ಮೆಕ್ಸಿಕೋದ ಯುಕಟನ್ ಪೆನಿನ್ಸುಲ ಬಳಿ ಸಮುದ್ರದ ಆಳದಲ್ಲಿ ಭಾರೀ ಗಾತ್ರದ ಗ್ಯಾಸ್ ಲೀಕ್ ಆಗಿದ್ದು ಸಮುದ್ರವೇ ಕುದಿಯುತ್ತಿರುವ ದೃಶ್ಯ ಆತಂಕ ಹುಟ್ಟಿಸುವಂತಿದೆ.

ಆಳ ಸಮುದ್ರದಲ್ಲಿ ಹೂತಿದ್ದ ಗ್ಯಾಸ್​​ ಪೈಪ್​ಲೈನ್​ ಲೀಕ್​ ಆದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು ಸಮುದ್ರ ಕೊತಕೊತನೆ ಕುದಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಸಮುದ್ರದ ಆಳದಿಂದ ಗ್ಯಾಸ್​ ಹೊರಬಿದ್ದಾಗ ಬೆಂಕಿ ಹೊತ್ತಿಕೊಂಡಿದ್ದು ನೀರು ಕುದಿಯುತ್ತಿರುವಂತೆ ಭಾಸವಾಗುತ್ತಿದೆ. ಕುದಿಯುತ್ತಿರುವ ನೀರಿನಿಂದ ಪ್ರಕಾಶಮಾನವಾದ ಹಳದಿ ಜ್ವಾಲೆ ನೀರಿನಿಂದಾಚೆಗೆ ಚಿಮ್ಮುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವೀಡಿಯೋಗೆ ನೀರಿನ ಕಣ್ಣು (ಐ ಆಫ್ ಫೈರ್) ಎಂದು ಹೆಸರಿಡಲಾಗಿದೆ. ಇನ್ನು ಈ ಘಟನೆ ನಡೆದ ಪಕ್ಕದಲ್ಲೇ ಆಯಿಲ್ ಘಟಕವೊಂದು ಇರುವುದನ್ನೂ ಕಾಣಬಹುದಾಗಿದೆ.

ಪ್ರೆಮೆಕ್ಸ್​ ಫ್ಲಾಗ್​ಶಿಪ್​ ಕು ಮಲೂಬ್​ ಜಾಪ್ ಆಯಿಲ್ ಡೆವಲೆಪ್​ಮೆಂಟ್​​ಗೆ ಆಯಿಲ್ ಘಟಕದಿಂದ ಕನೆಕ್ಟ್ ಆಗುವ ಪೈಪ್​ಲೈನ್​ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ. ಸದ್ಯ ಈ ಸೋರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಪ್ರೆಮೆಕ್ಸ್ ಸಂಸ್ಥೆ ಹೇಳಿದೆ.

The post ಇದು ಹಾಲಿವುಡ್ ಸಿನಿಮಾ ಅಲ್ಲ.. ಗ್ಯಾಸ್​ ಲೀಕ್​ ಆಗಿ ಕೊತಕೊತ ಕುದಿಯಿತು ಸಮುದ್ರ appeared first on News First Kannada.

Source: newsfirstlive.com

Source link