ಭಾರತ ಹೀಗೆ ಹೋರಾಟ ಮುಂದುವರಿಸಿದರೆ ಕೊರೊನಾ ವೈರಸ್ ಇನ್ನೇನು ಕೇವಲ 4-6 ವಾರಗಳಲ್ಲಿ ಅಂತ್ಯವಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಮಿರನ್ ಪಾಂಡ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಸಮಿರನ್, ಭಾರತ ಹೀಗೆ ಲಸಿಕಾ ಅಭಿಯಾನ ಮುಂದುವರಿಸಬೇಕು. ಇನ್ನೊಂದು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ನೀಡಬೇಕು. ಆಗ ಈ ಸಾಂಕ್ರಾಮಿಕ ಶಾಶ್ವತವಾಗಿ ಅಂತ್ಯವಾಗಲಿದೆ ಎಂದಿದ್ದಾರೆ.
ಕೊರೊನಾ ವೈರಸ್ ರೂಪಾಂತರಗಳನ್ನು ಹೊಂದುವ ಮೂಲಕ ಇಲ್ಲೇ ನೆಲೆಯೂರಲು ಪ್ರಯತ್ನಿಸುತ್ತದೆ. ಹೀಗಾಗಿ ಮನುಷ್ಯನಿಗೆ ಹರಡುತ್ತದೆ. ಇದರ ವಿರುದ್ಧ ದೊಡ್ಡ ಅಸ್ತ್ರವೆಂದರೆ ಲಸಿಕೆ, ರೋಗನಿರೋಧಕ ಪ್ರತಿಕಾಯಗಳು ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಹುತೇಕ ಶೇ.70ರಷ್ಟು ಲಸಿಕೆ ನೀಡಿಕೆ ಪೂರ್ಣಗೊಳಿಸಿದೆ. ಇದು ಜಗತ್ತಿನಲ್ಲೇ ಅತೀ ದೊಡ್ಡ ಸಾಧನೆ. ಭಾರತೀಯ ಲಸಿಕೆಗಳನ್ನು ಜಾಗತಿಕವಾಗಿ ಬಳಸಲಾಗುತ್ತದೆ. ಈಗ ಉಳಿದ ಶೇ.30ರಷ್ಟು ಮಂದಿಗೆ ಲಸಿಕೆ ನೀಡಿದರೆ ಕೊರೊನಾ ಸಂಪೂರ್ಣ ಅಂತ್ಯವಾಗಲಿದೆ ಎನ್ನುತ್ತಿದ್ದಾರೆ ವೈದ್ಯರು.