ನಾನು ಕಾಂಗ್ರೆಸ್​ನಿಂದ ಅಧಿಕಾರ ಕಳೆದುಕೊಂಡಿಲ್ಲ, ದೇವರೇ ನನ್ನ ಜೀವ ಉಳಿಸಿ ಒಳ್ಳೆಯದನ್ನು ಮಾಡಲು ಮತ್ತು ನಾ ಇನ್ನಷ್ಟು ಕಾಲ ಜೀವಂತವಾಗಿ ಇರಲೆಂದು ಮಂತ್ರಿಗಿರಿಯಿಂದ ಕೆಳಗೆ ಇಳಿಸಿದ್ದಾನೆ.. ಹೀಗಾಗಿ ತುಂಬ ಖುಷಿಯಿಂದಲೇ ಕೆಳಗಿಳಿದ್ದಿದ್ದೇನೆ, ಆ ಹದಿನೇಳು ಜನರೇ ನನಗೆ ಒಳ್ಳೆಯದನ್ನು ಮಾಡಿದವರು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕೆಂಗಲ್ ಹನುಮಂತಯ್ಯ ಕಟ್ಟಿಸಿದ ಖಜಾನೆಗೆ ದರಿದ್ರ ಬಂದಿಲ್ಲ..
ಹಾವೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು.. ಯಡಿಯೂರಪ್ಪ ಈ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ.. ಕೆಂಗಲ್ ಹನುಮಂತಯ್ಯ ಕಟ್ಟಿಸಿದ ಖಜಾನೆಗೆ ದರಿದ್ರ ಬಂದಿಲ್ಲ.. ಅದು ಸಮೃದ್ಧವಾಗಿಯೇ ಇದೆ.. ದರಿದ್ರ ಬಂದಿರುವುದು ಬಿಜೆಪಿಯ ರಾಜಕಾರಣಿಗಳಿಗೆ ಮಾತ್ರ. ಇಷ್ಟು ದಿನ ಕೈಯಿಂದ ಬಾಚಿದ್ದು ಸಾಕಾಗಿಲ್ಲದೆ ಇನ್ನು ಜೆಸಿಬಿಯಿಂದ ಬಾಚ್ತಾ ಇದ್ದಾರೆ ಎಂದು ಹೆಚ್. ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಧಿವೇಶನ ಆರಂಭವಾಗಲಿ, ಇವರಿಗೆ ತಕ್ಕ ಉತ್ತರ ನೀಡಲಿದ್ದೇನೆ..
ಇಲ್ಲಿಂದ ದುಡ್ಡು ತೆಗೆದುಕೊಂಡು ಹೋಗಲು ಬರುವ ಬಿಜೆಪಿ ಉಸ್ತುವಾರಿ ಅರುಣ್​ಸಿಂಗ್ ಜೆಡಿಎಸ್ ಕ್ವಾರಂಟೈನ್​ನಲ್ಲಿದೆ ಎಂದು ಹೇಳಿದ್ದಾರೆ. ಅಧಿವೇಶನ ಆರಂಭವಾಗಲಿ.. ಇವರಿಗೆ ತಕ್ಕ ಉತ್ತರ ನೀಡಲಿದ್ದೇನೆ. ಸೂತಕದ ಮನೆಯಲ್ಲಿ ರಾಜಕೀಯ ಬೇಡ ಎಂದು ಸುಮ್ಮನೆ ಇದ್ದೆ.. ಇನ್ನೇನು ನಮ್ಮ ಆಟ ಪ್ರಾಂಭಿಸುತ್ತೇವೆ ಎಂದು ಗುಟುರು ಹಾಕಿದ್ದಾರೆ.

2013ರಲ್ಲಿ ನಮ್ಮ ಹೋರಾಟದ ಫಲವಾಗಿ ಬಿಜೆಪಿ ಮೂರು ಭಾಗವಾಯಿತು..

ಅಲ್ಲದೇ.. 2006 ರಲ್ಲಿ ಜೆಡಿಎಸ್​ನ್ನ ಮುಗಿಸಲು ಕಾಂಗ್ರೆಸ್ ಹೊರಟಿತ್ತು.. ಆಗ ನಾವು ಎಚ್ಚೆತ್ತುಕೊಂಡು ಪಕ್ಷವನ್ನ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಜೊತೆ ಹೋಗಬೇಕಾಯಿತು. ಆದರೆ ನಮ್ಮ ತತ್ವ, ಸಿದ್ಧಾಂತವನ್ನ ಬಿಟ್ಟುಕೊಡಲಿಲ್ಲ. ಅಂದು ಬಿಜೆಪಿಯವರೇ ನಮ್ಮ ಮನೆ ಬಾಗಿಲಿಗೆ ಬಂದರು. 2013ರಲ್ಲಿ ನಮ್ಮ ಹೋರಾಟದ ಫಲವಾಗಿ ಬಿಜೆಪಿ ಮೂರು ಭಾಗವಾಯಿತು. ಕಾಂಗ್ರೆಸ್​ನಲ್ಲಿ ಈಗ ಹತ್ತು ಜನ ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೆಚ್​​ಡಿಕೆ ಕಾಂಗ್ರೆಸ್​ನ ‘ಮುಂದಿನ ಸಿಎಂ’ ಜಟಾಪಟಿಯ ಕುರಿತು ಇದೇ ವೇಳೆ ವ್ಯಂಗ್ಯವಾಡಿದ್ದಾರೆ.

The post ಇನ್ನಷ್ಟು ಕಾಲ ಜೀವಂತವಾಗಿರಲೆಂದು ದೇವರೇ ನನ್ನ ಮಂತ್ರಿಗಿರಿಯಿಂದ ಕೆಳಗಿಳಿಸಿದ-ಹೆಚ್​ಡಿಕೆ appeared first on News First Kannada.

Source: newsfirstlive.com

Source link