ಇದು THANKS ಹೇಳೋ ಸಮಯ.. ಬೆಲೆ ಕಟ್ಟಲಾಗದ ಕೊಹ್ಲಿ, ಶಾಸ್ತ್ರಿ ‘ಜಂಟಿ ಸಾಧನೆ’


ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್ ಇಂಡಿಯಾ ಗುಡ್​ಬೈ ಹೇಳಿದ್ದಾಗಿದೆ. ವಿಶ್ವಕಪ್​ನ ಈ ನಿರ್ಗಮನ ಕ್ರಿಕೆಟ್ ಅಭಿಮಾನಿಗಳಿಗೆ ಸಹಜವಾಗೇ ಬೇಸರ ಮೂಡಿಸಿದ್ದರೂ, ಈ ಜೋಡಿಗೆ ಧನ್ಯವಾದ ಹೇಳುವ ಸಮಯ ಇದಾಗಿದೆ.

ವಿರಾಟ್​​ ಕೊಹ್ಲಿ, ರವಿ ಶಾಸ್ತ್ರಿ.. ಇವರು ಟೀಮ್ ಇಂಡಿಯಾದ ಭಲೇ ಜೋಡಿ. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ಶಕೆಗೆ ನಾಂದಿ ಹಾಡಿದ್ದ ಈ ಜೋಡಿ ಸೃಷ್ಟಿಸಿದ್ದು, ಅದ್ಭುತ.. ಆಕ್ರಮಣಕಾರಿ ಮನೋಭಾವಕ್ಕೆ ಒತ್ತು ನೀಡಿದ್ದ ಈ ಇಬ್ಬರು, ಏಟಿಗೆ ಏಟು, ತಿರುಗೇಟು ಎಂಬಂತ ಫಿಯರ್​ಲೆಸ್ ತಂಡವನ್ನೇ ಕಟ್ಟಿದ್ದಾರೆ, ಬೆಳೆಸಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಈ ಇಬ್ಬರ ಅವಧಿಯಲ್ಲಿ ಟೀಮ್ ಇಂಡಿಯಾ ಸಾಧಿಸಿದ ಐತಿಹಾಸಿಕ ಗೆಲುವುಗಳು.

ಯೆಸ್..! 2017ರಲ್ಲಿ ಹೆಡ್​ಕೋಚ್​ ಅನಿಲ್​ ಕುಂಬ್ಳೆ ನಿರ್ಗಮನದ ಬಳಿಕ, ನಾಯಕ ಕೊಹ್ಲಿಗೆ ಹೆಗಲಾಗಿ ಶ್ರಮಿಸಿದ ಶಾಸ್ತ್ರಿ, ಟೀಮ್ ಇಂಡಿಯಾವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದುರು. ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಟ್ಯಾಗ್​ಲೈನ್​ ಕಿತ್ತೆಸೆದಿದ್ದೆ, ಕೋಚ್ ರವಿ ಶಾಸ್ತ್ರಿ ಆ್ಯಂಡ್ ಕೊಹ್ಲಿ. ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರ್ಡರ್​ ಗವಾಸ್ಕರ್​ ಟ್ರೋಫಿ ಗೆದ್ದ ಐತಿಹಾಸಿಕ ಸಾಧನೆ, ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಕೈವಶದ ಸನಿಹದಲ್ಲಿರುವುದು. ಟೆಸ್ಟ್​​ ಕ್ರಿಕೆಟ್​ನಲ್ಲಿ ಶ್ರೇಷ್ಠ ತಂಡವಾಗಿ ಗುರುತಿಸಿಕೊಂಡಿದ್ದು, ಈ ಇಬ್ಬರ ಜುಂಗಲ್​​ಬಂದಿಯಲ್ಲೇ ಅನ್ನೋದು ಮರೆಯುವಂತಿಲ್ಲ. ಆದ್ರೆ ಒಂದೇ ಒಂದು ಕೊರಗು, ಈ ಇಬ್ಬರ ಅವಧಿಯಲ್ಲಿ ಇನ್ನಿಲ್ಲದಂತೆ ಕಾಡ್ತಿದೆ.

Image

ಟ್ರೋಫಿ ಇಲ್ಲದೆ ಮೋಸ್ಟ್​​ ಸಕ್ಸಸ್​​ಫುಲ್ ಜೋಡಿಯ ನಿರ್ಗಮನ..!
ಏಕದಿನ, ಟಿ20, ಟೆಸ್ಟ್​.. ಹೀಗೆ ಎಲ್ಲಾ ಫಾರ್ಮೆಟ್​ನಲ್ಲಿ ಬಲಿಷ್ಠ ತಂಡವಾಗಿ ಬೆಳೆದಿದ್ದ ಟೀಮ್ ಇಂಡಿಯಾ, ಮೂರು ಫಾರ್ಮೆಟ್​ನಲ್ಲಿ ಇನ್ನಿಲ್ಲದ ಸಾಧನೆಯನ್ನೇ ಮಾಡಿದೆ. ಆದ್ರೆ, ಇವರಿಬ್ಬರ ಅವಧಿಯಲ್ಲಿ ಐಸಿಸಿ ಟ್ರೋಫಿಯನ್ನ ಗೆಲ್ಲಲು ಸಾಧ್ಯವಾಗದ್ದು, ದುರಾದೃಷ್ಟವೇ ಸರಿ.

ಐಸಿಸಿ ಟೂರ್ನಿಯಲ್ಲಿ ಕೊಹ್ಲಿ-ಶಾಸ್ತ್ರಿ ಸಾಧನೆ..!

  • 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕ್​ ವಿರುದ್ಧ ಸೋಲು
  • 2019ರ ಏಕದಿನ ವಿಶ್ವಕಪ್ ಅಭಿಯಾನ ಸೆಮಿಫೈನಲ್‌ನಲ್ಲಿ ಅಂತ್ಯ
  • 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​​ನಲ್ಲಿ ಸೋಲು
  • ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯ ಸೂಪರ್​-12ನಿಂದ ನಿರ್ಗಮನ

ಶಾಸ್ತ್ರಿ-ಕೊಹ್ಲಿ ಅವಧಿಯಲ್ಲಿ ಮೊದಲು ಎದುರಾದ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಫೈನಲ್​​ನಲ್ಲಿ ಮುಗ್ಗರಿಸಿದ್ದ ಟೀಮ್ ಇಂಡಿಯಾ, 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಸೋಲುಂಡಿತ್ತು. ಇದಾದ ನಂತರ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​​ ಫೈನಲ್​​ಗೆ ಎಂಟ್ರಿಕೊಟ್ಟಿದ್ದ ಟೀಮ್ ಇಂಡಿಯಾ, ನ್ಯೂಜಿಲೆಂಡ್​ ವಿರುದ್ಧ ಪಂದ್ಯವನ್ನ ಕೈಚೆಲ್ಲಿತ್ತು.

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಟಿ20 ವಿಶ್ವಕಪ್ ಗೆಲ್ಲೋ ಕನಸಿನಲ್ಲೇ ಕಣ್ಣಕ್ಕಿಳಿದ್ದ ಟೀಮ್ ಇಂಡಿಯಾ, ಸೂಪರ್-12 ಹಂತದಲ್ಲೇ ನಿರ್ಗಮಿಸುವಂತಾಯ್ತು. ಇದರೊಂದಿಗೆ ಐಸಿಸಿ ಟ್ರೋಫಿ ಇಲ್ಲದೆ ಈ ಯಶಸ್ವಿ ಜೋಡಿ, ನಿರ್ಗಮಿಸುವಂತಾಗಿದೆ. ಒಟ್ನಲ್ಲಿ ಐಸಿಸಿ ಟ್ರೋಫಿಯನ್ನ ಈ ಇಬ್ಬರ ಅವಧಿಯಲ್ಲಿ ಟೀಮ್ ಇಂಡಿಯಾ ಗೆಲ್ಲದಿದ್ದರೂ, ಹೊಸ ಪರಂಪರೆಯನ್ನೇ ಹುಟ್ಟುಹಾಕಿದ್ದರು ಅನ್ನೋದನ್ನ ಮಾತ್ರ, ಮರೆಯುವಂತಿಲ್ಲ.

The post ಇದು THANKS ಹೇಳೋ ಸಮಯ.. ಬೆಲೆ ಕಟ್ಟಲಾಗದ ಕೊಹ್ಲಿ, ಶಾಸ್ತ್ರಿ ‘ಜಂಟಿ ಸಾಧನೆ’ appeared first on News First Kannada.

News First Live Kannada


Leave a Reply

Your email address will not be published. Required fields are marked *