ಇದೂ ನಾಟಕ !- ವೈರಲ್​ ಆದ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗುರುತಿಸಿ, ತೋರಿಸಿದ ಕಾಂಗ್ರೆಸ್​ | Congress was quick to point out the anomaly in two Pictures of PM Modi and CM Yogi


ಇದೂ ನಾಟಕ !- ವೈರಲ್​ ಆದ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗುರುತಿಸಿ, ತೋರಿಸಿದ ಕಾಂಗ್ರೆಸ್​

ವೈರಲ್ ಆದ ಫೋಟೋಗಳು

ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಜತೆಗಿರುವ ಎರಡು ಫೋಟೋಗಳು ನಿನ್ನೆಯಿಂದ ವೈರಲ್​ ಆಗುತ್ತಿವೆ. ಈ ಫೋಟೋವನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದರೆ, ಪ್ರತಿಪಕ್ಷಗಳೂ ಸೇರಿ ಹಲವರು ವ್ಯಂಗ್ಯವಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಲಖನೌಗೆ ಭೇಟಿ ಕೊಟ್ಟಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಯೋಗಿ ಆದಿತ್ಯನಾಥ್​ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್​ ಇಬ್ಬರೂ ಆಳವಾದ ಚರ್ಚೆಯಲ್ಲಿ ತೊಡಗಿರುವ ಫೋಟೋಗಳು ಇವಾಗಿದ್ದು, ಮೋದಿಯವರು ಯೋಗಿಯವರ ಹೆಗಲ ಮೇಲೆ ಕೈಹಾಕಿದ್ದಾರೆ. ಹಾಗಾಗಿ ಇವು ವಿಶೇಷ ಫೋಟೋಗಳು ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು.

ಆದರೆ ಪ್ರತಿಪಕ್ಷ ಕಾಂಗ್ರೆಸ್​ ಇಲ್ಲಿಯೂ ವ್ಯಂಗ್ಯವಾಡಿದೆ. ಕ್ಯಾಂಡಿಡ್​​ನಂತೆ ಕಾಣುವ ಈ ಫೋಟೋಗಳು ಖಂಡಿತ ಕ್ಯಾಂಡಿಡ್​ ಅಲ್ಲ. ಪಕ್ಕಾ ಪೋಸ್​ ಎಂದು ಹೇಳಿದೆ. ಕೆಲವು ಕಾಂಗ್ರೆಸ್​ ನಾಯಕರು ತಮ್ಮ ಟ್ವಿಟರ್​ನಲ್ಲಿ ಎರಡೂ ಫೋಟೋಗಳನ್ನು ಶೇರ್ ಮಾಡಿಕೊಂಡು ಇವೆರಡೂ ಫೋಟೋಗಳ ಮಧ್ಯೆ ಇರುವ ವ್ಯತ್ಯಾಸವನ್ನೂ ತೋರಿಸಿದ್ದಾರೆ. ಎರಡೂ ಫೋಟೋಗಳು ಒಂದೇ ಬಾರಿ ತೆಗೆದಿದ್ದಾದರೆ, ಕ್ಯಾಂಡಿಡ್​ ಆಗಿದ್ದರೆ ಹೀಗೇಕೆ ವಿಭಿನ್ನತೆ ಗೋಚರಿಸುತ್ತಿತ್ತು? ಪ್ರಧಾನಿ ಮೋದಿಯವರ ಉಡುಪಿನಲ್ಲೇಕೆ ಬದಲಾವಣೆ ಆಗುತ್ತಿತ್ತು ಎಂಬುದು ಕಾಂಗ್ರೆಸ್ಸಿಗರ ಪ್ರಶ್ನೆ.

ಈ ಫೋಟೋವನ್ನು ಪೋಸ್ಟ್​ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಒಂದು ಫೋಟೋದಲ್ಲಿ ಪ್ರಧಾನಿ ಮೋದಿಯವರು ಹೆಗಲಿಗೆ ಅಂಗೋಚಾ ಹೊದ್ದಿದ್ದಾರೆ. ಇನ್ನೊಂದರಲ್ಲಿ ಶಾಲು ಹಾಕಿಕೊಂಡಿದ್ದಾರೆ. ಎದುರಿನಿಂದ ತೆಗೆದ ಫೋಟೋದಲ್ಲಿ ಮೋದಿಯವರ ಮುಖದಲ್ಲಿ ಕಿರಿಕಿರಿ ಮತ್ತು ಭಯ ಎದ್ದು ಕಾಣುತ್ತಿದೆ. ಈ ಫೋಟೋದಿಂದ ಯೋಗಿಯವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶಿರಂತೆ ಹೇಳಿದ್ದಾರೆ.

ಇನ್ನು ಯುತ್​ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಕೂಡ ಎರಡೂ ಫೋಟೋ ಶೇರ್ ಮಾಡಿಕೊಂಡು ವ್ಯತ್ಯಾಸ ಗುರುತಿಸಿ ಎಂದು ಮಾರ್ಕ್ ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್​ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ

ಕೇರಳದಲ್ಲಿ ಹಲಾಲ್ ಆಹಾರಗಳನ್ನು ನಿಷೇಧಿಸುವಂತೆ ಬಿಜೆಪಿ ನಾಯಕರ ಆಗ್ರಹ; ಅದು ಉಗ್ರಗಾಮಿಗಳ ಅಸ್ತ್ರವೆಂದ ಪಕ್ಷ

TV9 Kannada


Leave a Reply

Your email address will not be published. Required fields are marked *