‘ಇದು ಅಸಂಬದ್ಧ’: ಪಂಜಾಬ್ ಸಿಎಂ ಭಯ್ಯಾಸ್ ಹೇಳಿಕೆಗೆ ಬಿಹಾರ ಸಿಎಂ ನಿತೀಶ್ ಪ್ರತಿಕ್ರಿಯೆ | Bihar CM Nitish Kumar hits out Punjab CM Charanjit Singh Channi over bhaiyas comment


‘ಇದು ಅಸಂಬದ್ಧ’: ಪಂಜಾಬ್ ಸಿಎಂ ಭಯ್ಯಾಸ್ ಹೇಳಿಕೆಗೆ ಬಿಹಾರ ಸಿಎಂ ನಿತೀಶ್ ಪ್ರತಿಕ್ರಿಯೆ

ನಿತೀಶ್ ಕುಮಾರ್

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಗುರುವಾರ ಪಂಜಾಬ್ (Punjab) ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ (Charanjit Singh Channi) ಅವರ “ಭಯ್ಯಾಸ್” (ವಲಸಿಗರು) ಕುರಿತು ಮಾಡಿದ ಟೀಕೆಗಳನ್ನು ಖಂಡಿಸಿದ್ದು, ಇದು ಭಯಾನಕ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಬಿಹಾರದ ಜನರು ಪಂಜಾಬ್‌ಗೆ ಎಷ್ಟು ಸೇವೆ ಸಲ್ಲಿಸಿದ್ದಾರೆಂದು ಚನ್ನಿ ಅವರಿಗೆ ತಿಳಿದಿಲ್ಲವೇ ಎಂದು ಕೇಳಿದರು. ಇದು ಅಸಂಬದ್ಧ. ಜನರು ಅಂತಹ ವಿಷಯಗಳನ್ನು ಹೇಗೆ ಹೇಳಬಹುದು ಎಂದು ನನಗೆ ಗಾಬರಿಯಾಗಿದೆ. ಅಲ್ಲಿ (ಪಂಜಾಬ್‌ನಲ್ಲಿ) ಬಿಹಾರದಿಂದ ಎಷ್ಟು ಜನರು ವಾಸಿಸುತ್ತಿದ್ದಾರೆ ಮತ್ತು ಅವರು ಆ ಭೂಮಿಗೆ ಎಷ್ಟು ಸೇವೆ ಸಲ್ಲಿಸಿದ್ದಾರೆಂದು ಚನ್ನಿಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿಯ “ಭಯ್ಯಾ” ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡಬೇಡಿ ಎಂದು ಚನ್ನಿ ಪಂಜಾಬ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಜನರನ್ನು ಕೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು . ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ರೂಪನಗರದಲ್ಲಿ ರೋಡ್‌ಶೋನಲ್ಲಿ ಟೀಕೆಗಳನ್ನು ಮಾಡಿದಾಗ ಚನ್ನಿ ಪಕ್ಕದಲ್ಲಿ ಚಪ್ಪಾಳೆ ತಟ್ಟುತ್ತಿದ್ದರು.

ಪ್ರಿಯಾಂಕಾ ಗಾಂಧಿ ಪಂಜಾಬ್‌ನ ಸೊಸೆ. ಇಲ್ಲಿ ಆಡಳಿತ ನಡೆಸಲು ಬಂದಿರುವ ‘ಉತ್ತರ ಪ್ರದೇಶ, ಬಿಹಾರ, ದೆಹಲಿ ದೇ ಭಯ್ಯಾಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಚನ್ನಿ ಹೇಳಿಕೆ ನೀಡಿದ್ದು, ಇದು ಆಪ್ ನಾಯಕರನ್ನು ಗುರಿಯಾಗಿಸಿಕೊಂಡಿದೆ. ಈ ಹೇಳಿಕೆ ಪ್ರತಿಪಕ್ಷ ಬಿಜೆಪಿ, ಅಕಾಲಿದಳ ಮತ್ತು ಎಎಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು “ತುಂಬಾ ನಾಚಿಕೆಗೇಡು” ಎಂದು ಬಣ್ಣಿಸಿದ್ದಾರೆ.

ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡ ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.  “ಪ್ರಿಯಾಂಕಾ ಗಾಂಧಿ ಯುಪಿಯಿಂದ ಬಂದವರು ಎಂದು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಹೇಳಿದ್ದಾರೆ. ಅದೇ ವೇಳೆ ಕೇಜ್ರಿವಾಲ್, ಹಾಗಾದರೆ ಪ್ರಿಯಾಂಕಾ ಕೂಡಾ ಭಯ್ಯಾ ಎಂದಿದ್ದಾರೆ.

ಈ ವಿಡಿಯೊವನ್ನು ಶೇರ್ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕಾ ಗಾಂಧಿಯನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ಅವರು, “ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶಕ್ಕೆ ಹೋಗಿ ತನ್ನನ್ನು ಯುಪಿ ಕೀ ಬೇಟಿ (ಯುಪಿಯ ಮಗಳು) ಎಂದು ಕರೆದುಕೊಳ್ಳುತ್ತಾರೆ ಮತ್ತು ಪಂಜಾಬ್‌ನಲ್ಲಿ ಯುಪಿ-ಬಿಹಾರ ಜನರು ಅವಮಾನಿಸಿದಾಗ ಚಪ್ಪಾಳೆ ತಟ್ಟುತ್ತಾರೆ. ಇದು ಅವರ ಡಬಲ್ ಫೇಸ್ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *