ಇದು ಮೀಮ್​​ಗಳ ಲೋಕವೇ..ಇಲ್ಲಿ ಎಲ್ಲ ಅವೇ ಅಲ್ಲವೇ..ವ್ಯಾಲೆಂಟೈನ್ಸ್ ಡೇ ಸೆಲಬ್ರೆಷನ್​ ವಿತ್ ಮೀಮ್ಸ್..!


ಇಂದು ವ್ಯಾಲೆಂಟೈನ್ಸ್ ಡೇ ಇಡೀ ದೇಶವೇ ಈ ಪ್ರೇಮಿಗಳ ದಿನದ ಗುಂಗಿನಲ್ಲಿ ತೆಳುತ್ತಿದೆ. ತಮ್ಮ ಸಂಗಾತಿಗೆ ಯಾವ ರೀತಿ ಸರ್ಪ್ರೈಸ್ ಗಿಫ್ಟ್ ನೀಡಿ ಖುಷಿ ಪಡಿಸಬೇಕು ಎಂದು ಈಗಾಗಲೇ ಶಾಪಿಂಗ್​ ಸಹ ಮಾಡಿ ತಮ್ಮದೇ ಆದ ಲವ್​ ಸ್ಪಾಟ್​ಗಳಿಗೆ ಬಂದಿರುತ್ತಾರೆ. ಇನ್ನು ಕೆಲವರು ಹೋಟೆಲ್​, ಕಾಫಿ ಡೇ, ಮಾಲ್​ಗಳಲ್ಲಿ ಮೀಟ್​ ಮಾಡೋಣ ಅಂತ ಪ್ಲಾನ್​ ಸಹ ರೆಡಿ ಮಾಡಿಕೊಂಡಿರುತ್ತಾರೆ.

ಈ ಪ್ರೀತಿಯ ದಿನವನ್ನು ಪ್ರತಿ ವರ್ಷ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ಸಾಮಾನ್ಯವಾಗಿ ಪ್ರಣಯ ಪ್ರೇಮದ ಆಚರಣೆಯಾಗಿದೆ.ಆದರೆ ಮೀಮ್ ಮೇಕರ್ಸ್​ಗೆ ಇನ್ನು ವಿಶೇಷ ದಿನವಾಗಿದೆ. ಪ್ರತಿ ವರ್ಷ ಪ್ರೇಮಿಗಳ ದಿನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಮತ್ತು ಜೋಕ್‌ಗಳಿಂದ ತುಂಬಿರುತ್ತವೆ.

ಪ್ರೇಮಿಗಳ ದಿನದ ಹಿಂದಿನ ದಿನಗಳಾದ ರೋಸ್ ಡೇ, ಪ್ರಪೋಸ್ ಡೇ, ಚಾಕ್ಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಕಿಸ್ ಡೇ ಇವುಗಳಿಗೂ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್​ಗಳಿಂದ ತುಂಬಿತ್ತು. ಇನ್ನು, ವ್ಯಾಲೆಂಟೈನ್ಸ್ ಡೇಗೂ ಅಷ್ಟೇ ಮೀಮ್ ಮೇಕರ್ಸ್​ ಸೂಪರ್​ ಆಗಿ ಇರೊ ಮೀಮ್ಸ್ ಅಂಡ್​ ಜೋಕ್ಸ್​ಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್​ ಮಾಡಿ ಖುಷಿಯನ್ನು ಎಲ್ಲರಿಗೂ ಹಂಚುತ್ತಿದ್ದಾರೆ.

News First Live Kannada


Leave a Reply

Your email address will not be published.