ಇದು ವಿಶ್ವದ ಅತಿ ದುಮಾರಿ ಮಾವು; 1 ಕೆಜಿಗೆ ₹3 ಲಕ್ಷ ಇರೋ ಇದನ್ನ ಕಾಯೋದೇ ದೊಡ್ಡ ಸವಾಲು

ಇದು ವಿಶ್ವದ ಅತಿ ದುಮಾರಿ ಮಾವು; 1 ಕೆಜಿಗೆ ₹3 ಲಕ್ಷ ಇರೋ ಇದನ್ನ ಕಾಯೋದೇ ದೊಡ್ಡ ಸವಾಲು

ಮಧ್ಯಪ್ರದೇಶ​: ದೇಶದಲ್ಲಿ ಈಗ ಮಾವಿನ ಹಣ್ಣನ್ನದ್ದೇ ದರ್ಬಾರ್​. ಎಲ್ಲಿ ನೋಡಿದ್ದರೂ ಮಾವು, ಮಾವು, ಮಾವು. ಯಾವ ಕಡೆ ನೋಡಿದರೂ ರಸಭರಿತ ಮಾವಿನದ್ದೇ ಮಾತು. ಇದೀಗ ವಿಶ್ವದಲ್ಲೇ ಅತಿ ದುಬಾರಿಯಾದ ಮಾವಿನ ಹಣ್ಣೊಂದು ಎಲ್ಲರ ಗಮನ ಸೆಳಿದಿದೆ. ಅದ್ರಲ್ಲೂ ಇದನ್ನ ಬೆಳೆಸಿದ ದಂಪತಿ ಒಂದು ಈ ಮಾವನ್ನ ಕಾಪಾಡಿಕೊಳ್ಳೋದಕ್ಕೆ ಎಷ್ಟು ಕಷ್ಟ ಪಡುತ್ತಿದ್ದಾರೋ ಗೊತ್ತಿಲ್ಲ!

Image

ಕಾವಲಿಗೆ 4 ಸೆಕ್ಯೂರಿಟಿ, 6 ನಾಯಿಗಳು
ಮಿಯಾಜಾಕಿ ಅನ್ನೋ ಮಾವು ಇದೀಗ ವಿಶ್ವದ ಅತಿ ದುಬಾರಿಯಾದ ಮಾವಿನಹಣ್ಣು. ಹೀಗಾಗಿ ಆ ಮಾವಿನಹಣ್ಣನ್ನ ಕಾಪಾಡಿಕೊಳ್ಳೋದಕ್ಕೆ ರಾಣಿ ಹಾಗೂ ಸಂಕಲ್ಪ್ ಪರಿಹರ​ ಅನ್ನೋ ದಂಪತಿ ನಾಲ್ಕು ಭದ್ರತಾ ಸಿಬ್ಬಂದಿ ಹಾಗೂ 6 ನಾಯಿಗಳನ್ನ ತಮ್ಮ ತೋಟದಲ್ಲಿ ಬಿಟ್ಟಿದ್ದಾರೆ.

ಈ ದಂಪತಿ ಒಮ್ಮೆ ಮಧ್ಯಪ್ರದೇಶ-ಚೆನ್ನೈ ಟ್ರೈನ್​​ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಮಾವಿನ ಸಸಿಗಳನ್ನ ಕೊಟ್ಟು ನಿಮ್ಮ ಮಕ್ಕಳನ್ನ ನೋಡಿಕೊಳ್ಳುವಂತೆ ನೋಡಿಕೊಳ್ಳಿ. ಇದು ತುಂಬಾ ದುಬಾರಿಯಾದ ಮಾವಿನ ಗಿಡ ಎನ್ನುತ್ತಾರೆ. ಅದರಂತೆ ತಮ್ಮ ಮನೆಯ ತೋಟದಲ್ಲಿ ಈ ಮಾವಿನ ಗಿಡಗಳನ್ನ ಬೆಳಸಿ ದೊಡ್ಡ ಮಾಡಿದ್ದಾರೆ. ಇದೀಗ ಫಸಲು ಬಂದಿದ್ದು, ಕಳೆದ ಬಾರಿ ಬಿಟ್ಟಿದ್ದ ಹಣ್ಣುಗಳು ಕಳ್ಳ-ಕಾಕರ ಪಾಲಾಗಿವೆ. ಹೀಗಾಗಿ ತಮ್ಮ ತೋಟದಲ್ಲಿರುವ ಮಾವಿನ ಹಣ್ಣುಗಳನ್ನ ಜೋಪಾನ ಮಾಡಲು ಇವರು ನಾಲ್ವರು ಭದ್ರತಾ ಸಿಬ್ಬಂದಿ ಹಾಗೂ 6 ನಾಯಿಗಳನ್ನ ಬಂಗಾರದಂತೆ ಜೋಪಾನ ಮಾಡಿಕೊಳ್ಳುತ್ತಿದ್ದಾರೆ.

Image

ಏನಿದರ ಸ್ಪೆಷಲ್..?

  • ಮಿಯಾಜಾಕಿ ಮಾವಿನ ಹಣ್ಣುಗಳು ಜಪಾನ್​​ನಲ್ಲಿ ತಳಿಯಾಗಿದೆ
  • ಜಪಾನ್​​ನಲ್ಲಿ ಹೇರಳವಾಗಿ ಸಿಕ್ಕರೂ ತುಂಬಾ ದುಬಾರಿಯಾದ ಹಣ್ಣು
  • ಸಾಮಾನ್ಯ ಮಾವಿನ ಹಣ್ಣಿನಂತೆ ಇರಲ್ಲ, ಇದು ಬಣ್ಣ ಕಡುಗೆಂಪು
  • ಕಳೆದ ವರ್ಷ ಇದು ಪ್ರತೀ ಕೆಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗಿದೆ
  • ಒಂದು ಹಣ್ಣಿನ ತೂಕ 350 ಗ್ರಾಮ್​​ಕ್ಕಿಂತ ಹೆಚ್ಚಿರುತ್ತದೆ
  • ಶೇಕಡಾ 15 ರಷ್ಟು ಸುಗರ್ ಕಂಟೆಂಟ್ ಈ ಹಣ್ಣಿನಲ್ಲಿ ಇರುತ್ತದೆ
  • ಈ ಹಣ್ಣುಗಳಲ್ಲಿ ಬೇಟಾ ಕ್ಯಾರೊಟೇನ್ ಮತ್ತು antioxidants ರಿಚ್ ಆಗಿರುತ್ತದೆ
  • ಏಪ್ರಿಲ್ ಮತ್ತು ಆಗಸ್ಟ್​ ನಡುವಿನ ಸಮಯದಲ್ಲಿ ಈ ಮಾವಿನ ಗಿಡಗಳು ಫಸಲನ್ನ ನೀಡುತ್ತವೆ

The post ಇದು ವಿಶ್ವದ ಅತಿ ದುಮಾರಿ ಮಾವು; 1 ಕೆಜಿಗೆ ₹3 ಲಕ್ಷ ಇರೋ ಇದನ್ನ ಕಾಯೋದೇ ದೊಡ್ಡ ಸವಾಲು appeared first on News First Kannada.

Source: newsfirstlive.com

Source link