ಬಾಲಿವುಡ್​ನ ಕ್ರೇಜಿಯಸ್ಟ್​ ನಟ ಯಾರೂ ಅಂತ ಕೇಳಿದ್ರೆ, ಎಲ್ಲರೂ ಹೇಳೋದು, ರಣವೀರ್​ ಸಿಂಗ್​ ಅಂತ. ಯಾಕೆ? ಅವ್ರು, ಚೂಸ್​ ಮಾಡೋ ಪಾತ್ರಗಳು, ಹಾಕೋ ಬಟ್ಟೆಗಳು ಅಷ್ಟು ಸದ್ದು ಮಾಡ್ತಿರುತ್ತೆ. ದೀಪಿಕಾ ಪಡುಕೋಣೆರವರ ಗಂಡ ರಣವೀರ್​ ಸಿಂಗ್​, ಸದಾ ಒಂದಿಲ್ಲೊಂದು ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರೆಲ್​ ಆಗ್ತಾನೇ ಇರ್ತಾರೆ, ಇದೀಗ ಮತ್ತೆ ತಮ್ಮ ಹೊಸಾ ಲುಕ್​ನಲ್ಲಿ ರಣವೀರ್​ ಕಾಣಿಸಿಕೊಂಡಿದ್ದು, ಜನ ಹೊಟ್ಟೆ ಹಿಡಿದು ನಗುವಷ್ಟು ಕ್ರೇಜಿಯಾಗಿ ಕಾಣಿಸ್ತಾಯಿದ್ದಾರೆ.

ಈಗಲೂ ಸಹ, ರಣವೀರ್​ ಹೊಸಾ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ. ‘ಅಯ್ಯೋ ಇದೇನಿದು, ಈ ರೀತಿ ರೆಡಿಯಾಗಿದ್ದಾರೆ’ ಅಂತ ಮಾತಾಡಿಕೊಳ್ತಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ, ಬಾಲಿವುಡ್​ ಸೆಲಬ್ರಿಟಿಸ್​ಗಳು ಕೂಡ  ರಣವೀರ್​ ಸಿಂಗ್​ ಫೋಟೋಗೆ ಕಮೆಂಟ್​ ಹಾಕ್ತಾಯಿದ್ದಾರೆ. ಅದ್ರಲ್ಲೂ, ರಣವೀರ್​ ಸಿಂಗ್​ರ ಡ್ರೆಸ್ಸಿಂಗ್​ ಸೆನ್ಸ್​ ಹೇಗ್​ ಇದೆ ಅನ್ನೋದು ನಿಮ್ಮೆಲ್ಲರಿಗೂ ಗೊತ್ತು. ಅದರಂತೆಯೇ, ಈ ಸಲ, ಫೋಟೋಶೂಟ್​ ಮಾಡಿಸಿದ್ದಾರೆ, ಅದ್ರಲ್ಲಿ, ನೀಲಿ ಬಣ್ಣದ ಗುಸ್ಸಿ​ಯ​, ಪ್ಯಾಂಟು ಟಾಪು ಹಾಕಿಕೊಂಡು, ಬೂದು ಬಣ್ಣದ ಟೋಪಿ ಹಾಕಿಕೊಂಡು, ಕೂದಲನ್ನ ಉದಕ್ಕೆ ಬಿಟ್ಟು, ಕೂಲಿಂಗ್​ ಗ್ಲಾಸ್​ ಹಾಕಿಕೊಂಡು, ವಿಭಿನ್ನವಾಗಿ ರೆಡಿಯಾಗಿದ್ದಾರೆ. ಇದನ್ನ ಅವ್ರು ತಮ್ಮ ಇನ್​ಸ್ಟಾ ಪೇಜ್​ನಲ್ಲೂ ಹಾಕಿಕೊಂಡಿದ್ದಾರೆ. ಈ ಫೋಟೋಗಳಿಗೆ, ಪೂಜಾ ಹೆಗ್ಡೆ ಕಮ್ಮೆಂಟ್​ ಮಾಡಿದ್ದು, ‘ಹುಚ್ಚಾ’ ಅಂತ ಕಮ್ಮೆಂಟ್​ ಮಾಡಿದ್ದಾರೆ.

 

The post ಇದೇನಿದು ಕೌರವೇಸಾ.. ಹೊಸ ವೇಸಾ?! ಯಪ್ಪಾ ಸಿಕ್ಕಾಪಟ್ಟೆ ವೈರಲ್ ಆಯ್ತು ರಣ್ವೀರ್ ಲುಕ್..! appeared first on News First Kannada.

Source: newsfirstlive.com

Source link