ಮೈಸೂರು: ಕೋಟಿ ಕೋಟಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಹಿಳೆಯನ್ನು ವಶಕ್ಕೆ ಪಡೆದಿರುವ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಟ ದರ್ಶನ್ ಅವರು, ಇದರ ಹಿಂದೆ ಯಾರೇ ಇದ್ದರೂ ಯಾರನ್ನೂ ನಾನು ಬಿಡೋದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್​ ಅವರು, ಬರೋಬ್ಬರಿ ಒಂದು ತಿಂಗಳ ಹಿಂದೆ ಘಟನೆ ನಡೆಯಿತು. ನನ್ನ ಸ್ನೇಹಿತ ಮೇಲೆ ಗೂಬೆ ಕೂರಿಸಲು ಯಾರೋ ಯತ್ನಿಸಿದ್ದಾರೆ. ಘಟನೆ ಏನಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ನನ್ನ ಬಳಿ ಹೇಗೆ ಬಂದ್ರು ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈಗ ವಿಚಾರಣೆ ನಡೆಯುತ್ತಿದ್ದು, ಎಲ್ಲಾ ಮಾಹಿತಿಯನ್ನು ವಿಚಾರಣೆ ಬಳಿಕ ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದರು.

ಪ್ರಕರಣಕ್ಕೆ ರೆಕ್ಕೆ-ಪುಕ್ಕ ಬರುವ ಮುನ್ನ ಮಾಹಿತಿ ನೀಡಿ ಎಂದು ಮಾಧ್ಯಮದವರು ಕೇಳಿದಾಗ.. ಉತ್ತರಿಸಿದ ದರ್ಶನ್​ ಅವರು, ನಾನು ಕೇವಲ ರೆಕ್ಕೆಯಲ್ಲ. ನಾನು ತಲೆಯನ್ನೇ ಕಟ್​ ಮಾಡುವವನು. ಆದ್ದರಿಂದ ವಿಚಾರಣೆ ನಡೆಯಲಿ, ಇದರ ಹಿಂದೆ ಯಾರೇ ಇದ್ದರೂ ಯಾರನ್ನೂ ನಾನು ಬಿಡೋದಿಲ್ಲ ಎಂದರು.

The post ಇದರ ಹಿಂದೆ ಯಾರೇ ಇದ್ದರೂ ನಾನು ಬಿಡೋದಿಲ್ಲ.. ರೆಕ್ಕೆಯಲ್ಲ ನಾನು ತಲೆಯನ್ನೇ ಕಟ್ ಮಾಡುವವನು -ನಟ ದರ್ಶನ್​ appeared first on News First Kannada.

Source: newsfirstlive.com

Source link