ಇದು ಜಗದ್ವಿಖ್ಯಾತ ಕಿನ್ನಾಳ ಗ್ರಾಮದ ಪ್ರೌಢ ವಿದ್ಯಾರ್ಥಿಗಳ ದುಃಸ್ಥಿತಿ: ಸೇತುವೆಯಿಲ್ಲದೆ ಮೊಳಕಾಲುದ್ದದ ನೀರಿನಲ್ಲಿ ಸಾಗಬೇಕು | School students in koppal cross water canal daily to reach school due to lack of bridge in kinnala village


kinnala village: ಶಾಲೆಗೆ ತೆರಳಲು ವಿದ್ಯಾರ್ಥಿಗಳ ನಿತ್ಯ ನರಕಯಾತನೆ: ಶಾಲೆಗೆ ತೆರಳಲು ವಿದ್ಯಾರ್ಥಿಗಳ ನಿತ್ಯ ನರಕಯಾತನೆ, ಹಳ್ಳದಲ್ಲಿ ಇಳಿದು ಬುದುಕು ಸಾಗಬೇಕು

ಇದು ಜಗದ್ವಿಖ್ಯಾತ ಕಿನ್ನಾಳ ಗ್ರಾಮದ ಪ್ರೌಢ ವಿದ್ಯಾರ್ಥಿಗಳ ದುಃಸ್ಥಿತಿ: ಸೇತುವೆಯಿಲ್ಲದೆ ಮೊಳಕಾಲುದ್ದದ ನೀರಿನಲ್ಲಿ ಸಾಗಬೇಕು

ಶಾಲೆಗೆ ತೆರಳಲು ವಿದ್ಯಾರ್ಥಿಗಳ ನಿತ್ಯ ನರಕಯಾತನೆ, ಹಳ್ಳದಲ್ಲಿ ಇಳಿದು ಬುದುಕು ಸಾಗಬೇಕು

ಕೊಪ್ಪಳ: ಶಾಲೆಗೆ ತೆರಳಲು ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವ ಮತ್ತೊಂದು ಪ್ರಕರಣ ವರದಿಯಾಗಿದೆ. ಹಳ್ಳದಲ್ಲಿ ಇಳಿದು, ಪ್ರಾಣದ ಹಂಗು ತೊರೆದು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಶಾಲೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಮೊಣಕಾಲುತನಕದ ನೀರಿನಲ್ಲಿ ವಿದ್ಯಾರ್ಥಿಗಳು ಹಳ್ಳ ದಾಟಬೇಕಿದೆ. ಸೇತುವೆ ಇಲ್ಲದ ಕಾರಣ ವಿದ್ಯಾರ್ಥಿಗಳು ಹಳ್ಳದಲ್ಲಿ ಇಳಿದು ಶಾಲೆಗೆ ತೆರಳುತ್ತಿದ್ದಾರೆ. ಕೊಪ್ಪಳ (koppal) ತಾಲೂಕಿನ ಮಾದಿನೂರು ಗ್ರಾಮದ ವಿದ್ಯಾರ್ಥಿಗಳು ಈ ಸಂಕಷ್ಟ ಅನುಭವಿಸುತ್ತಿದ್ದಾರೆ.’

ಮಾದಿನೂರಿನಿಂದ ಕಿನ್ನಾಳ (kinnala) ಗ್ರಾಮದ ಪ್ರೌಢ ಶಾಲೆಗೆ ಹೊಗುವ ವಿದ್ಯಾರ್ಥಿಗಳ ದುಃಸ್ಥಿತಿ ಇದಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸೇತುವೆ (bridge) ಇಲ್ಲದೆ ಇಲ್ಲಿನ ಜನ ಜಾನುವಾರು ಪರದಾಡುತ್ತಿದ್ದಾರೆ. ಹಳ್ಳದಲ್ಲಿ ಮರಳು ಮಾಫಿಯಾದಿಂದ ಹಳ್ಳ ದಿಣ್ಣೆ, ತಗ್ಗು ಪ್ರದೇಶಗಳು ಸೃಷ್ಟಿಯಾಗಿವೆ. ಆಯ ತಪ್ಪಿ ತಗ್ಗು ಪ್ರದೇಶದಲ್ಲಿ ಕಾಲಿಟ್ಟರೆ ದೇವರೇ ಕಾಪಾಡಬೇಕು ಅವರನ್ನು.

ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಇಂತಹ ನರಕಯಾತನೆ ದರ್ಶನವಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಒತ್ತಾಯ ಮಾಡುತ್ತಲೇ ಇದ್ದಾರೆ. ಜನಪ್ರತಿನಿಧಿಗಳ – ಮರಳು ಮಾಫಿಯಾ ನಡೆಸುವವರ ವಿರುದ್ದ ವಿದ್ಯಾರ್ಥಿಗಳು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.