ಇದೇ ಮೊದಲ ಬಾರಿಗೆ ಆಸ್ತಿ ಘೋಷಿಸಿದ TTD, ಅಬ್ಬಬ್ಬಾ…ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ಗೊತ್ತಾ? | Lord Venkateswara properties are worth Rs 85705 crore across India says Tirumala trust


ಜಗತ್ತಿನ ಅತ್ಯಂತ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ತಿರುಪತಿ ತಿಮ್ಮಪ್ಪನ ಆಸ್ತಿ ಎಷ್ಟು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಹೈದರಾಬಾದ್‌: ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿ ತಿರುಪತಿ ತಿಮ್ಮಪ್ಪನ(Tirupati Timmappa) ಪಡೆದುಕೊಂಡಿದ್ದಾನೆ. ಆದ್ರೆ, ಇದುವರೆಗೂ ತಿಮ್ಮಪ್ಪನ ಆಸ್ತಿ ಎಷ್ಟು ಎನ್ನುವ ನಿಖರವಾಗಿ ಎಲ್ಲೂ ಇಲ್ಲ. ಈ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ಆಸ್ತಿ ಅಷ್ಟಿದೆ. ಇಷ್ಟಿದೆ ಅಂತೆಲ್ಲಾ ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿದ್ದವು.

ಆದ್ರೆ, ಇದೀಗ, ತಿಮ್ಮಪ್ಪನ ಆಸ್ತಿ ಎಷ್ಟಿದೆ ಎನ್ನುವುದನ್ನು ಟಿಟಿಡಿ(Tirumala Tirupati Devasthanams (TTD) ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ. ದೇಗುಲದ ಒಟ್ಟು ಸ್ಥಿರಾಸ್ತಿ ಕುರಿತು ಟಿಟಿಡಿ ಶ್ವೇತಪತ್ರ ಬಿಡುಗಡೆ ಮಾಡಿದೆ.

ಹೌದು…ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್‌ ನೀಡಿದ ಮಾಹಿತಿ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪ ದೇವಾಲಯ, ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು. ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದೆ. ಅಲ್ಲದೇ ದೇಶದ ವಿವಿಧ ಕಡೆ ಒಟ್ಟು 7123 ಎಕರೆ ಪ್ರದೇಶದಲ್ಲಿ ತಿರುಪತಿ ದೇಗುಲದ 960 ಸ್ಥಿರಾಸ್ತಿಗಳಿವೆ ಎಂದು ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published.