ಬೆಂಗಳೂರು: ನಗರದಲ್ಲಿ ಇಂದು ಮಹಿಳೆಯೊಬ್ಬರು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಬೆಡ್​ ಸಿಕ್ಕರೂ ಆಕೆಯ ಗಂಡ ಆ್ಯಂಬುಲೆನ್ಸ್​​ನಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಹೆಚ್​ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇದಕ್ಕೆಲ್ಲಾ ರಾಜ್ಯ ಸರ್ಕಾರವೇ ಉತ್ತರ ಕೊಡಬೇಕು ಎಂದಿದ್ದಾರೆ.

ನ್ಯೂಸ್​​ಫಸ್ಟ್​ ಜೊತೆ ಮಾತನಾಡಿದ ಹೆಚ್​ಡಿಕೆ, ಇದೊಂದು ದರಿದ್ರ ಸರ್ಕಾರ. ಯಾವುದೇ ಮುನ್ನೆಚ್ಚರಿಕೆ ವಹಿಸದ ದರಿದ್ರ ಸರ್ಕಾರ ಎಂದು ಹರಿಹಾಯ್ದರು. ಮೊನ್ನೆ ಎಲ್ಲಾ ಬೆಡ್ ಬ್ಲಾಕ್ ಬಗ್ಗೆ ಪ್ರದರ್ಶನ ಕೊಟ್ಟರು. ಮುಸ್ಲಿಮ್​​ ಸಿಬ್ಬಂದಿ ಇದ್ದಾರೆಂದು ಚಿಲ್ಲರೆ ರಾಜಕಾರಣ ಮಾಡಿದ್ರು. ಬಾಹುಬಲಿ ರೀತಿ ಯುವ ಸಂಸದ ಪ್ರಚಾರ ಪಡೆದುಕೊಂಡ ಎಂದು ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿದ್ರು.

ಬೆಡ್ ಬ್ಲಾಕ್​ ಆಗಿದ್ರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಸಿಎಂ ಕೊರೊನಾದಿಂದ ಆಸ್ಪತ್ರೆ ಸೇರಿದ್ದಾಗ ಸಭೆ ಮಾಡಿದ್ರು. ಮೂವರು ಮಂತ್ರಿಗಳು ಅವರವರೇ ಸಭೆ ಮಾಡಿಕೊಂಡರು. ಆ ಮಂತ್ರಿಗಳೇ ಸೇರಿಕೊಂಡು ಬೆಡ್ ಬ್ಲಾಕ್ ಮಾಡಿಕೊಂಡ್ರು. ಬಿಜೆಪಿ ಎಂಎಲ್​ಎಗಳಿಗೆ ಬೇಕೆಂದು ಬೆಡ್ ಬ್ಲಾಕ್ ಮಾಡಿದ್ರು. ಇವತ್ತು ಬೆಡ್ ಬ್ಲಾಕ್ ಆಗಲು ಈ ಮಂತ್ರಿಗಳೇ ಕಾರಣ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ರು.

ಅಗಲ್ಲ ಅಂದ್ರೆ ನಮ್ಮ ಸಲಹೆಯಾದ್ರೂ ಪಡೀಬೇಕಿತ್ತು..
ಈ ವಿಚಾರವನ್ನ ಯಾರಾದ್ರು ಬಿಬಿಎಂಪಿ ಅಧಿಕಾರಿ ಬಾಯಿಬಿಟ್ರಾ? ಈ ಸರ್ಕಾರಕ್ಕೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ. ಅಗಲ್ಲ ಅಂದ್ರೆ ನಮ್ಮ ಸಲಹೆಯಾದ್ರೂ ಪಡೀಬೇಕಿತ್ತು. ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಹಬ್ಬಿ ಹೋಗಿದೆ. ಬರೀ ವೈದ್ಯರನ್ನು ದೂರಿದರೆ ಏನು ಪ್ರಯೋಜನ?
ಇದಕ್ಕೆಲ್ಲಾ ನಾವು ಮಾಡಿರುವ ವ್ಯವಸ್ಥೆಯೇ ಕಾರಣ. ಚುನಾವಣೆ ಮಾಡು, ಆ ರಾಜ್ಯ ಈ ರಾಜ್ಯ ನೋಡು ಇದೇ ಆಯಿತು ಎಂದು ಹೆಚ್​ಡಿಕೆ ಬೇಸರ ಹೊರಹಾಕಿದ್ರು.

The post ‘ಇದೊಂದು ದರಿದ್ರ ಸರ್ಕಾರ.. ಬಾಹುಬಲಿ ರೀತಿ ಯುವ ಸಂಸದ ಪ್ರಚಾರ ಪಡ್ಕೊಂಡ -HDK ಗುಡುಗು appeared first on News First Kannada.

Source: newsfirstlive.com

Source link