ಲಂಡನ್​ನ ರಾಣಿ ಎಲಿಜಬೆತ್ 2 ಇತ್ತೀಚೆಗಷ್ಟೇ ತಮ್ಮ ಪತಿ ಪ್ರಿನ್ಸ್ ಫಿಲಿಪ್​ ಅವರನ್ನ ಕಳೆದುಕೊಂಡು ಶೋಕದಲ್ಲಿದ್ದಾರೆ. ಈ ಮಧ್ಯೆ ರಾಣಿಯ ಮುದ್ದು ನಾಯಿಮರಿಯೊಂದು ಸಹ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ಸದ್ಯ ರಾಣಿ ಅತ್ಯಂತ ನೋವಿನಲ್ಲಿದ್ದಾರಂತೆ.

ಕಳೆದ ತಿಂಗಳಷ್ಟೇ ಪತಿಯನ್ನ ಕಳೆದುಕೊಂಡ ರಾಣಿ ಎಲಿಜಬೆತ್ ಅವರ ಮುದ್ದಿನ ನಾಯಿಮರಿ ಫೆರ್ಗುಸ್ ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ. ಫೆರ್ಗುಸ್ ಮತ್ತು ಮ್ಯುಕ್ ಹೆಸರಿನ ನಾಯಿಮರಿಗಳನ್ನ ಅವರ ಪುತ್ರ ಪ್ರಿನ್ಸ್ ಆ್ಯಂಡ್ರ್ಯೂ ತಮ್ಮ ತಾಯಿಗೆ ಉಡುಗೊರೆಯಾಗಿ ನೀಡಿದ್ದರಂತೆ. ಈ ನಾಯಿಮರಿಗಳು ಕೊರ್ಗಿಸ್ ಮತ್ತು ದ್ಯಾಚ್​​ಶುಂಡ್ಸ್ ತಳಿಯ ನಾಯಿಮರಿಗಳು ಎನ್ನಲಾಗಿದೆ.

ಈ ಹಿಂದೆ ಕೊರ್ಗಿಸ್ ತಳಿಯ ಶ್ವಾನ ರಾಣಿಯ ಅಚ್ಚುಮೆಚ್ಚಿನ ಶ್ವಾನವಾಗಿತ್ತು ಎನ್ನಲಾಗಿದೆ. ಆದ್ರೆ ತಮಗೆ ವಯಸ್ಸಾದಂತೆ ಅದನ್ನ ಬಿಟ್ಟು ಫೆರ್ಗುಸ್ ಮತ್ತು ಮ್ಯುಕ್​ನ್ನು ಹಚ್ಚಿಕೊಂಡಿದ್ದರಂತೆ.

ಇದನ್ನೂ ಓದಿ: ಲಂಡನ್ ಕ್ವೀನ್ ಎಲಿಜಬೆತ್-2 ಪತಿ 99 ವರ್ಷದ ಪ್ರಿನ್ಸ್ ಫಿಲಿಪ್ ವಿಧಿವಶ

The post ಇತ್ತೀಚೆಗಷ್ಟೇ ಪತಿಯನ್ನ ಕಳೆದುಕೊಂಡ ರಾಣಿ ಎಲಿಜಬೆತ್​ರ ಮುದ್ದಿನ ಶ್ವಾನವೂ ಸಾವು appeared first on News First Kannada.

Source: newsfirstlive.com

Source link