ಇದೇ ಮೊದಲು: ಸಿಆರ್​ಪಿಎಫ್ ಐಜಿ ಶ್ರೇಣಿಗೆ ಮಹಿಳೆಯರು, ಮಹಿಳಾ ಸಮಾನತೆ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು – 2 Women Get Inspector General Rank In CRPF for the First time For Paramilitary Force


ಸಿಆರ್‌ಪಿಎಫ್ (CRPF) ನಲ್ಲಿ ಮೊದಲ ಮಹಿಳಾ ಬೆಟಾಲಿಯನ್ ಅನ್ನು ಸ್ಥಾಪಿಸಿದ 35 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳು ಇನ್ಸ್ಪೆಕ್ಟರ್ ಜನರಲ್ (IG) ದರ್ಜೆಗೆ ಬಡ್ತಿ ಪಡೆದಿದ್ದಾರೆ.

ಇದೇ ಮೊದಲು: ಸಿಆರ್​ಪಿಎಫ್ ಐಜಿ ಶ್ರೇಣಿಗೆ ಮಹಿಳೆಯರು, ಮಹಿಳಾ ಸಮಾನತೆ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು

ಅನ್ನಿ ಅಬ್ರಹಾಂ ಮತ್ತು ಸೀಮಾ ಧುಂಡಿಯಾ

ದೆಹಲಿ: ಯಾವ ಕ್ಷೇತ್ರವನ್ನೂ ಬಿಡದೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಹೆಸರನ್ನು ಮಾಡಿ ಮುನ್ನುಗ್ಗುತ್ತಿದ್ದಾರೆ. ಇದರ ಪೈಕಿ ದೇಶದ ಅತಿ ದೊಡ್ಡ ಅರೆ ಮಿಲಿಟರಿ ಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (Central Reserve Police Force – CRPF)ಯಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಇನ್‌ಸ್ಪೆಕ್ಟರ್ ಜನರಲ್ (Inspector General -IG) ಶ್ರೇಣಿಗೆ ಬಡ್ತಿ ನೀಡಲಾಗಿದೆ.

ಸಿಆರ್‌ಪಿಎಫ್ (CRPF) ನಲ್ಲಿ ಮೊದಲ ಮಹಿಳಾ ಬೆಟಾಲಿಯನ್ ಅನ್ನು ಸ್ಥಾಪಿಸಿದ 35 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅನ್ನಿ ಅಬ್ರಹಾಂ ಮತ್ತು ಸೀಮಾ ಧುಂಡಿಯಾ ಇಬ್ಬರು ಮಹಿಳಾ ಅಧಿಕಾರಿಗಳು ಇನ್ಸ್ಪೆಕ್ಟರ್ ಜನರಲ್ (IG) ದರ್ಜೆಗೆ ಬಡ್ತಿ ಪಡೆದಿದ್ದಾರೆ. ಉಭಯ ಅಧಿಕಾರಿಗಳು 1987ರಲ್ಲಿ ಸೇರ್ಪಡೆಯಾಗಿದ್ದರು. ಐಜಿ ಹುದ್ದೆಯ CRPFನ ಒಂದು ವಲಯದ ಮುಖ್ಯ ಅಧಿಕಾರಿ ಹುದ್ದೆಯಾಗಿರುತ್ತದೆ. CRPF ಪ್ರಧಾನ ಕಚೇರಿಯ ಆದೇಶದ ಪ್ರಕಾರ, ಅನ್ನಿ ಅಬ್ರಹಾಂ ಅವರನ್ನು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್)ನ ಐಜಿಯಾಗಿ ನೇಮಿಸಲಾಗಿದೆ. ಆದರೆ ಸೀಮಾ ಧುಂಡಿಯಾ ಅವರನ್ನು ಬಿಹಾರ ವಲಯದ ಐಜಿಯಾಗಿ ನಿಯೋಜಿಸಲಾಗಿದೆ. ಮಹಿಳೆಯೊಬ್ಬರು ಆರ್‌ಎಎಫ್‌ನ ಮುಖ್ಯಸ್ಥರಾಗುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TV9 Kannada


Leave a Reply

Your email address will not be published.