ಮಾಜಿ ಕ್ರಿಕೆಟ್ ಆಟಗಾರ ಮತ್ತು 1983ರಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯ ಮದನ್ಲಾಲ್, ವಿರಾಟ್ ಕೊಹ್ಲಿ ವಿದಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿರಾಟ್ ಒಬ್ಬ ಆಟಗಾರನಾಗಿ ಭಾರತೀಯ ಕ್ರಿಕೆಟ್ಗೆ ಬಹಳ ಕೊಡುಗೆ ನೀಡಿದ್ದಾರೆ. ಅವರು ನಾಯಕತ್ವ ತೊರೆದಿದ್ದು ನನಗೆ ಆಘಾತ ಉಂಟುಮಾಡಿದೆ. ಭಾರತೀಯ ಕ್ರಿಕೆಟ್ಅನ್ನು ಇಡೀ ವಿಶ್ವವೇ ಗೌರವಿಸುವಂತೆ ಮಾಡಿದ್ದು ವಿರಾಟ್ ಎಂದಿರುವ ಮದನ್ಲಾಲ್, ಟೀಂ ಇಂಡಿಯಾವನ್ನ ಒಂದು ಸಶಕ್ತ ಯೂನಿಟ್ ಆಗಿ ಪರಿವರ್ತನೆ ಮಾಡಿದ್ರು ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದು ಕೊಹ್ಲಿ ಅವರ ವಯಕ್ತಿಕ ನಿರ್ಧಾರ. ಅವರ ಸಾಧನೆಗಳು ಯಾವಾಗಲೂ ಅವರೊಂದಿಗೆ ಇರುತ್ತದೆ. ಏಕೆಂದರೆ ಅವರು ಅತ್ಯಂತ ಯಶಸ್ವಿ ನಾಯಕ. ವಿಶ್ವದ ನಾಲ್ಕನೇ ಅತ್ಯಂತ ಯಶಸ್ವಿ ನಾಯಕ. ಆದರೆ ನನಗೆ ಸ್ವಲ್ಪ ಆಶ್ಚರ್ಯವಾಗಿದೆ ಎಂದಿದ್ದಾರೆ. ಈಗಾಗಲೇ ಏಕದಿನ, ಟಿ-20 ಕ್ಯಾಪ್ಟನ್ಸಿಗೆ ಗುಡ್ಬೈ ಹೇಳಿದ್ದ ವಿರಾಟ್, ಮೊನ್ನೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಬಳಿಕ ಟೆಸ್ಟ್ ತಂಡದ ನಾಯಕತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.