ನೂರಾರು ಕೋಟಿ ರೂಪಾಯಿಗಳನ್ನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಂತ ಎತ್ತಿಟ್ಟಿದ್ರು. ಮಾತು ಕೊಟ್ಟಂತೆ ನಡೆದುಕೊಂಡ್ರು. ಜನಸೇವೆಯನ್ನೇ ಬಯಸಿ ಈಗ ಎಲೆಕ್ಷನ್ ಅಖಾಡಕ್ಕೂ ಇಳಿದಿದ್ದಾರೆ. ಅವ್ರೇ ಯುಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು. ರಾಜಕೀಯ ಕ್ಷೇತ್ರ ಅನ್ನೋದು ಬೇರೆ ನೋಡಿ. ಅಲ್ಲಿ ಬರೋ ಟೀಕೆ ಟಿಪ್ಪಣಿಗಳೇ ಈಗ ಬಾಬು ಅವ್ರ ಕಣ್ಣಲ್ಲಿ ನೀರು ಹಾಕಿಸುವಂತೆ ಮಾಡಿದೆ.
ಕೆಜಿಎಫ್ ಬಾಬು.. ಇವ್ರು ಯಾರಿಗೆ ಗೊತ್ತಿಲ್ಲ. ಇವ್ರು ಕೆಲಸ ಯಾರಿಗೆ ಗೊತ್ತಿಲ್ಲ. ಸದಾ ಜನಸೇವೆಯಲ್ಲೇ ಇರ್ತಿದ್ದ ಈ ವ್ಯಕ್ತಿ ಮೊನ್ನೆಯಷ್ಟೇ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ನಗರ ವಿಧಾನ ಪರಿಷತ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದ್ರೆ, ರಾಜಕೀಯದಲ್ಲಿ ಇವ್ರ ವಿರುದ್ಧ ಕೇಳಿ ಬಂದ ಆರೋಪಗಳೇ ಈಗ ಇವ್ರು ಕಣ್ಣೀರಾಕುವಂತೆ ಮಾಡ್ತಿದೆ.
ಕೋಲಾರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಟ್ಟು, ಈಗಾಗಲೇ ಅವ್ರ ಬಾಳು ಬೆಳಗಿಸೋದಕ್ಕೆ ಮುಂದಾಗಿದ್ದ ಈ ಕೆಜಿಎಫ್ ಬಾಬು, ಈಗ ರಾಜಕೀಯ ಕ್ಷೇತ್ರಕ್ಕೂ ಬಂದಿದ್ದಾರೆ. ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಸಹಜ. ನಿನ್ನೆ ಸಚಿವ ಎಸ್ಟಿ. ಸೋಮಶೇಖರ್ ಯುಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ವಿರುದ್ಧ ಆರೋಪ ಮಾಡಿ ಮಾತನಾಡಿದ್ರು. ಆದ್ರೆ, ಆ ಮಾತುಗಳೇ ಈಗ ಬಾಬು ಅವ್ರ ಮನಸಿನ್ನ ಘಾಸಿಗೊಳಿಸಿದೆ. ಈ ಕಾರಣಕ್ಕೆ ಇವತ್ತು ಪ್ರೆಸ್ ಮೀಟ್ ಮಾಡಿ ಕಣ್ಣೀರು ಹಾಕಿದ್ದಾರೆ.
ಮಾತಾಡ್ತಾ ಮಾತಾಡ್ತಾ ಬಾಬು ಭಾವುಕರಾದ್ರು. ರಾಜಕೀಯಕ್ಕೆ ಬಂದು ತಪ್ಪು ಮಾಡ್ದೆ ಅಂತಾ ಕಣ್ಣೀರು ಹಾಕುತ್ತಾ ಅರ್ಧದಲ್ಲೇ ಎದ್ದು ಹೋದ್ರು. ಈ ಬಗ್ಗೆ ಸೋಮಶೇಖರ್ ವಿರುದ್ಧ ಮಾನನಷ್ಟ ಕೇಸ್ ಹಾಕೋದಕ್ಕೂ ಕುಟುಂಬ ಮುಂದಾಗಿದೆ. ಅಲ್ಲದೇ, ಈ ಬಗ್ಗೆ ಮಾತನಾಡಿದ ಬಾಬು ಅವ್ರ ಇಬ್ಬರೂ ಪತ್ನಿಯರು ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ. ನಿಮ್ಮ ಮನೆಯಲ್ಲಿ ಹೆಣ್ಮಕ್ಕಳ ವಿಚಾರ ಪ್ರಸ್ತಾಪ ಮಾಡಿದ್ರೆ ಏನ್ ಆಗುತ್ತೆ ಪ್ರಶ್ನಿಸಿದ್ರು.
ಅಲ್ಲದೆ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದ್ದ ಬಾಬು ಅವ್ರ ಪಾಲುದಾರ ನವೀದ್ ಅನ್ನೋರು ಬ್ಲ್ಯಾಕ್ಮೇಲ್ ಮಾಡ್ತಿದಾರೆ ಅಂತಾ ಆರೋಪಿಸಿ ಅವರ ವಿರುದ್ಧವೂ ದೂರು ಕೊಟ್ಟಿದ್ದಾರೆ. ಸಾವಿರಾರು ಕೋಟಿ ದುಡ್ಡಿದ್ರೂ ಜನಸೇವೆಯನ್ನೇ ಗುರಿಯಾಗಿಸಿಕೊಂಡು ಬಂದ ಕೆಜಿಎಫ್ ಬಾಬು ಅವ್ರಿಗೆ ಈಗ ಆರೋಪಗಳು ಮಾನಸಿಕವಾಗಿ ಜರ್ಝರಿತರಾಗುವಂತೆ ಮಾಡಿದೆ.
The post ಇದೆಲ್ಲಾ ಇರುತ್ತೆ ಅಂದಿದ್ರೆ ರಾಜಕೀಯಕ್ಕೇ ಬರ್ತಿರಲಿಲ್ಲ -ಗಳಗಳನೆ ಕಣ್ಣೀರಿಟ್ಟ KGF ಬಾಬು appeared first on News First Kannada.