ಇದೆಂಥ ಅಸಹ್ಯ? ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್​​ಗೆ ಆಫರ್ ಕೊಟ್ಟಿದ್ದ ದಂಪತಿ ಅಂದರ್.. ಹೀಗಂದ್ರೇನು?


ಕಾಮ. ಕ್ರೋಧ, ಮೋಹ, ಮದ, ಮತ್ಸರ, ಲೋಭ ಈ ಅರಿ ಷಡ್ವರ್ಗಗಳು.. ಅಂದ್ರೆ ಈ ಆರು ವೈರಿಗಳಲ್ಲಿಯೇ ಮೊದಲ ಸ್ಥಾನದಲ್ಲಿರೋದು ಕಾಮ.. ಕಾಮ ಒಂಥರ ಕಾಮನ ಬಿಲ್ಲಿನಂತೆ.. ವಿಭಿನ್ನ ಬಣ್ಣದಂತೆ.. ಕಲ್ಪನೆಯಲ್ಲಿ ನೂರಾರು ಬಣ್ಣಗಳ.. ಫ್ಯಾಂಟಸಿಗಳ ಸಂಗಮ.. ಕಾಮ ಶೃಂಗಾರವೂ ಆಗಬಹುದು.. ಕಾಮ ಅಸಹ್ಯಕರವೂ ಆಗಬಹುದು.. ಆದ್ರೆ ಕಾಮದ ಜೊತೆ ಮೋಹ ಹೆಚ್ಚಾಗಿ.. ಲೋಭದ ಸಹಕರ ಸಿಕ್ಕರಂತೂ ಅದು ಅಂಕೆಗೆ ನಿಲುಕದ ಮದ ಬಂದ ಆನೆಯಂತೆ.. ಆ ಕಾಲ್ಪನಿಕ ಆನೆ.. ತಂದಿಡುವ ಅವಾಂತರಗಳು ಅಂತಿಂಥವಲ್ಲ.. ಅದಕ್ಕೆ ಉದಾಹರಣೆಯನ್ನೋವಂಥ ಒಂದು ಘಟನೆ ಬೆಂಗಳೂರಿನಲ್ಲಿ ಮತ್ತೆ ಬೆಳಕಿಗೆ ಬಂದಿದೆ.

ವೈಫ್ ಸ್ವಾಪಿಂಗ್..! ಹೀಗಂದ್ರೆ ಇಬ್ಬರು ವಿವಾಹಿತರು ತಮ್ಮ ತಮ್ಮ ಪತ್ನಿಯರನ್ನ.. ಅದುಲು ಬದಲಾಯಿಸಿಕೊಳ್ಳೋದು.. ತಮ್ಮ ಕಾಮನೆಯ ಕಲ್ಪನೆಗೆ ಗರಿ ಮೂಡಿಸಲು ಹಲವು ಜೋಡಿಗಳು ಇಂಥದ್ದೊಂದು ಅನೈತಿಕ.. ಪರಸ್ಪರ ಒಪ್ಪಿಗೆ ಇದ್ದಾಗ ಕಾನೂನು ಬಾಹಿರವಲ್ಲದ ಕ್ರಿಯೆಯಲ್ಲಿ ತೊಡಗಿಕೊಳ್ಳುವುದುಂಟು.. ಇದು ಸಾಮಾನ್ಯವಾಗಿ ಅತ್ಯಂತ ಕ್ಲೋಸ್​ ಫ್ರೆಂಡ್ಸ್​ ಅಥವಾ ಮಾಜಿ-ಹಾಲಿ ಬಾಯ್​ ಫ್ರೆಂಡ್-ಗರ್ಲ್​ಫ್ರೆಂಡ್​ಗಳ ಮಧ್ಯೆ ನಡೆಯೋದುಂಟು.. ಇಲ್ಲಿ ಪರಸ್ಪರ ಜೋಡಿಗಳು ಎಲ್ಲರೂ ಒಪ್ಪ ಬೇಕಾಗುತ್ತೆ.. ಆದ್ರೆ, ಇಲ್ಲೊಂದು ಜೋಡಿ.. ತಮ್ಮ ಸೋಶಿಯಲ್​ ಮೀಡಿಯಾದಲ್ಲೇ ಪೋಸ್ಟ್​​ ಹಾಕಿ.. ವೈಫ್ ಸ್ವಾಪಿಂಗ್ ಅಥವಾ ಹಸಬಂಡ್ ಸ್ವಾಪಿಂಗ್ ಮಾಡಿಕೊಳ್ಳೋಣ ಬನ್ನಿ ಅಂತ ವಿವರಗಳನ್ನು ಹಾಕಿತ್ತು.. ಸಾಮಾಜಿಕ ಮಾಧ್ಯವನ್ನ ಅನೈತಿಕತೆಗೆ ಬಳಸಿಕೊಳ್ಳಲು ಯತ್ನಿಸಿತ್ತು ಅನ್ನೋ ಆರೋಪ ವಿತ್ತು. ಈಗ ಆ ಜೋಡಿ ಅಂದರ್ ಆಗಿದೆ

ಅಷ್ಟಕ್ಕೂ ಆಗಿದ್ದು ಏನು? 

ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ದಂಪತಿಯ ವಿಕೃತ ಆಟವೊಂದು ಇದೀಗ ಬೆಳಕಿಗೆ ಬಂದಿದೆ. ವೈಫ್ ಸ್ವಾಪಿಂಗ್ ಮೂಲಕ ಹೈಟೆಕ್​ ವೇಶ್ಯಾವಾಟಿಕೆ ನಡೆಸುತ್ತಿದ್ದ ಚಾಲಾಕಿ ದಂಪತಿಗಳು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.

ಏನಿದು ಪ್ರಕರಣ..?
ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಶಾಪ್​ ಸೇಲ್ಸ್​ಮನ್ ಆಗಿರುವ ಪತಿ ಇತ್ತೀಚಿಗೆ, ಸಹದ್ಯೋಗಿ ಯುವತಿಯನ್ನ ಪ್ರೀತಿಸಿ ವಿವಾಹವಾಗಿದ್ದ. ಹೆಂಡತಿಯ ಜೊತೆ ಸುಮಧುರ ಸಂಸಾರ ನಡೆಸುವ ಬದಲು ಗಂಡ ವಿಕೃತ ಬಯಕೆಯೊಂದನ್ನು ಹೊಂದಿದ್ದ. ಪತ್ನಿಯನ್ನ ಫ್ಯಾಂಟಸಿ ಸೆಕ್ಸ್​ಗೆ ಬಳಸುವ ಇಂಗಿತ ವ್ಯಕ್ತಪಡಿಸಿದ್ದ ಪತಿ, ತನ್ನ ಪತ್ನಿ ಇನ್ನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿ, ಅದನ್ನು ತಾನು ನೋಡಬೇಕೆಂಬ ವಿಲಕ್ಷಣ ಬಯಕೆ ಹೊಂದಿದ್ದ ಹಾಗಾಗಿ ಹೆಂಡತಿಯನ್ನು ಈ ಕಳ್ಳಾಟಕ್ಕೆ ದೂಡಿದ್ದ.

News First Live Kannada


Leave a Reply

Your email address will not be published.