ನವದೆಹಲಿ: ದೇಶದ ಶಾಲೆಗಳಲ್ಲಿ ಶಿಕ್ಷಕರಿಗಿಂತ ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ಯುಡಿಐಎಸ್ಇ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಶಿಕ್ಷಕಿಯರು ಮೊದಲ ಬಾರಿಗೆ ತಮ್ಮ ಪುರುಷ ಸಹವರ್ತಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವುದು ಬಹಿರಂಗವಾಗಿದೆ.

ದೇಶದ 96.8 ಲಕ್ಷ ಶಿಕ್ಷಕರಲ್ಲಿ 49.2 ಲಕ್ಷ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 2012-13ರಲ್ಲಿ, ದೇಶಾದ್ಯಂತ 35.8 ಲಕ್ಷ ಶಿಕ್ಷಕಿಯರು 42.4 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ 7 ವರ್ಷಗಳಲ್ಲಿ ಅದು ಸುಮಾರು 37% ಅಥವಾ 13 ಲಕ್ಷದಷ್ಟು ಹೆಚ್ಚಾಗಿದೆ. ಹೆಚ್ಚು ಶಿಕ್ಷಕಿಯರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ..

The post ಇದೇ ಮೊದಲು.. ಭಾರತದ ಶಾಲೆಗಳಲ್ಲಿ ಶಿಕ್ಷಕರಿಗಿಂತ ಶಿಕ್ಷಕಿಯರ ಸಂಖ್ಯೆಯೇ ಹೆಚ್ಚು appeared first on News First Kannada.

Source: newsfirstlive.com

Source link