‘ಇದು ಎಕ್ಸ್​​ಟ್ರಾ ಬಜೆಟ್​​ನ ನಾಗಿಣಿ ಧಾರಾವಾಹಿ’; ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದವರು ಹೀಗಂದ್ರು | Brahmastra Movie Review Ranbir Kapoor And Alia Bhatt Movie get mixed response on twitter


ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇದೇ ಮೊದಲ ಬಾರಿಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾದಲ್ಲಿ ಹಲವು ಸ್ಟಾರ್​ ನಟರು ಅತಿಥಿ ಪಾತ್ರ ಮಾಡಿದ್ದಾರೆ.

ಸತತ ಸೋಲು ಕಾಣುತ್ತಿರುವ ‘ಬ್ರಹ್ಮಾಸ್ತ್ರ’ ಸಿನಿಮಾಗೆ (Brahmastra Movie) ಬಲ ತುಂಬಲು ಹಲವು ಹೀರೋಗಳು, ನಿರ್ದೇಶಕರು ಪ್ರಯತ್ನಿಸಿ ಸೋತಿದ್ದಾರೆ. ಅಕ್ಷಯ್ ಕುಮಾರ್, ಆಮಿರ್ ಖಾನ್​ರಂತಹ ಘಟಾನುಘಟಿ ನಟರ ಸಿನಿಮಾಗಳೇ ಸೋತು ಸುಣ್ಣವಾಗಿದೆ. 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಂದರ್ಭದಲ್ಲಿ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇದೇ ಮೊದಲ ಬಾರಿಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾದಲ್ಲಿ ಹಲವು ಸ್ಟಾರ್​ ನಟರು ಅತಿಥಿ ಪಾತ್ರ ಮಾಡಿದ್ದಾರೆ. ಬಾಲಿವುಡ್​ನ ಸ್ಟಾರ್ ನಟ ಶಾರುಖ್ ಖಾನ್ ಕೂಡ ಈ ಚಿತ್ರದಲ್ಲಿ ಬಂದು ಹೋಗುತ್ತಾರೆ. ಈ ಸಿನಿಮಾಗೆ ಕೆಲವರು ಒಳ್ಳೆಯ ರೇಟಿಂಗ್ ನೀಡಿದರೆ, ಇನ್ನೂ ಕೆಲವರು ಚಿತ್ರವನ್ನು ತೆಗಳಿದ್ದಾರೆ.

‘ಬ್ರಹ್ಮಾಸ್ತ್ರ’ ಸಿನಿಮಾದ ಟ್ರೇಲರ್ ನೋಡಿದವರಿಗೆ ಗ್ರಾಫಿಕ್ಸ್ ಬಗ್ಗೆ ಅನುಮಾನ ಮೂಡಿತ್ತು. ಗ್ರಾಫಿಕ್ಸ್ ಉತ್ತಮವಾಗಿಲ್ಲ ಎಂಬ ಮಾತುಗಳು ಕೇಳಿ ಬಂದವು. ಅದು ನಿಜವಾಗಿದೆ. ಸಿನಿಮಾ ನೋಡಿದ ಅನೇಕರಿಗೆ ಗ್ರಾಫಿಕ್ಸ್ ಇಷ್ಟ ಆಗಲೇ ಇಲ್ಲ. ‘ಬ್ರಹ್ಮಾಸ್ತ್ರ’ ಬರೋಬ್ಬರಿ 410 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡಿದೆ. ಬಜೆಟ್​ಗೆ ಹೋಲಿಕೆ ಮಾಡಿದರೆ ಸಿನಿಮಾದ ಗ್ರಾಫಿಕ್ಸ್ ಕಳಪೆಯಾಗೇ ಇದೆ ಎಂದು ಕೆಲವರು ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. ‘ಇದು ಎಕ್ಸ್​ಟ್ರಾ ಬಜೆಟ್​ನ ನಾಗಿಣಿ ಧಾರಾವಾಹಿ’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇನ್ನೂ ಕೆಲವರಿಗೆ ಸಿನಿಮಾ ಇಷ್ಟವಾಗಿದೆ. ‘ಇದು ನಿಜಕ್ಕೂ ಒಂದೊಳ್ಳೆಯ ವಿಶ್ಯುವಲ್ ಟ್ರೀಟ್. ನಿರ್ದೇಶಕ ಅಯಾನ್ ಮುಖರ್ಜಿ ಅವರ ಆಲೋಚನೆ ನಿಜಕ್ಕೂ ಗ್ರೇಟ್​. ಈ ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡಲಿದೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.

TV9 Kannada


Leave a Reply

Your email address will not be published.