ.

The post ಇತಿಹಾಸ ಬರೆಯಲಿದೆ ಜೆಫ್​ ಬೆಜೋಸ್​ರ ‘ಸ್ಪೇಸ್​ ಟ್ರಿಪ್’​.. ಈ ಕನಸು ನನಸಾಗಲು ಭಾರತೀಯಳೂ ಕಾರಣ appeared first on News First Kannada.

Source: newsfirstlive.com

Source link