ಇದೇ ಕಾರಣಕ್ಕೆ ಅಭಿಮಾನಿಗಳು MSD ಇಷ್ಟ ಪಡೋದು; ಇಲ್ಲಿದೆ ಬೆಸ್ಟ್​ ಎಕ್ಸಾಂಪಲ್


ಮುಂದಿನ ಆವೃತ್ತಿಯ ಐಪಿಎಲ್​ಗೆ ಚೆನ್ನೈ ಧೋನಿಯನ್ನ ಉಳಿಸಿಕೊಳ್ಳೋದು ಖಚಿತ. ಆದ್ರೆ ಈ ಬಗ್ಗೆ ಧೋನಿ ಹೇಳಿಕೆಯೊಂದು ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಅದು ಧೋನಿ ಚೆನ್ನೈ ಪರ ಆಡ್ತಾರಾ ಇಲ್ವೋ ಅನ್ನೋ ಗೊಂದಲಕ್ಕೆ ಉತ್ತರವೇ ಸಿಗದಂತೆ ಮಾಡಿದೆ.

ನವೆಂಬರ್​​ 30 ಆಟಗಾರರನ್ನ ರಿಟೈನ್​​ ಮಾಡಿಕೊಳ್ಳಲು ಬಿಸಿಸಿಐ, ಫ್ರಾಂಚೈಸಿಗಳಿಗೆ ನೀಡಿರುವಂತಹ ಡೆಡ್​ಲೈನ್. ಅದಕ್ಕಾಗಿ ಫ್ರಾಂಚೈಸಿಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ತಿವೆ. ಆದರೆ ಅದಕ್ಕೂ ಮುನ್ನವೇ ಚೆನ್ನೈ ಸೂಪರ್​​ ಕಿಂಗ್ಸ್​ ಫ್ರಾಂಚೈಸಿಗೆ ನಾಯಕ MS ಧೋನಿ, ಡಿಮ್ಯಾಂಡೊಂದನ್ನ​​​​​​​ ಮುಂದಿಟ್ಟಿದ್ದಾರೆ. ಅದರಲ್ಲೂ ಧೋನಿ ಮುಂದಿಟ್ಟಿರುವ ಬೇಡಿಕೆ ಕೇಳಿದರೆ ಅದೆಂಥವರನ್ನೇ ಆಗಲಿ ಅಚ್ಚರಿ ಮೂಡಿಸುತ್ತದೆ. ಮಾಹಿಯನ್ನ ಫ್ಯಾನ್ಸ್​​ ಇಷ್ಟಪಡೋದಕ್ಕೆ, ಇದು ಬೆಸ್ಟ್​ ಎಕ್ಸಾಂಪಲ್​ ಕೂಡ ಹೌದು.

MS ಧೋನಿ.. ಕ್ರಿಕೆಟ್​​​​​ನ ಮಿಸ್ಟರ್​ ಪರ್ಫೆಕ್ಟ್​.. ಅದೆಷ್ಟೋ ಕ್ರಿಕೆಟಿಗರಿಗೆ ಗಾಡ್​ ಫಾದರ್​​. 15ನೇ ಆವೃತ್ತಿಯ IPL​ಗೆ ಧೋನಿ ರಿಟೈನ್​ ಆಗೋದು ಖಚಿತ. ಜೊತೆಗೆ ಫ್ರಾಂಚೈಸಿಯ ಮೊದಲ ಆಯ್ಕೆ ಕೂಡ ಅವರೇ ಆಗಿದ್ದಾರೆ. IPL​​ನ 14 ಆವೃತ್ತಿಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಧೋನಿ, ತಂಡವನ್ನ 9 ಬಾರಿ ಫೈನಲ್​​​ಗೇರಿಸಿದ್ದು, 4 ಬಾರಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ. ಹಾಗಾಗಿ ಇಂತಹ ಆಟಗಾರರನ್ನ ರಿಟೈನ್​​​ ಮಾಡಿಕೊಳ್ಳಲು ಸಿಎಸ್​ಕೆ ತುದಿಗಾಲಲ್ಲಿ ನಿಂತಿದ್ರೆ, ಧೋನಿ ಮಾತ್ರ ನನ್ನ ಬದಲಿಗೆ ಬೇರೆ ಆಟಗಾರರನ್ನ ಮೊದಲು ರಿಟೈನ್​ ಮಾಡಿಕೊಳ್ಳಿ ಎಂದು ಹೇಳುವ ಮೂಲಕ, ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.

ಧೋನಿ ಹೇಳಿರೋದೇನು..?
15ನೇ ಆವೃತ್ತಿಯ ಮೆಗಾ ಹರಾಜಿನಲ್ಲಿ ನನಗೆ ದೊಡ್ಡ ಮೊತ್ತ ನೀಡಿ ರಿಟೈನ್​ ಮಾಡಿಕೊಳ್ಳಬೇಡಿ. ಜೊತೆಗೆ ನನ್ನನ್ನೇ ರಿಟೈನ್​​​ನಲ್ಲಿ ಮೊದಲ ಆದ್ಯತೆಯಾಗಿ ಪರಿಗಣಿಸೋದು ಬೇಡ ಎಂದು ಹೇಳಿದ್ದಾರೆ. ನನಗಿಂತ ಅಧಿಕ ಮೊತ್ತಕ್ಕೆ ಬಿಕರಿ ಆಗುವ ಅರ್ಹ ಆಟಗಾರರಿದ್ದು, ನನ್ನ ಬದಲಿಗೆ ಅಂತಹ ಆಟಗಾರರ ಖರೀದಿಸುವಂತೆ ಚೆನ್ನೈ ಮ್ಯಾನೇಜ್ಮೆಂಟ್​ಗೆ ಪ್ರಸ್ತಾಪ ಇಟ್ಟಿದ್ದಾರೆ ಕೂಲ್ ಕ್ಯಾಪ್ಟನ್​. ಐಪಿಎಲ್​​ ಮುಗಿದು ಕೆಲ ದಿನಗಳ ಬಳಿಕ ಕೂಡ ಇದೇ ಪ್ರಸ್ತಾಪವನ್ನ ಫ್ರಾಂಚೈಸಿ ಮುಂದಿಟ್ಟಿದ್ದ ಧೋನಿ, ನನ್ನ ಮೇಲೆ ಹಣ ಸುರಿದು ವ್ಯರ್ಥ ಮಾಡಿಕೊಳ್ಳಬೇಡಿ ಎಂದಿದ್ರು.

ಧೋನಿ ಹಿಂದೆ ಸರಿಯುವ ನಿರ್ಧಾರದ ಹಿಂದಿರುವ ಪ್ಲಾನ್​ ಏನು?
ರಿಟೈನ್​ ಮಾಡಿಕೊಳ್ಳಬೇಡಿ ಎಂಬ ನಿರ್ಧಾರದ ಬಗ್ಗೆ, ಧೋನಿ ಸ್ಪಷ್ಟವಾದ ಪ್ಲಾನ್​ ಹಾಕಿಕೊಂಡಿದ್ದಾರೆ. ಆದರೆ ಮೂರು ಆವೃತ್ತಿಗಳನ್ನ ನಿರಂತರವಾಗಿ ಆಡುತ್ತಾರೆ ಎಂಬ ಕ್ಲಾರಿಟಿ ಇಲ್ಲವಾಗಿದೆ. IPL ಆಡಬೇಕೇ ಬೇಡವೇ ಅನ್ನೋದನ್ನ ಆಯಾ ಆವೃತ್ತಿ ಮುಗಿದಾಗಲೇ ಸ್ಪಷ್ಟಪಡಿಸುವ ನಿರ್ಧಾರಕ್ಕೆ ಬಂದಿದ್ದಾರೆ ಧೋನಿ. ಆದ್ದರಿಂದಲೇ ರಿಟೈನ್​ ಮಾಡಿಕೊಳ್ಳಬೇಡಿ ಎಂದು ಫ್ರಾಂಚೈಸಿಗೆ ಸೂಚಿಸಿದ್ದಾರೆ.

ಇತ್ತೀಚಿಗೆ ಚೆನ್ನೈನಲ್ಲಿ ನಡೆದ ‘THE CHAMPIONS CALL’ ಕಾರ್ಯಕ್ರಮದಲ್ಲೂ MSD ಇದೇ ರೀತಿಯ ಹೇಳಿಕೆ ನೀಡಿದ್ರು. ನನ್ನ ಕೊನೆಯ ಐಪಿಎಲ್​, ಚೆನ್ನೈನಲ್ಲೇ ಆಡುತ್ತೇನೆ. ಅದು ಮುಂದಿನ ವರ್ಷವೇ ಆಗಬಹುದು, ಇಲ್ಲವೇ ಐದು ವರ್ಷಗಳಾಗಬಹುದು ಅಂತ ಹೇಳಿದ್ರು. ಧೋನಿ ನೀಡಿದ ಈ ಶಾಕಿಂಗ್​ ಹೇಳಿಕೆಯಿಂದ ಸಿಎಸ್​​​ಕೆ ಫ್ರಾಂಚೈಸಿ ಗೊಂದಲಕ್ಕೆ ಒಳಗಾಗಿದೆ.

ಒಟ್ಟಿನಲ್ಲಿ ಮುಂದಿನ ಆವೃತ್ತಿಯ ಐಪಿಎಲ್​​ನಲ್ಲಿ ಧೋನಿ ಆಡೋದೇನೋ ಕನ್ಫರ್ಮ್​ ಎಂದು ಹೇಳಲಾಗ್ತಿದೆ. ಆದರೆ ಐಪಿಎಲ್​​ಗೆ ಗುಡ್​​ ಬೈ ಯಾವಾಗ ಹೇಳ್ತಾರೆ ಅನ್ನೋದನ್ನ ಅವರ ಬಾಯಲ್ಲೇ ಕೇಳುವವರೆಗೂ ಸ್ಪಷ್ಟತೆ ಸಿಗೋದಿಲ್ಲ.

The post ಇದೇ ಕಾರಣಕ್ಕೆ ಅಭಿಮಾನಿಗಳು MSD ಇಷ್ಟ ಪಡೋದು; ಇಲ್ಲಿದೆ ಬೆಸ್ಟ್​ ಎಕ್ಸಾಂಪಲ್ appeared first on News First Kannada.

News First Live Kannada


Leave a Reply

Your email address will not be published. Required fields are marked *