ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿರುವ ಬಿಗ್‍ಬಾಸ್ ವೀಕ್ಷಕರಿಗೆ ಖಾಸಗಿ ವಾಹಿನಿ ಬಿಗ್‍ಬಾಸ್ ಪ್ರಾರಂಭವಾಗುತ್ತಿದೆ ಎಂದು ಸಿಹಿ ಸುದ್ದಿಯನ್ನು ನೀಡಿತ್ತು. ಆದರೆ ಯಾವಾಗ ಶುರುವಾಗುತ್ತದೆ ಎಂಬ ವಿಚಾರ ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಆದರೆ ಇದೀಗ ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

2ನೇ ಇನ್ನಿಂಗ್ಸ್ ಆಡೋದಕ್ಕೆ ಸ್ಪರ್ಧಿಗಳು ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ. ಇದೇ ಬುಧವಾರ ಸಂಜೆ 6ಕ್ಕೆ ಬಿಗ್‍ಬಾಸ್ ಸೆಕೆಂಡ್ ಇನಿಂಗ್ಸ್ ಮೊದಲ ದಿನದ ಮಹಾಸಂಚಿಕೆ ಶುರುವಾಗಲಿದೆ. 12 ಮಂದಿ ಸ್ಪರ್ಧಿಗಳು ತಯಾರಿದ್ದಾರೆ. ಅರ್ಧಕ್ಕೆ ನಿಂತಿದ್ದ ಕನಸು ಮುಂದುವರಿಯುತ್ತಾ? ಅಥವಾ ಹೊಸ ಕನಸು ಪ್ರಾರಂಭವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಗ್‍ಬಾಸ್ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಅರ್ಧದಲ್ಲಿಯೇ ನಿಂತು ಹೋಗಿತ್ತು. ಸ್ಪರ್ಧಿಗಳು ತಾವು ಕಟ್ಟಿಕೊಂಡು ಬಂದಿದ್ದ ಕನಸನ್ನು ಬಿಗ್‍ಬಾಸ್ ಮನೆಯಲ್ಲಿಯ ಈಡೇರಿಸಿಕೊಳ್ಳಲಾರದೆ ಅರ್ಧಕ್ಕೆ ಬಂದಿದ್ದರು. ಇದೀಗ ಅವರ ಕನಸು ನನಸಾಗುವ ಸಮಯ ಬಂದಿದೆ. ಸ್ಪರ್ಧಿಗಳು ಹೊಸ ಗೇಮ್ ಪ್ಲ್ಯಾನ್‍ನೊಂದಿಗೆ ಗ್ರ್ಯಾಂಡ್ ಆಗಿ ಮನೆಯನ್ನು ಪ್ರವೇಶ ಮಾಡಲಿದ್ದಾರೆ.

ಜಗಳ, ಮುನಿಸು, ಗೇಮ್, ಸ್ನೇಹ, ಕಾಮಿಡಿ ಇರುವ ಮನೆಯಲ್ಲಿ ಇನ್ನೂ ಏನೋ ಹೊಸತು ಇರಲಿದೆ. ಏನೆಲ್ಲಾ ಬದಲಾವಣೆಯನ್ನು ಬಿಗ್‍ಬಾಸ್ ಮಾಡಿಕೊಂಡಿದ್ದಾರೆ. ಯಾವೆಲ್ಲಾ ಮಸಾಲೆಯನ್ನು ಹಾಕಿ ಬಿಗ್‍ಬಾಸ್ ಮೊದಲ ಇನ್ನಿಂಗ್ಸ್‍ಗಿಂತ ವಿಭಿನ್ನವಾಗಿ ತೆರೆ ಮೇಲೆ ತರಲಿದ್ದಾರೆ? ಹಳೆ ಸ್ಪರ್ಧಿಗಳ ಜೊತೆಗೆ ಮತ್ತೆ ಯಾರಾದ್ರೂ ಹೊಸಬರು ಬಿಗ್‍ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ಗೆ ಕೌಂಡ್‍ಡೌನ್ ಪ್ರಾರಂಭವಾಗಿದೆ. ಇನ್ನೇನ್ ಇದ್ದರು ಬಿಗ್‍ಬಾಸ್ ಆಟ ಶುರು..

The post ಇದೇ ಬುಧವಾರದಿಂದ ಬಿಗ್‍ಬಾಸ್ ಪ್ರಾರಂಭ appeared first on Public TV.

Source: publictv.in

Source link