ಬಾಲಿವುಡ್ನ ಸೆಲೆಬ್ರಿಟಿ ಜೋಡಿ ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರ್ತಾನೆ ಇದೆ. ದೇಶದಲ್ಲಿ ಸಾಕಷ್ಟು ಸದ್ದು ಮಾಡಿರೋ ಇಬ್ಬರ ವಿವಾಹ ವಿಷ್ಯ ಈಗ ಅತಿಥಿಗಳಿಗೆ ಬೇಸರ ಮೂಡಿಸುವಂತೆ ಮಾಡಿದೆ. ಅರೆ.. ಅಷ್ಟು ದೊಡ್ಡ ಸ್ಟಾರ್ಗಳ ಮದುವೆಗೆ ಹೋದ್ರೆ ಸಾಕಪ್ಪ ಅಂತಾರೆ ಸೆಲೆಬ್ರಿಟಿಗಳು, ಅಂತದ್ರಲ್ಲಿ, ಕತ್ರಿನಾ ವಿಕ್ಕಿ ಮ್ಯಾರೇಜ್ ವಿಚಾರದಲ್ಲಿ ಬೇಜಾರಾಗೋದು ಏನಿದೆ ಅಂತಾ ಕೇಳ್ತೀರಾ? ಇದಕ್ಕೆಲ್ಲಾ ಕಾರಣವೇ ಇಬ್ಬರ ಕಂಡೀಷನ್ಗಳು.
ಬಾಲಿವುಡ್ ಅಂಗಳದಲ್ಲಿ ಹೆಚ್ಚಿನ ತೂಕದೊಂದಿಗೆ ಹಾರಾಡುತ್ತಿರುವ ಸುದ್ದಿ ಒಂದೇ. ಅದು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಹಾಗೂ ಉರಿ ಸಿನಿಮಾ ಖ್ಯಾತಿಯ ವಿಕ್ಕಿ ಕೌಶಲ್ ಮದುವೆ. ದೇಶದ ಸಿನಿಸಾಮ್ರಾಜ್ಯದಲ್ಲಿ ದೊಡ್ಡ ಹೆಸರು ಮಾಡಿ ಪ್ರಣಯ ಲೋಕದಲ್ಲಿ ಚಿಟ್ಟೆಗಳಂತೆ ಹಾರಾಡ್ತಿರೊ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಪ್ತಪದಿ ತುಳಿಯುವ ಕಾಲ ಸನ್ನಿಹಿತವಾಗಿದೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮ್ಯಾರೇಜ್ ಮ್ಯಾಟರ್, ಭರ್ಜರಿ ಸದ್ದು ಮಾಡ್ತಿದೆ. ಈ ತಾರಾ ಜೋಡಿಯ ಕುರಿತು, ಈ ಜೋಡಿಯ ಮದುವೆಯ ಕುರಿತು ಹೊಸ ಹೊಸ ಸುದ್ದಿಗಳು ದಿನೇ ದಿನೇ ಬಾಲಿವುಡ್ ಅಂಗಳದಲ್ಲಿ ರೆಕ್ಕೆ ಪುಕ್ಕೆಗಳೊಂದಿಗೆ ಹಾರಾಡ್ತಿದ್ದವು. ಆದ್ರೆ, ಆ ಎಲ್ಲಾ ಅಂತೆ ಕಂತೆಗಳಿಗೂ ಫುಲ್ಸ್ಟಾಪ್ ಬಿದ್ದಿದ್ದು, ಇಬ್ಬರ ಕಲ್ಯಾಣಕ್ಕೂ ಡಿಸೆಂಬರ್ 9ರ ಮುಹೂರ್ತ ಫಿಕ್ಸ್ ಆಗಿದೆ.
ಸ್ಟಾರ್ಗಳ ಮದುವೆ ಅಂದ್ರೆ ದೊಡ್ಡ ದೊಡ್ಡ ಗೆಸ್ಟ್ಗಳು ಬರೋದು ಕಾಮನ್, ಅದ್ರಲ್ಲೂ ಕತ್ರಿನಾ ಮದುವೆಗೆ ಇಡೀ ಬಾಲಿವುಡ್ ಇಂಡಸ್ಟ್ರಿಯ ಸಮಾಗಮವಾಗುವ ಸಾಧ್ಯತೆ ಇತ್ತು. ಬಟ್, ಅನೇಕ ಕಾರಣಗಳಿಂದ ಕ್ಯಾಟ್ ವಿಕ್ಕಿ ತಮ್ಮ ಮದುವೆಗೆ ಆಪ್ತ ಅತಿಥಿಗಳಿಗಷ್ಟೇ ಆಹ್ವಾನ ನೀಡಿದ್ದಾರೆ. ಅವರು ಯಾರನ್ನ ಬೇಕಾದ್ರೂ ಕರೆಯಲಿ ಅವರ ಮದುವೆ ಅವರಿಷ್ಟ ಅಂತಾ ನೀವು ಅಂದುಕೊಳ್ಳಬಹುದು, ಬಟ್.. ಈಗ ಸಮಸ್ಯೆಯಾಗಿರೋದೇ ಅತಿಥಿಗಳಿಗೆ ಇಬ್ಬರೂ ಕೊಟ್ಟಿರೋ ಇನ್ವಿಟೇಷನ್ ಆ ಇನ್ವಿಟೇಷನ್ನಲ್ಲಿರೋ ಕಂಡೀಷನ್ಸ್..
ಬಾಲಿವುಡ್ನ ಬಳುಕುವ ಬಳ್ಳಿ ಕತ್ರಿನಾ ಕೈಫ್ ಹಾಗೂ ಪ್ರತಿಭಾನ್ವಿತ ನಟ ವಿಕ್ಕಿ ಕೌಶಲ್ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಕಳೆದ ಹಲವು ತಿಂಗಳಿನಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಲೇ ಇತ್ತು. ಪ್ರೇಮದ ಹಕ್ಕಿಗಳು ಡಿಸೆಂಬರ್ 9 ರಂದು ಮದುವೆಯ ಪಲ್ಲಕ್ಕಿ ಏರಲು ರೆಡಿಯಾಗಿದ್ದಾರೆ. ಮದುವೆಯ ಹೊಸ್ತಿಲಲ್ಲಿರುವ ಈ ಜೋಡಿ, ತಮ್ಮ ಮದುವೆಗೆ ಬರುವ ಅತಿಥಿಗಳಿಗೆ ಹೊಸ ರೂಲ್ಸ್ ಹಾಕಿದ್ದಾರೆ. ಕಂಡೀಷನ್ ರಿಜೆಕ್ಟ್ ಮಾಡಿದ್ರೆ ಮದುವೆಗೆ ನೋ ಎಂಟ್ರಿ ಎನ್ನಲಾಗಿದೆ.
‘ಸಪ್ತ’ ಷರತ್ತುಗಳು
- ಕಂಡೀಷನ್-1: ಕತ್ರಿನಾ-ವಿಕ್ಕಿಕೌಶಲ್ ಮದುವೆಯಲ್ಲಿ ಭಾಗವಹಿಸುವ ಗಣ್ಯರು ತಾವು ಕತ್ರಿನಾ-ವಿಕ್ಕಿಕೌಶಲ್ ಮದುವೆಗೆ ಹೋಗುತ್ತಿದ್ದೇನೆಂದು ಎಲ್ಲೂ ಯಾರು ಜೊತೆನೂ ಶೇರ್ ಮಾಡುವಂತಿಲ್ಲ. ಮದುವೆ ವೆನ್ಯೂ ಬಗ್ಗೆ ಯಾರಿಗೂ ಮಾಹಿತಿ ನೀಡುವಂತಿಲ್ಲ. ಎಲ್ಲವೂ ಸೀಕ್ರೆಟ್ ಆಗಿಯೇ ಇರುವಂತೆ ಕಂಡೀಷನ್ ವಿಧಿಸಿದೆ.
- ಕಂಡೀಷನ್-2: ತಮ್ಮ ಮದುವೆಯನ್ನ ಸಾಕಷ್ಟು ಖಾಸಗಿಯಾಗಿ ನಡೆಸಲು ತೀರ್ಮಾನಿಸಿದೆ ಈ ಜೋಡಿ. ಇದೇ ಕಾರಣಕ್ಕೆ ಮದುವೆಯಲ್ಲಿ ಭಾಗವಹಿಸುವ ಗಣ್ಯರಿಗೆ ಮದುವೆಯ ವೆನ್ಯೂ ಬಗ್ಗೆ ಯಾರ ಜೊತೆನೂ ಮಾತ್ನಾಡುವಂತಿಲ್ಲ ಎಂದು ಷರತ್ತು ವಿಧಿಸಿದೆ. ಆಹ್ವಾನಿತ ಅತಿಥಿಗಳಿಗೆ ಸೀಕ್ರೆಟ್ ಕೋಡ್ ನೀಡಲಾಗುತ್ತದೆಯಂತೆ. ಮದುವೆಯ ಸ್ಥಳ ಮತ್ತು ಸಂಭ್ರಮಾಚರಣೆಗೆ ಈ ಗುಪ್ತ ಕೋಡ್ ಇದ್ದರೆ ಮಾತ್ರ ಪ್ರವೇಶ ಸಿಗಲಿದೆ ಎನ್ನಲಾಗಿದೆ.
- ಕಂಡೀಷನ್-3: ಸೆಲೆಬ್ರಿಟಿಗಳ ಮದುವೆಗಳಲ್ಲಿ ಕಾಮನ್ ಆಗಿರುವ ‘ನೋ ಫೋನ್ ಪಾಲಿಸಿ’ ವಿಕ್ಕಿ-ಕತ್ರಿನಾ ಮದುವೆಯಲ್ಲೂ ಕಟ್ಟುನಿಟ್ಟಾಗಿ ಪಾಲನೆಯಾಗಲಿದೆಯಂತೆ. ತಮ್ಮ ಮದುವೆಯಲ್ಲಿ ಯಾರೆಲ್ಲಾ ಭಾಗವಹಿಸಬೇಕು ಅನ್ನೋದರ ಲಿಸ್ಟ್ ರೆಡಿ ಮಾಡಿರುವ ಈ ಜೋಡಿ, ತಮ್ಮ ಮದುವೆಗೆ ಆಗಮಿಸುವ ಗಣ್ಯರಿಗೆ ಮೊಬೈಲ್ ತರುವಂತಿಲ್ಲ ಎಂದು ಕಂಡೀಷನ್ ಹಾಕಿದೆ.
- ಕಂಡೀಷನ್-4: ತಮ್ಮ ಮದುವೆಗೆ ಬರುವವರ ಮೊಬೈಲ್ಗೆ ನೋ ಎಂಟ್ರಿ ಕೊಟ್ಟಿರುವ ಈ ಜೋಡಿ, ಮೊಬೈಲ್ಗೆ ಮಾತ್ರವಲ್ಲ, ಮದುವೆಯ ಫೋಟೋ ಕ್ಲಿಕ್ಕಿಸದಂತೆ ಕಂಡೀಷನ್ ಹಾಕಿದೆ. ಯಾವುದೇ ಕಾರಣಕ್ಕೂ ಮದುವೆಯ ದಿನ, ಫೋಟೋ ಅಥವಾ ವಿಡಿಯೋ ಮಾಡುವಂತಿಲ್ಲ ಎಂದು ಗಣ್ಯರಿಗೆ ರೂಲ್ಸ್ ಹೊರಡಿಸಿದೆ.
- ಕಂಡೀಷನ್-5: ಬಾಲಿವುಡ್ ಸಿನಿಮಾಗಳ ಮೂಲಕವೇ ಕತ್ರಿನಾ ಕೈಫ್ ದೇಶಾವ್ಯಾಪಿ ಫೇಮಸ್ ಆದವರು. ಕತ್ರಿನಾ ಕೈಫ್ಗೆ ಆಕೆಯದ್ದೇ ಬಿಗ್ ಫ್ಯಾಬ್ ಬೇಸ್ ಇದೆ. ತಮ್ಮ ನೆಚ್ಚಿನ ನಟಿ ಸಪ್ತಪದಿ ತುಳಿಯುತ್ತಾರೆ ಅಂದಾಗ, ಮದುವೆಯ ದಿನ ತಮ್ಮ ಅವರೇಗೆ ಕಾಣ್ತಾರೆ..? ಯಾವ ಡ್ರೆಸ್ ಹಾಕಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇರುತ್ತೆ. ಇದೇ ಕಾರಣಕ್ಕೆ ಮದುವೆಗೆ ಆಹ್ವಾನ ಇಲ್ಲದಿದ್ರೂ, ಮದುವೆಯ ಫೋಟೋ ನೋಡಿಯಾದ್ರೂ, ಮದುವೆಯ ಕ್ಷಣಗಳನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡ ಕಾಯ್ತಿದ್ರು. ಇದೀಗ ಒಂದು ಕಡೆ ಮೊಬೈಲ್ , ಫೋಟೋ ಕ್ಲಿಕ್ ಮಾಡುವುದನ್ನ ನಿಷೇಧ ಮಾಡಿರುವ ಜೋಡಿ, ಇದರ ಹೊರತಾಗಿಯೂ ಯಾರಾದ್ರೂ ಫೋಟೋ ಕ್ಲಿಕ್ ಮಾಡಿದ್ರೆ, ಯಾವುದೇ ಕಾರಣಕ್ಕೂ ಮದುವೆಯ ಫೋಟೋಗಳನ್ನ ಸೋಶಿಯಲ್ ಮೀಡಿಯಾಗಲ್ಲಿ ಶೇರ್ ಮಾಡುವಂತಿಲ್ಲ ಎಂದು ಕಂಡೀಷನ್ ಹಾಕಿದೆ. ಇದರಿಂದ ಅಭಿಮಾನಿಗಳಿಗೆ ಕತ್ರಿನಾ ಮದುವೆಯ ಫೋಟೋ ಕೂಡ ಸಿಗುವ ಚಾನ್ಸಸ್ ಕಡಿಮೆ ಇದೆ
- ಕಂಡೀಷನ್-6: ಮದುವೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಶೇರ್ ಮಾಡುವಂತಿಲ್ಲ. ಬರೀ ಮೊಬೈಲ್, ಫೋಟೋಗಳ ನಿಷೇಧಕ್ಕೆ ಮಾತ್ರ ಇವರ ಕಂಡೀಷನ್ ನಿಂತಿಲ್ಲ. ಇನ್ನೂ ಕೂಡ ಕಂಡೀಷನ್ ಇದೆ. ಮದುವೆಯಲ್ಲಿ ಭಾಗವಹಿಸುವ ಗಣ್ಯರಿಗೆ ಮತ್ತೊಂದು ಕಂಡೀಷನ್ ಹಾಕಿದ್ದಾರೆ. ತಮಗೆ ಮದುವೆಯ ಕುರಿತು ಯಾರ ಜೊತೆನೂ ಹೆಚ್ಚಿನ ಮಾಹಿತಿ ಶೇರ್ ಮಾಡುವ ಮೂಲಕ ಗಣ್ಯರ ಬಾಯಿಗೂ ಬೀಗ ಹಾಕಿದ್ದಾರೆ.
- ಕಂಡೀಷನ್-7: ಕಪಲ್ ಡ್ರೆಸ್, ಆಹಾರದ ಕುರಿತು ಮಾಹಿತಿ ನೀಡುವಂತಿಲ್ಲ
ಇಷ್ಷ್ಟೆಲ್ಲಾ ಕಂಡೀಷನ್ ಹೋಗಿ ಬಂದ ಅಥಿತಿಗಳು ನಂತರ ಕೂಡ ಮದುವೆಯ ದಿನ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮದುವೆಯ ದಿನ ತೊಟ್ಟ ಡ್ರೆಸ್ ಮಾತ್ರವಲ್ಲ, ಆಹಾರ ಪದಾರ್ಥಿಗಳ ಕುರಿತು ಕೂಡ ಯಾರಿಗೂ ಮಾಹಿತಿ ನೀಡದಿರುವಂತೆ ಷರತ್ತು ವಿಧಿಸಿದ್ದಾರೆ.
ಮದುವೆಗೆ ಆಗಮಿಸುವ ಗಣ್ಯರಿಗೆ ಇಂತಹ ಕಂಡೀಷನ್ ಹಾಕಿದ್ದರಿಂದ ಅತಿಥಿಗಳು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಮದುವೆಯಲ್ಲಿ ಮೊಬೈಲ್ ನಿಷೇಧ ಬಗ್ಗೆ ಪ್ರತಿಕ್ರಿಯಿಸಿರುವ ಬಧಾಯಿ ಹೋ’ ಮತ್ತು ‘ಶುಭ್ ಮಂಗಲ್ ಜ್ಯಾದಾ ಸಾವಧಾನ್’ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಹಿರಿಯ ನಟಗಜರಾಜ್ ರಾವ್, ಗಜರಾಜ್ ರಾವ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ನನಗೆ ಸೆಲ್ಫಿ ತೆಗೆದುಕೊಳ್ಳಲು ಅನುಮತಿ ನೀಡದಿದ್ದರೆ ನಾನು ಮದುವೆಗೆ ಬರುತ್ತಿಲ್ಲ ಎಂದು ದುಃಖದ ಮುಖದ ಎಮೋಜಿ ಹಾಕಿದ್ದಾರೆ. ಅಲ್ಲದೆ, ಮದುವೆಗೆ ಆಗಮಿಸುತ್ತಿರುವ ಪ್ರತಿಯೊಬ್ಬ ಅತಿಥಿಗೂ ಸೀಕ್ರೆಟ್ ಕೋಡ್ ಎಂಟ್ರಿ ಮಾತ್ರವಲ್ಲದೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲು, ಅದರ ಬಾಗಿಲು ತೆಗೆಯಲು ಕೂಡ ಇದೇ ಕೋಡ್ ಬಳಸಬೇಕಂತೆ.
ಐಷಾರಾಮಿ ಹೋಟಲ್ನಲ್ಲಿ ನಡೆಯಲಿದೆ ಮದುವೆ..!
ಹೆಚ್ಚಿನ ಭದ್ರತೆಗಾಗಿ ನೂರು ಬೌನ್ಸರ್ಸ್ ನೇಮಕ!
ಡಿಸೆಂಬರ್ 9ರಂದ ರಾಜಸ್ಥಾನದ ಹೋಟೆಲ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲ್ಲಿದೆ ಎನ್ನಲಾಗಿದೆ. ಮದುವೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಡಿಸೆಂಬರ್ 7ರಿಂದಲೇ ಆರಂಭವಾಗಲಿವೆ. ಕತ್ರಿನಾ ಮತ್ತು ವಿಕ್ಕಿ ಸಿಕ್ಸ್ ಸೆನ್ಸ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಕತ್ರಿನಾ ಮತ್ತು ವಿಕ್ಕಿ ತಮ್ಮ ಕುಟುಂಬದೊಂದಿಗೆ ತಂಗಲು ರಾಜಾಮಾನ್ ಸೂಟ್‌ಗಳನ್ನು ಕಾಯ್ದಿರಿಸಲಾಗಿದೆ. ಈ ಜೋಡಿಗಾಗಿಯೇ ರಾಜಾ ಮಾನ್ ಸಿಂಗ್ ಮತ್ತು ರಾಣಿ ಪದ್ಮಾವತಿಯ ಅತ್ಯಂತ ದುಬಾರಿ ಸೂಟ್ ಬುಕ್ ಮಾಡಲಾಗಿದೆ. ಈ ಸೂಟ್‌ನಲ್ಲಿ ಒಂದು ರಾತ್ರಿ ತಂಗಲು 5 ರಿಂದ 7 ಲಕ್ಷ ರೂಪಾಯಿ ಎನ್ನಲಾಗಿದೆ.
ಡಿಸೆಂಬರ್ 9 ರಂದು ಮದುವೆ ನಡೆಯಲಿರುವುದರಿಂದ, ಡಿಸೆಂಬರ್ 6ರಿಂದ 12ರವರೆಗೆ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಎರಡೂ ಕುಟುಂಬಗಳು ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡಲಿವೆ. ಕತ್ರಿನಾ-ವಿಕ್ಕಿ ಜೋಡಿಗಾಗಿ ಎರಡು ಸೂಟ್ ಕಾಯ್ದಿರಿಸುವುದು ಅಧಿಕೃತವಾಗುತ್ತಿದ್ದಂತೆಯೇ ರೆಸಾರ್ಟ್‌ನ ಭದ್ರತೆ ಹೆಚ್ಚಿಸಲಾಗಿದೆ. ಡಿಸೆಂಬರ್ 5ರಿಂದಲೇ ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಬರೋಬ್ಬರಿ 100 ಬೌನ್ಸರ್‌ಗಳು ಡಿಸೆಂಬರ್ 5 ರಂದು ರೆಸಾರ್ಟ್ ತಲುಪಲಿದ್ದಾರೆ. ಹೀಗೆ ಮದುವೆಗೆ ಬೇಕಾದ ಎಲ್ಲಾ ಸಿದ್ಧತೆಗಳು ಭರದಿಂದಲೇ ಸಾಗುತ್ತಿದೆ.ಈ ವರ್ಷ ಬಾಲಿವುಡ್ ನ ಅತಿ ದೊಡ್ಡ ಮದುವೆಯ ತಯಾರಿಯ ಜವಾಬ್ದಾರಿಯನ್ನು ಡೆಕೋ ಇವೆಂಟ್ ಕಂಪನಿ ಪಡೆದುಕೊಂಡಿದೆ ಎನ್ನಲಾಗಿದೆ.
ಕ್ಯಾಟ್ ವಿಕ್ಕಿ ಜೋಡಿ ಕೂಡ ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಲಿದೆ. ಈ ತಾರಾ ಜೋಡಿಯ ಮದುವೆಯಲ್ಲಿ ಬಾಲಿವುಡ್ನ ದಿಗ್ಗಜರೇ ಭಾಗವಹಿಸುವ ನಿರೀಕ್ಷೆ ಇದೆ. ಕೊನೆಗೂ ಕತ್ರಿನಾ ಮದ್ವೆಯಾಗ್ತಿರೋದು ಒಂದು ಕಡೆ ಸುದ್ದಿಯಾಗ್ತಿದ್ರೆ, ಮದುವೆಯಲ್ಲಿ ಭಾಗವಹಿಸುವ ಗಣ್ಯರಿಗೆ ಹಾಕಿರುವ ರೂಲ್ಸ್ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದೆ. ಮದುವೆಗೆ ಬನ್ನಿ, ಆದ್ರೆ, ಅದು ಮಾಡ್ಬೇಡಿ.. ಇದು ಮಾಡ್ಬೇಡಿ ಅಂತಿದ್ದಾರೆ ಕತ್ರಿನಾ ಮತ್ತು ವಿಕ್ಕಿ ಕೌಶಲ್.. ಇಬ್ಬರ ಈ ಕಂಡೀಷನಲ್ ಇನ್ವಿಟೇಷನ್ ಬಾಲಿವುಡ್ ಗಣ್ಯರ ತಲೆಗೆ ಹುಳ ಬಿಟ್ಟಿರೋದರ ಜೊತೆಗೆ ಬೇಸರ ಕೂಡ ಮಾಡಿದೆ… ಮನೆ ಕಟ್ಟಿ ನೋಡು, ಮದ್ವೆ ಮಾಡಿ ನೋಡು ಅನ್ನೋ ಗಾದೆ ಥರಾ, ಕತ್ರಿನಾ ವಿಕ್ಕಿ ಮದ್ವೆಗೆ ರೂಲ್ಸ್ ಫಾಲೋ ಮಾಡಿ ನೋಡು ಅನ್ನೋ ಕ್ಯಾಪ್ಷನ್ ಕೊಟ್ರೂ ತಪ್ಪಾಗಲ್ಲ.
The post ಇದು ‘ಕಂಡೀಷನ್ ಮದ್ವೆ’: ವಿಕ್ಕಿ-ಕತ್ರಿನಾ ಷರತ್ತುಗಳಿಗೆ ಬೆಚ್ಚಿಬಿದ್ದ ಬಾಲಿವುಡ್ ಗಣ್ಯರು..! appeared first on News First Kannada.