ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಇದು ನನ್ನ ಅದೃಷ್ಟ ಎಂದು ಭಾರತದ ಕ್ರಿಕೆಟಿಗ ಕೆಎಲ್ ರಾಹುಲ್ ತಿಳಿಸಿದ್ದಾರೆ.
ಮಾಧ್ಯಮಗೋಷ್ಟಿಯೊಂದರಲ್ಲಿ ಮಾತನಾಡಿರುವ ಕೆಎಲ್ ರಾಹುಲ್, ನಾನು ಚಿಕ್ಕವನಿದ್ದಾಗ ದ್ರಾವಿಡ್ ಅವರ ಆಟವನ್ನು ನೋಡಿ, ಅವರಂತೆಯೇ ಅಭ್ಯಾಸ ಮಾಡ್ತಿದ್ದೆ. ದ್ರಾವಿಡ್ ಕೂಡ ಕರ್ನಾಟಕದಲ್ಲಿ ನಮಗೆ ಸಾಕಷ್ಟು ಬಾರಿ ಪಂದ್ಯಗಳಲ್ಲಿ ಆಡುವಾಗ ಸಲಹೆ, ಸೂಚನೆ ಕೊಟ್ಟಿದ್ದಾರೆ. ಈಗ ಟೀಂ ಇಂಡಿಯಾಗೆ ಕೋಚ್ ಆಗಿರುವ ದ್ರಾವಿಡ್ರಿಂದ ನಾವೆಲ್ಲಾ ಹೆಚ್ಚಿನದ್ದನ್ನು ಕಲಿಯುವ ಅವಕಾಶ ಕೂಡ ಇದೆ ಎಂದು ಆತ್ಮವಿಶ್ವಾಸದ ಬಗ್ಗೆ ಮಾತಾಡಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸರಣಿ ಮತ್ತು ಐಸಿಸಿ ಟಿ20 ವಿಶ್ವಕಪ್ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ನಾಳೆ ಜೈಪುರದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಜೈಪುರ ಕ್ರೀಡಾಂಗಣದಲ್ಲಿ ಮಿಂಚಲು ಬ್ಲೂ ಬಾಯ್ಸ್ ರೆಡಿಯಾಗ್ತಿದ್ದಾರೆ. ಇನ್ನೂ ರಾಹುಲ್ ದ್ರಾವಿಡ್ ಟೀಂ ಇಂಡಿಯಾಗೆ ಕೋಚ್ ಆದ ಬಳಿಕ ಇದು ಮೊದಲ ಸರಣಿಯಾಗಿದ್ದು, ಈ ಪಂದ್ಯವನ್ನು ಆಟಗಾರರು ಹಾಗೂ ದ್ರಾವಿಡ್ ಸಹ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.