ಇನ್ನು ಮುಂದೆ ನೀವು ವಾಟ್ಸ್‌ ಆ್ಯಪ್‌ನಲ್ಲಿ ಧ್ವನಿ ಸಂದೇಶ ರವಾನಿಸಿದಂತೆಯೇ ಟ್ವಿಟರ್‌ನಲ್ಲೂ ವಾಯ್ಸ್ ಮೆಸೇಜ್‌ ಕಳುಹಿಸಬಹುದು.

ಭಾರತದ ಬಳಕೆದಾರರಿಗೆ “ವಾಯ್ಸ್ ಡೈರೆಕ್ಟ್ ಮೆಸೇಜ್‌'(ಡಿಎಂ) ಫೀಚರ್‌ ಅನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಟ್ವಿಟರ್‌ ಆರಂಭಿಸಿದೆ. ಅದರಂತೆ, ಖಾಸಗಿ ಚಾಟ್‌ನಲ್ಲಿ ಖಾತೆದಾರರು ಗರಿಷ್ಠ 140 ಸೆಕೆಂಡುಗಳಷ್ಟು ದೀರ್ಘ‌ದ ಧ್ವನಿ ಸಂದೇಶವನ್ನು ಕಳುಹಿಸಬಹುದು.

ಸಂಬಂಧ ಪಟ್ಟ ವ್ಯಕ್ತಿಯ ಚಾಟ್‌ ಬಾಕ್ಸ್‌ ಅನ್ನು ಮೊದಲಿಗೆ ತೆರೆದು, ಬಲ ಭಾಗದ ಮೂಲೆಯಲ್ಲಿನ ವಾಯ್ಸ್ ಐಕಾನ್‌ ಅನ್ನು ಒತ್ತುತ್ತಾ, ರೆಕಾರ್ಡಿಂಗ್‌ ಆರಂಭಿಸಬೇಕು. ರೆಕಾರ್ಡಿಂಗ್‌ ಮುಗಿಸಲು ಅಲ್ಲೇ ಇರುವ “ಸ್ಟಾಪ್‌’ ಐಕಾನ್‌ ಒತ್ತಬೇಕು. ನಂತರ “ಸೆಂಡ್‌’ ಬಟನ್‌ ಪ್ರಸ್‌ ಮಾಡಿದರೆ ನಿಮ್ಮ ಸಂದೇಶ ರವಾನೆಯಾಗುತ್ತದೆ. ಹಂತ ಹಂತವಾಗಿ ಈ ಫೀಚರ್‌ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಮಾನನಷ್ಟ ಮೊಕದ್ದಮೆ ಪ್ರಕರಣ : ಪತ್ರಕರ್ತೆ ಪ್ರಿಯಾ ಖುಲಾಸೆ..!

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More