ಆಕಾಶದಲ್ಲಿ ಇನ್ಮುಂದೆ ಹಾರಾಡಲು ವಿಮಾನವೇ ಬೇಕಾಗಿಲ್ಲ. ಹೆಲಿಕಾಪ್ಟರ್ ಕೂಡ ಬೇಕಾಗಿಲ್ಲ. ನಾವೊಬ್ಬರೇ ಆರಾಮಾಗಿ ಒಂದು ರೌಂಡ್ ಹೋಗಿ ಬರಬೇಕು ಅಂದ್ರೆ ಈಗ ಹೊಸದೊಂದು ಕಾರು ಬಂದಿದೆ. ಅದೇ ಫ್ಲೈಯಿಂಗ್ ಕಾರ್.

ಇಲ್ಲಿ ಹಾರಾಡ್ತೋ ಇರೋದು ದೊಡ್ಡ ಡ್ರೋಣ್ ಅಲ್ಲ. ಸಣ್ಣ ಹೆಲಿಕಾಪ್ಟರ್ ಕೂಡ ಅಲ್ಲ. ಇದು ಏರ್ ಕಾರ್. ಎಲ್ಲಿ ಬೇಕಾದರೂ ಹಾರಾಡಲ್ಲದು ಈ ಏರ್ ಕಾರ್. ಇದನ್ನು ಫ್ಲೈಯಿಂಗ್ ಕಾರು ಅಂತಾ ಕರೀತಾರೆ. ಇದನ್ನು ಕಂಪನಿಯೊಂದು ರೆಡಿ ಮಾಡಿದೆ. ಇನ್ನೇನು ಮಾರಾಟಕ್ಕೂ ಸಿದ್ಧವಾಗ್ತಾ ಇದೆ.

ಇನ್ನು ಆಕಾಶದಲ್ಲಿ ಹಾರಾಡಬೇಕು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕು ಅಂದ್ರೆ ಹೆಲಿಕಾಪ್ಟರ್, ಫ್ಲೈಟ್ ಬೇಕಾಗಿಲ್ಲ. ಒಬ್ಬರೇ ಈ ಫ್ಲೈಯಿಂಗ್ ಕಾರು ತೆಗೆದುಕೊಂಡು ಹೊರಟು ಬಿಡಬಹುದು. ಬಹುಶಃ ಇನ್ನಷ್ಟು ವರ್ಷಗಳು ಕಳೆದರೆ ಇಂತಹ ಕಾರುಗಳ ಸಂಖ್ಯೆಯೇ ಜಾಸ್ತಿಯಾಗಿ ಆಕಾಶದಲ್ಲೂ ಕಾರುಗಳು ಮುಖಾಮುಖಿಯಾಗಬಹುದು. ಏರ್ ಟ್ರಾಫಿಕ್ ಕಂಟ್ರೋಲರ್ ವ್ಯಾಪ್ತಿಗೆ ಈ ಫ್ಲೈಯಿಂಗ್ ಕಾರು ಕೂಡ ಸೇರಿಕೊಳ್ಳಬಹುದು. ಆದ್ರೆ ಇದು ಹೆಲಿಕಾಪ್ಟರ್ ನಷ್ಟು, ವಿಮಾನಗಳಷ್ಟು ಎತ್ತರಕ್ಕೆ ಹಾರಲ್ಲ. ಆದರೂ ಭೂಮಿಯಿಂದ ಸಾಕಷ್ಟು ಮೇಲೆ ಹಾರಾಡುತ್ತಾ ನಿಮ್ಮನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ಅರಾಮಾಗಿ ತಲುಪಿಸುತ್ತೆ. ಎಲ್ಲಾ ಕಂಟ್ರೋಲ್ ನಿಮ್ಮ ಕೈಯಲ್ಲೇ ಇರುತ್ತೆ.

ಅಮೆರಿಕಾದ ಫ್ಲೋರಿಡಾದ ಒಂದು ಹಳ್ಳಿಯ ಎಲ್ಲಾ ಮನೆಗಳಲ್ಲೂ ವಿಮಾನಗಳಿವೆ. ಇಲ್ಲೊಂದು ಚಿಕ್ಕ ವಿಮಾನ ನಿಲ್ದಾಣವೇ ಇದೆ. ಈ ಊರಿನ ಜನ ತಮ್ಮ ತಮ್ಮ ಮನೆಯಲ್ಲಿರುವ ಸಣ್ಣ ವಿಮಾನಗಳಲ್ಲೇ ಪ್ರಯಾಣಿಸೋದು ಹೆಚ್ಚು. ಆದ್ರೆ ಈ ಊರಿನವರು ಬಹುಶಃ ಮುಂದಿನ ದಿನಗಳಲ್ಲಿ ಈ ಫ್ಲೈಯಿಂಗ್ ಕಾರನ್ನೇ ಪರ್ಚೇಸ್ ಮಾಡಬಹುದೇನೋ. ಅಷ್ಟರಮಟ್ಟಿಗೆ ಲಘು ಹೆಲಿಕಾಪ್ಟರ್ ನಂತೆ, ಫ್ರೈಟ್​​ನಂತೆ ಇದೆ ಈ ಫ್ಲೈಯಿಂಗ್ ಕಾರು.

ವಿಶ್ವದಲ್ಲಿ ಆಟೋಮೊಬೈಲ್ ತಂತ್ರಜ್ಞಾನ ಸಿಕ್ಕಾಪಟ್ಟೆ ಮುಂದುವರಿದಿದೆ. ಅದೆಷ್ಟು ತರಾವರಿ ವೆಹಿಕಲ್ಗಳು ಬಂದಿದ್ದಾವೆ ಅಂತ ಹೇಳೋಕೆ ಹೋದ್ರೆ ದಿನಗಟ್ಟಲೇ ಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಹೊಸ ಹೊಸ ವೆಹಿಕಲ್ಗಳು ಬರ್ತಾನೇ ಇದ್ದಾವೆ. ಇದರಲ್ಲಿ ಬೇರೆ ಬೇರೆ ಮಾದರಿಯ ವಾಹನಗಳು ಬಹಳಷ್ಟು ಇದ್ದಾವೆ. ಆದ್ರೆ ಈ ರೀತಿಯ ಹೊಸ ಪ್ರಯೋಗ, ಹೊಸ ರೀತಿಯ ಆವಿಷ್ಕಾರಗಳು ನಡೆದಾಗ ವಿಶೇಷವಾಗಿ ಗಮನ ಸೆಳೆಯುತ್ತವೆ.

ಕೆಲವು ವರ್ಷಗಳಲ್ಲೇ ವಿದ್ಯುತ್‌ ಚಾಲಿತ ಹಾರಾಡುವ ಕಾರುಗಳು ಬರ್ತಾವೆ ಅಂತ ಹೇಳಲಾಗಿತ್ತು. ಇದು ರಸ್ತೆ ಮೇಲೆ ಚಲಿಸೋದೇ ಇಲ್ಲ. ಇದಕ್ಕೆ ರಸ್ತೆಯೂ ಬೇಕಾಗಿಲ್ಲ, ಯಾವ ನಿರ್ದಿಷ್ಟ ಮಾರ್ಗಗಳೂ ಬೇಕಾಗಿಲ್ಲ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಎಲ್ಲಿಗೆ ಬೇಕೋ ಅಲ್ಲಿಗೆ ಸಾಗುತ್ತದೆ. ಇಂತಹ ಫ್ಲೈಯಿಂಗ್ ವೆಹಿಕಲ್ಗಳ ಬಗ್ಗೆ ಎಲ್ಲಾ ಕಡೆ ಈಗಲೂ ಚರ್ಚೆಯಾಗ್ತಾ ಇದಾವೆ. ಹೆಚ್ಚು ವಾಹನದಟ್ಟಣೆ ಇರುವ ನಗರಗಳಲ್ಲಿ ಹಾರಾಡುವ ಆಂಬ್ಯುಲೆನ್ಸ್ಗಳಿದ್ರೆ ಅನುಕೂಲ ಎಂಬ ಅಭಿಪ್ರಾಯ ದಟ್ಟವಾಗಿತ್ತು. ಎಷ್ಟೇ ದಟ್ಟಣೆ ಇದ್ದರೂ ಕೂಡ ಹಾರಿಕೊಂಡು ಹೋಗಿಬಿಡಬಹುದು ಅಂತಾ. ಅ್ಯಂಬುಲೆನ್ಸ್ಗಳು ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುವ ತೊಂದರೆಯಿಂದ ಪಾರು ಮಾಡಲು ಈ ಪ್ಲಾನ್ ನಡೀತಾ ಇದೆ ಅಂತಾನು ಹೇಳಲಾಗ್ತಾ ಇತ್ತು.

ಈಗ ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನ‌ಲ್ಲಿರುವ ಏರ್‌ ಸ್ಪೀಡರ್‌ ಎಂಬ ಕಂಪನಿ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು ಎಂ.ಕೆ. 3 ರೇಸಿಂಗ್‌ ಪ್ರೋಟೋಟೈಪ್‌ ಎಂಬ ವಿದ್ಯುತ್‌ ಚಾಲಿತ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ.

ಆಸ್ಟ್ರೇಲಿಯಾ ಕಂಪನಿಯೊಂದು ಸಿದ್ಧಮಾಡಿರುವ ಕಾರು
ಇದು ರಸ್ತೆಯ ಮೇಲೆ ಓಡಾಡುವ ಕಾರಲ್ಲ. ಆಕಾಶದಲ್ಲಿ ಹಾರಾಡುವ ಕಾರು! ಏರ್‌ಸ್ಪೀಡರ್‌ ಕಂಪನಿಯ ಸಹೋದರ ಸಂಸ್ಥೆಯಾದ ಅಲೌಡಾ ಏರೋನಾಟಿಕ್ಸ್‌ ಸಂಸ್ಥೆ ಇದನ್ನು ವಿನ್ಯಾಸಗೊಳಿಸಿದೆ. ಕಂಪನಿ ಹೇಳುವ ಪ್ರಕಾರ, ಇದು ವಿಶ್ವದ ಮೊದಲ ಆಕಾಶ ಸಂಚಾರಿ ರೇಸ್‌ ಕಾರು. ಅಂದಹಾಗೆ, ಫಾರ್ಮುಲಾ ಎಫ್ 1, ಫೈಟರ್‌ ಜೆಟ್‌ ಹಾಗೂ ಹೆಲಿಕಾಪ್ಟರ್‌ಗಳ ಸಂಯುಕ್ತ ರೂಪ. ಹೀಗಂತ ಇದರ ವಿನ್ಯಾಸ ವಿಭಾಗದ ಮುಖ್ಯಸ್ಥರಾದ ಫೆಲಿಕ್ಸ್‌ ಪಿಯರ್ಸನ್‌ ಅವರೇ ಹೇಳುತ್ತಾರೆ. ಈ ಕಾರ್ ತಯಾರಿಕೆ ಮಾಡುತ್ತಿರುವ ಕಂಪನಿ ಮುಂಚೆ ಎಫ್ 1 ರೇಸ್ ಕಾರ್ಗಳನ್ನು ತಯಾರಿಸುತ್ತಿತ್ತಯ. ಈಗ ಹಾರಾಡುವ ಕಾರ್ಗಳನ್ನು ಸಹ ಫ್ಲೈಯಿಂಗ್ ಎಫ್ 1 ರೇಸ್ಗಾಗಿ ಸಿದ್ಧ ಮಾಡಿದ್ದಾರೆ.

ಏರ್‌ಸ್ಪೀಡರ್ ಎಂಕೆ 3 ಜಗತ್ತಿನ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಗ್ಲೆಂಡ್ ಮೂಲದ ಏರ್‌ಸ್ಪೀಡರ್, ಫ್ಲೈಯಿಂಗ್ ರೇಸ್ ಗಾಗಿ ಹೊಸ ಜಾಗತಿಕ ರೇಸಿಂಗ್ ಸರಣಿಯನ್ನು ನಡೆಸಲಿದೆ. ಈ ಸೀರೀಸ್ ಈ ವರ್ಷದಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಕಂಪನಿಯು ಈಗಾಗಲೇ ಹತ್ತು ಎಂಕೆ 3 ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳ ಉತ್ಪಾದನೆಯನ್ನು ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಏರ್‌ಸ್ಪೀಡರ್ ತಯಾರಿಸಿದ ಈ ಫ್ಲೈಯಿಂಗ್ ಕಾರುಗಳನ್ನೇ ರೇಸಿಂಗ್ ಸೀರೀಸ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳಿಗೆ ಪೂರೈಸಲಾಗುತ್ತಿದೆ. ಈ ಕಾರುಗಳನ್ನು ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ಏರ್‌ಸ್ಪೀಡರ್ ಕಂಪನಿಯ ಸೋದರ ಸಂಸ್ಧೆಯಾದ ಅಲುಡಾ ಏರೋನಾಟಿಕ್ಸ್ ಉತ್ಪಾದನೆ ಮಾಡಲಿದೆ ಎನ್ನಲಾಗುತ್ತಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ..

ಏರ್‌ಸ್ಪೀಡರ್ ಎಂಕೆ – 3 ಸ್ಪೇಷಾಲಿಟಿಸ್
ರಿಮೋಟ್‌ ಪೈಲೆಟೆಡ್‌ ವಿದ್ಯುತ್‌ ಚಾಲಿತ ಕಾರು

ಇದೊಂದು ರಿಮೋಟ್‌ ಪೈಲೆಟೆಡ್‌ ವಿದ್ಯುತ್‌ ಚಾಲಿತ ಕಾರಾಗಿದೆ. ಇದರ ಎಂಜಿನ್‌ ಶಕ್ತಿ ಆಡಿ ಎಸ್‌ಕ್ಯು7 ಕಾರಿಗೆ ಸರಿಸಾಟಿ ಎನ್ನಲಾಗುತ್ತಿದೆ. ಆಕಾಶ ಮಾರ್ಗದಲ್ಲಿ ಸಾಗುವಂಥ ಮೊದಲ ರೇಸ್‌ ಕಾರು ಇದಾಗಿದ್ದು. ಏಕಕಾಲಕ್ಕೆ ಒಬ್ಬ ವ್ಯಕ್ತಿ ಚಾಲನೆ ಮಾಡಬಹುದಾದ ಸ್ಪಷಲ್ ಕಾರು ಇದಾಗಿದೆ.

ಏರ್‌ಸ್ಪೀಡರ್ ಎಂಕೆ3 ಫ್ಲೈಯಿಂಗ್ ಕಾರ್, ಕಾರ್ಬನ್ ಫೈಬರ್ ಟಬ್‌ನೊಂದಿಗೆ ಬರುತ್ತದೆ ಮತ್ತು ಇದು ಇನ್ನೂ ಹಗುರವಾಗಿರುವುದನ್ನು ಖಾತ್ರಿಗೊಳಿಸತ್ತದೆ. ಫ್ಲೈಯಿಂಗ್ ಕಾರ್‌ನಲ್ಲಿ ಘರ್ಷಣೆ ತಪ್ಪಿಸುವ ಅತ್ಯಾಧುನಿಕ ವ್ಯವಸ್ದೆಗಳೂ ಕೂಡ ಇರಲಿವೆ ಎಂದು ಹೇಳಲಾಗುತ್ತಿದೆ. ಈ ಏರ್‌ಸ್ಪೀಡರ್ ಎಂಕೆ-3 ಫ್ಲೈಯಿಂಗ್ ಕಾರಿನಲ್ಲಿ 96 Kw ಎಲೆಕ್ಟ್ರಿಕ್ ಎಂಜಿನ್ 429 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ ಮತ್ತು ಆ ಪವರ್ ಅದರ ರೂಟರ್ ಬ್ಲೇಡ್‌ಗಳಿಗೆ ವರ್ಗಾಯಿಸುತ್ತದೆ. ಈ ರೂಟರ್ ಬ್ಲೇಡ್‌ಗಳನ್ನು ಕಾರಿನ ನಾಲ್ಕು ಮೂಲೆಗಳಲ್ಲಿ ಫಿಕ್ಸ್ ಮಾಡಲಾಗಿರುತ್ತದೆ.

ಆಕಾಶದಲ್ಲೇ ಸ್ವಚ್ಛಂದವಾಗಿ ಹಾರಾಡುವ ರೇಸ್‌ ಕಾರು
130 ಕೆಜಿ ಕರ್ಬ್-ತೂಕದಷ್ಟಿರುವ ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ವಿಶಿಷ್ಟವಾಗಿದೆ. ಎಂಕೆ 3 ಫ್ಲೈಯಿಂಗ್ ರೇಸ್ ಕಾರನ್ನು 2.8 ಸೆಕೆಂಡುಗಳಲ್ಲಿ ಗಂಟೆಗೆ 0 ಯಿಂದ 100 ಕಿಲೋಮೀಟರ್ ಸ್ಪೀಡ್ ಗೆ ತಲುಪುವಂತೆ ಇಂಜಿನ್ ಕಾರ್ಯ ನಿರ್ವಹಿಸಲಿದೆ. ಗಂಟೆಗೆ 120 ಕಿಮೀ ಗಿಂತ ಹೆಚ್ಚಿನ ದೂರ ಕ್ರಮಿಸಲು ಸಾಧ್ಯವಾಗಲಿದೆ.

ಇದು ಯಾವ ರೀತಿ ಜನಪ್ರಿಯತೆಯನ್ನು ಪಡೆದುಕೊಳ್ಳಬಹುದು ಎಂಬುದನ್ನು ಕಾದು ನೋಡಬೇಕು. ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರ್ ಹೆಚ್ಚು ಆಸಕ್ತಿಯನ್ನು ಮೂಡಿಸುತ್ತಿದೆ. ಹೊಸ ಆವಿಷ್ಕಾರಗಳು ಬರ್ತಾ ಇರ್ಬೇಕು. ಇಲ್ಲದಿದ್ದರೆ ಲೈಫ್ ಬೋರ್ ಆಗಿಬಿಡುತ್ತೆ. ಹಿಂದಿನಿಂದ ನಮ್ಮನ್ನು ಬ್ಯುಸಿಯಾಗಿ ಇಟ್ಟಿರುವುದೇ ಈ ರೀತಿಯ ಇನ್ವೆನ್ಷನ್ಸ್ ಗಳು. ಹಾರಾಡೋ ರೇಸ್ ಕಾರ್ ಏನೋ ಬಂದಾಯ್ತು, ಇದಕ್ಕೆ ಪರ್ಮಿಷನ್ ಸಿಕ್ಕಿ ಇದರ ಉಪಯೋಗಗಳೇನು ಅನ್ನೊದನ್ನು ಕಾದು ನೋಡ್ಬೇಕಿದೆ.

The post ಇದು ರಸ್ತೆ ಮೇಲೆ ಓಡಾಡುವ ಕಾರಲ್ಲ.. ಆಕಾಶದಲ್ಲಿ ಹಾರಾಡುವ ರೇಸ್​ ಕಾರು appeared first on News First Kannada.

Source: newsfirstlive.com

Source link