ಕೆಲವು ವಿಜ್ಞಾನಿಗಳು ಈ ಭೂಮಿ ಅಥವಾ ಮಾನವ ಕುಲ ಹೇಗೆ ನಾಶವಾಗುತ್ತೆ ಅನ್ನೋದಕ್ಕೆ ಕೊಟ್ಟಿರೋ ಹೇಳಿಕೆಗಳು ಅಚ್ಚರಿ ಹುಟ್ಟಿಸುವಂಥವು. ವಿಜ್ಞಾನಿಗಳ ಪ್ರಕಾರ ಮುಂದೊಂದು ದಿನ ಮಾನವನ ಪ್ರಗತಿ ಅಥವಾ ಆಧುನಿಕತೆಯೇ ಅವನ ಅಂತ್ಯಕ್ಕೆ ಕಾರಣವಾಗಬಹುದು. ಅಥವಾ ಉಲ್ಕೆಯೊಂದು ಭೂಮಿಗೆ ಬಡಿದು ಲಕ್ಷಾಂತರ ವರ್ಷಗಳ ಹಿಂದೆ ಡೈನೋಸಾರ್​ಗಳು ಅವನತಿ ಹೊಂದಿದಂತೆ ಮಾನವ ಕುಲವೂ ಅವನತಿ ಹೊಂದಬಹುದು. ಅಥವಾ ವಿಚಿತ್ರ ಕಾಯಿಲೆಯೊಂದರಿಂದ ಇಡೀ ಮನುಕುಲ, ಜೀವಕುಲವೇ ನಾಶವಾಗಬಹುದು ಎಂದು ಆಯಾ ಕಾಲಕ್ಕೆ ಭವಿಷ್ಯ ನುಡಿದಿದ್ದಾರೆ.

ರೋಬೋ ದಾಳಿ

ಇವುಗಳಲ್ಲಿ ಒಂದು ರೋಬೋಟ್​ಗಳು ಮಾನವ ಕುಲವನ್ನ ಅಂತ್ಯಗೊಳಿಸಬಹುದು ಎನ್ನುವುದು. ರೋಬೋಟ್​ಗಳು ಹೇಗೆ ಮಾನವ ಕುಲವನ್ನ ಅಂತ್ಯಗೊಳಿಸುತ್ತೆ ಅನ್ನೋ ಪ್ರಶ್ನೆಗೆ ಉತ್ತರ ನೋಡೋದಾದ್ರೆ.. ನೀವು ಆರ್ಟಿಫಿಷಿಯಲ್ ಇಂಟಲಿಜನ್ಸ್ ಬಗ್ಗೆ ಕೇಳಿರಬಹುದು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಎಂದರೆ ತನಗೆ ತಾನೇ ಯೋಚಿಸಿ ನಿರ್ಧಾರಕ್ಕೆ ಬರುವ ತಂತ್ರಜ್ಞಾನ. ಈ ತಂತ್ರಜ್ಞಾನವನ್ನ ಈಗಾಗಲೇ ರೋಬೋಟ್​ಗಳಿಗೆ ಅಳವಡಿಸಲು ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಈ ತಂತ್ರಜ್ಞಾನ ತನ್ನ ಮಿತಿಯನ್ನು ಮೀರಿ ಅತಿರೇಕಕ್ಕೆ ತಲುಪಿದಾಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿಕ್ಕಾಗಿ ಮಾನವನ ಮೇಲೆ ದಾಳಿ ಮಾಡಲು ಮುಂದಾಗುವ ಸಾಧ್ಯತೆಯಿದೆಯಂತೆ. ಅದ್ರಲ್ಲೀ ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ಗೆ ರೋಬೋಟ್​ ಬಾಡಿ ಸಿಕ್ಕರೆ ಅದನ್ನೇ ಆಯುಧವನ್ನಾಗಿಸಿಕೊಂಡು ಮನುಷ್ಯನ ಮೇಲೆ ದಾಳಿಗಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಕಿಲ್ಲರ್ ಡ್ರೋಣ್

ಯುನೈಟೆಡ್​ ನೇಷನ್​ ಕಿಲ್ಲರ್​ ಡ್ರೋಣ್​ ಅನ್ನೋ ರೋಬೋ ಯಾವುದೇ ಅಪ್ಪಣೆಯಿಲ್ಲದೇ ಓರ್ವ ಮನುಷ್ಯನನ್ನ ಇತ್ತೀಚೆಗೆ ಕೊಂದಿದೆ ಅನ್ನೋ ಬೆಚ್ಚಿಬೀಳಿಸುವ ಸುದ್ದಿಯೊಂದನ್ನ ಹೊರಹಾಕಿದೆ. 2018ರಲ್ಲಿ ಇದೇ ಯುನೈಟೆಡ್​ ನೇಷನ್​ ಎಲ್ಲಾ ಕಿಲ್ಲಿಂಗ್​ ರೋಬೋಗಳನ್ನ ಬ್ಯಾನ್​ ಮಾಡುವಂತೆ ಹೇಳಿತ್ತು. ಆದ್ರೆ, ಈಗಿನ ರಿಪೋರ್ಟ್​ ಪ್ರಕಾರ ಕಿಲ್ಲಿಂಗ್​ ರೋಬೋಗೆ ಯಾವುದೇ ಆಕ್ಟಿವೇಟೆಡ್​ ಕೋಡ್​ಗಳಿಲ್ಲದೆಯೇ ಅದು ಆಪರೇಟ್​ ಆಗ್ತಾಯಿದ್ದು ಮನುಷ್ಯರನ್ನ ಅಟ್ಯಾಕ್​ ಮಾಡಿದೆಯಂತೆ. ಟರ್ಕಿಶ್​ ಮಿಲಿಟರಿ ಕಂಪನಿಯೊಂದು ಕಾರ್ಗು -2 ಎಂಬ ಕ್ವಾಡ್​ಕಾಪ್ಟರ್​ ಎಂಬ ಡ್ರೋಣ್​ನ್ನ ತಯಾರಿಸಿದ್ದು ಅದು ಇನ್ನೂ ಜೀವಂತವಾಗಿದೆ ಅಂತ ಸಂಯುಕ್ತ ರಾಷ್ಟ್ರ ಸಂಸ್ಥೆ ಸ್ಪಷ್ಟ ಪಡಿಸಿದೆ. ಹೀಗಾಗಿ ವಿಜ್ಞಾನಿಗಳು ಹೇಳಿದ್ದ ಭವಿಷ್ಯ ನಿಜವಾಗುತ್ತಿದೆಯಾ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ.

 

 

 

 

 

The post ಇದೇ ಮೊದಲ ಬಾರಿಗೆ ಮನುಷ್ಯನ ಮೇಲೆ ದಾಳಿ ಮಾಡಿದ ರೋಬೋಟ್: ನಿಜವಾಗುತ್ತಾ ಭವಿಷ್ಯ..? appeared first on News First Kannada.

Source: newsfirstlive.com

Source link