ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಕೃಷಿ ಇಲಾಖೆಯ ರಾಯಭಾರಿ ಸ್ಥಾನದಿಂದ ತೆಗೆಯುವ ಮಾತೇ ಇಲ್ಲ ಅಂತಾ ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

ದರ್ಶನ್ ವಿರುದ್ಧ ಹಲ್ಲೆ ಆರೋಪ ಕೇಳಿ ಬರುತ್ತಿದ್ದಂತೆ ಕೃಷಿ ರಾಯಭಾರಿ ಸ್ಥಾನದಿಂದ ಅವರನ್ನ ರಿಮೂವ್ ಮಾಡಬೇಕು ಅನ್ನೋ ಆಗ್ರಹಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಸಿ ಪಾಟಿಲ್.. ನಟ ದರ್ಶನ್ ಒಳ್ಳೆಯ ವ್ಯಕ್ತಿ, ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ಅವರ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ. ಹೊಸಬರನ್ನು ಚಿತ್ರರಂಗದಲ್ಲಿ ಪ್ರೋತ್ಸಾಹಿಸುತ್ತಾರೆ. ದರ್ಶನ್ ಪ್ರೋತ್ಸಾಹ ಮಾಡ್ತಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ದಾಸನ ಮಿಂಚು; ರೈತರಿಗಾಗಿ ಕೃಷಿ ರಾಯಭಾರಿ

ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ದರ್ಶನ್ ಅವರನ್ನ ಕೈಬಿಡಲ್ಲ. ಪೊಲೀಸ್ ಇಲಾಖೆ ಯಾರ ಕೈನಲ್ಲೂ ಇಲ್ಲ. ಅವರ ಕೆಲಸ ಅವರು ಮಾಡ್ತಾರೆ. ರೆಕ್ಕೆ-ಪುಕ್ಕ ಹುಟ್ಟಿಕೊಳ್ತಾವೆ ಎಂಬ ಮಾತಿಗೆ ಹಾಗಂದಿದ್ದಾರೆ. ಅವರು ತಲೆ ಕಡೆಯುವೆ ಅಂದಿದ್ದಾರೆ ಅಷ್ಟೇ. ಅದು ಯಾರನ್ನೂ ಗಮನದಲ್ಲಿಟ್ಟುಕೊಂಡು ಹೇಳಿದ ಮಾತಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್​ ನೇಮಕ

The post ಇದು ತೆಜೋವಧೆ ಪ್ರಯತ್ನ.. ಕೃಷಿ ರಾಯಭಾರಿ ಸ್ಥಾನದಿಂದ ದರ್ಶನ್ ತೆಗೆಯಲ್ಲ -ಬಿಸಿ ಪಾಟೀಲ್  appeared first on News First Kannada.

Source: newsfirstlive.com

Source link