ಇದುವರೆಗೆ ಬಾಡಿಗೆಗೆ ಸಿಗುತ್ತಿದ್ದ ಬೌನ್ಸ್ ಸ್ಕೂಟರ್ ಹೊಸ ರೂಪದಲ್ಲಿ ಖರೀದಿಗೆ ಸಿಗಲಿದೆ, ಡಿಸೆಂಬರ್ 2 ರಿಂದ ಮುಂಗಡ ಬುಕಿಂಗ್ ಶುರು | Bounce to launch electric scooter soon, advance booking gets underway from December 2


ಸೆಲ್ಫ್-ಡ್ರೈವ್ ಬೈಕ್ ಆಗಿ ಮಾರುಕಟ್ಟೆ ಪ್ರವೇಶಿಸಿದ ಬೌನ್ಸ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗುವ ನಿರ್ಧಾರಕ್ಕೆ ಬಂದಿದೆ. ಓಲಾ ಸಂಸ್ಥೆಯು ಎರಡು ಬಗೆಯ ಇಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ್ದನ್ನು ನಾವು ಈಗಾಗಲೇ ಚರ್ಚಿಸಿದ್ದೇವೆ. ಎರಡು ತಿಂಗಳು ಹಿಂದೆಯೇ, ಬೆಂಗಳೂರು ಮೂಲದ ಸಂಸ್ಥೆಯು ಸ್ಕೂಟರ್ಗಳಿಗೆ ಬುಕಿಂಗ್ ಆರಂಭಿಸಿ ಪ್ರಾಯಶಃ ಅವುಗಳ ಡೆಲಿವರಿಯನ್ನೂ ಆರಂಭಿಸಿರಬಹುದು. ಬೌನ್ಸ್ ಸಂಸ್ಥೆಯು ಓಲಾ ಜೊತೆ ಪೈಪೋಟಿಗಿಳಿಯಲು ನಿರ್ಧರಿಸಿರುವಂತಿದೆ. ಇದುವರೆಗೆ ತನ್ನ ಸ್ಕೂಟರ್ಗಳನ್ನು ಬಾಡಿಗೆಗೆ ಕೊಡುತ್ತಿದ್ದ ಅದು ಇನ್ನು ಮಾರಾಟ ಸಹ ಮಾಡಲಿದೆ.

ಸ್ಕೂಟರ್​ಗೆ ಇನ್ಫಿನಿಟಿ ಅಂತ ಹೆಸರಿಡಲಾಗಿದೆ ಅಂತ ಬೌನ್ಸ್ ಸಂಸ್ಥೆಯ ಮೂಲಗಳಿಂದ ಗೊತ್ತಾಗಿದೆ. ಈ ಕಂಪನಿಯ ಉತ್ಪಾದನಾ ಘಟಕ ರಾಜಸ್ತಾನದಲ್ಲಿದೆ. ವರ್ಷಕ್ಕೆ 2 ಲಕ್ಷ ಸ್ಕೂಟರ್ಗಳನ್ನು ಲಕ್ಷ್ಯ ಕಂಪನಿಗಿದೆ. ಬೌನ್ಸ್ ಸ್ಕೂಟರ್ಗಳು ಎರಡು ಬಣ್ಣಗಳಲ್ಲಿ ರಸ್ತೆಗಿಳಿಯಲಿವೆ-ಬಿಳಿ ಮತ್ತು ಕೆಂಪು.

ಅಂದಹಾಗೆ, ಸುಂದರವಾದ ವಿನ್ಯಾಸದೊಂದಿಗೆ ಮಾರ್ಕೆಟ್​ಗೆ ಲಗ್ಗೆ ಇಡಲಿರುವ ಬೌನ್ಸ್ ಸ್ಕೂಟರ್​ಗಳು ಒಮ್ಮೆ ಚಾರ್ಜ್ ಮಾಡಿದರೆ, 80-85 ಕಿಮೀವರೆಗೆ ಓಡುತ್ತವಂತೆ. ನಿಮಗೆ ಸ್ಕೂಟರ್ ಇಷ್ಟವಾಗಿದ್ದರೆ, ಅದನ್ನು ಡಿಸೆಂಬರ್ ಎರಡರಿಂದ ಬುಕ್ ಮಾಡಬಹುದು. ಕಂಪನಿಯು ಬುಕಿಂಗ್ ಮೊತ್ತವನ್ನು ರೂ. 499 ಕ್ಕೆ ನಿಗದಿಪಡಿಸಿದೆ.

ನಮಗೆ ಗೊತ್ತು, ಗಾಡಿಯ ಬೆಲೆ ಎಷ್ಟು ಅನ್ನೋದು ನಿಮ್ಮ ಕುತೂಹಲ. ಅದನ್ನು ಸಂಸ್ಥೆ ಇದುವರೆಗೆ ಬಹಿರಂಗಪಡಿಸಿಲ್ಲ. ಗೊತ್ತಾಗುತ್ತಿದ್ದಂತೆ ನಾವೇ ನಿಮಗೆ ಮೊದಲು ತಿಳಿಸೋದು.

TV9 Kannada


Leave a Reply

Your email address will not be published. Required fields are marked *