ಚಿಕ್ಕಬಳ್ಳಾಪುರ: ಕಾಗೆನ ತೊರಿಸಿ ಕೋಗಿಲೆ ಇದು ಅಂತ ಹೇಳಿದ್ರೆ, ಓ.. ಹೌದಾ..? ಅಂತ ನಂಬೋ ಜನ ಎಲ್ಲಿವರೆಗೂ ಇರ್ತಾರೋ, ಅಲ್ಲಿವರೆಗೂ ಯಾಮಾರಿಸೋರು ಇದ್ದೇ ಇರ್ತಾರೆ ಅನ್ನೋದಕ್ಕೆ ಚಿಕ್ಕಾಬಳ್ಳಾಪುರದಲ್ಲಿ ನಡೆದಿರೋ ಗಟನೆಯೇ ಸಾಕ್ಷಿ. ವಜ್ರದ ಹರಳು ಅಂತ ನಂಬಿಸಿ ಕೋಟ್ಯಾಂತರ ರೂಪಾಯಿ ಬೆಲೆಗೆ ಮಾರಾಟ ಮಾಡಲು ಹೋಗಿ ಐದು ಜನ ಪೊಲೀಸ್ರ ಬಲೆಗೆ ಬಿದ್ದಿದ್ದಾರೆ.

8ಕೆಜಿ ತೂಕದ ವಜ್ರದ ಹರಳು ‌10 ಕೋಟಿಯಂತೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಪೈಯ್ಯಲಗುರ್ಕಿ ಗ್ರಾಮದ ಬಳಿ, ಸುಮಾರು ಎಂಟು ಕೆಜಿ ತೂಕದ ವಜ್ರದ ಹರಳನ್ನ ಸುಮಾರು ‌10 ಕೋಟಿಗೆ ಮಾರಲು ಐವರು ಯತ್ನಿಸ್ತಾಯಿದ್ದರು. ಈ ವೇಳೆ ಪೊಲೀಸರೇ ಮಾರು ವೇಷದಲ್ಲಿ, ಈ ವಜ್ರದ ಹರಳನ್ನ ಖರೀದಿಸುವುದಾಗಿ ಹೇಳಿ, ಮೂರು ಕೊಟಿ ಕೊಡ್ತೀವಿ ಕೊಟ್ಬಿಡಿ ಅಂತ ನಂಬಿಸಿ ಈ ಖತರ್ನಾಕ್​ ಕಳ್ಳರ ಮೇಲೆ ರೈಡ್​ ಮಾಡಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯ ಸಿಪಿಐ ಲಿಂಗರಾಜ್ ಮತ್ತವರ ತಂಡದ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಮಾರಾಟ ಮಾಡಲೇತ್ನಿಸಿದ ಮಂಜು, ಬಯಣ್ಣ, ಶಿವ ಸೇರಿ ಐವರನ್ನ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಸದ್ಯ, ಪೊಲೀಸರು ಈ ವಜ್ರದ ಹರಳು ಎನ್ನಲಾದ ವಸ್ತುವನ್ನ ತಮ್ಮ ಕಷ್ಟಡಿಗೆ ಪಡೆದಿದ್ದು, ಲ್ಯಾಬ್​ಗೆ ಕಳುಹಿಸಿದ ನಂತರವಷ್ಟೇ ಈ ವಸ್ತು ವಜ್ರಾನೋ? ಕಲ್ಲೊ? ಅನ್ನೋದು ತಿಳಿಯಲಿದೆ.

The post ಇದು ವಜ್ರದ ಹರಳೋ..? ಇಲ್ಲ ಸಾಮಾನ್ಯ ಕಲ್ಲೋ? ಗೊಂದಲ ಹುಟ್ಟಿಸಿದ ₹3 ಕೋಟಿ ಡೀಲು appeared first on News First Kannada.

Source: newsfirstlive.com

Source link