1/5
ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶಿವರಾಂ ಶನಿವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
2/5
ಹಿರಿಯ ನಟ ಶಿವರಾಂ ನಿಧನಕ್ಕೆ ರಾಜಕೀಯ ಗಣ್ಯರು, ಕನ್ನಡ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ. ಅದರಂತೆ ಧಾರವಾಡದ ಯುವ ಕಲಾವಿದನೋರ್ವ ಚಾರ್ಕೋಲ್ ಆರ್ಟ್(ಇದ್ದಿಲು ಪುಡಿ) ಮೂಲಕ ಅಂತಿಮ ನಮನ ಸಲ್ಲಿಸಿದ್ದಾನೆ.
3/5
ಧಾರವಾಡದ ಆರ್ಟ್ ಗ್ಯಾಲರಿ ಕಾಲೇಜಿನ ವಿದ್ಯಾರ್ಥಿಯಾಗಿರುವ ವಿನಾಯಕ, ವಿಭಿನ್ನವಾಗಿ ಹಿರಿಯ ಕಲಾವಿದನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.
4/5
ಸುಮಾರು 3 ಗಂಟೆಗಳ ಕಾಲ ಸತತವಾಗಿ ಶಿವರಾಂ ಅವರ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.
5/5
ಧಾರವಾಡದ ಕೆಲಗೇರಿಯ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ಪುತ್ರ ವಿನಾಯಕ ಹಿರೇಮಠ, ಬಿಳಿ ಹಾಳೆಯ ಮೇಲೆ ಇದ್ದಿಲು ಪುಡಿಯಿಂದ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.