ಇನ್ನೂ ಆಧಾರ್, ಪ್ಯಾನ್ ಲಿಂಕ್ ಮಾಡಿಲ್ಲವೇ? ಬೇಗ ಮಾಡಿ; ಇಲ್ಲವಾದರೆ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್ – Aadhaar PAN Linking not yet done go through that Your Card May Also Get Deleted From Next Year latest business news in Kannada


ಪ್ಯಾನ್ ಹೊಂದಿರುವವರಿಗೆ ಆಧಾರ್‌ನೊಂದಿಗೆ ಅದನ್ನು ಲಿಂಕ್ ಮಾಡಲು ಕೊನೆಯ ದಿನಾಂಕ 2023ರ ಮಾರ್ಚ್ 31 ಕೊನೆಯ ದಿನವಾಗಿದೆ. ಅಷ್ಟರೊಳಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೇಳಿದೆ.

ಇನ್ನೂ ಆಧಾರ್, ಪ್ಯಾನ್ ಲಿಂಕ್ ಮಾಡಿಲ್ಲವೇ? ಬೇಗ ಮಾಡಿ; ಇಲ್ಲವಾದರೆ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್

ಸಾಂದರ್ಭಿಕ ಚಿತ್ರ

ನವದೆಹಲಿ: ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್(PAN card) ಅನ್ನು 2023ರ ಮಾರ್ಚ್ 31ರ ಒಳಗೆ ಲಿಂಕ್ ಮಾಡದಿದ್ದರೆ ಅಂಥವರ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ತಿಳಿಸಿದೆ. 2022ರ ಮಾರ್ಚ್ 31ರ ಒಳಗಾಗಿ ಲಿಂಕ್ ಮಾಡದವರಿಗೆ ಈಗಾಗಲೇ 1,000 ರೂ. ದಂಡ ವಿಧಿಸಲಾಗುತ್ತಿದೆ. ಆದಾಗ್ಯೂ, 2023ರಲ್ಲಿ ಅದು ನಿಷ್ಕ್ರಿಯವಾಗುವವರೆಗೆ ಪ್ಯಾನ್ ಕಾರ್ಡ್ ಅನ್ನು ಬಳಸಲು ಅನುಮತಿಸಲಾಗುತ್ತದೆ ಎಂದು ಮಂಡಳಿ ಹೇಳಿದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ವಿಧಿಸಿದ್ದ ಗಡುವನ್ನು ಮಂಡಳಿಯು ಹಲವು ಬಾರಿ ವಿಸ್ತರಣೆ ಮಾಡಿದೆ. ಎರಡೂ ಕಾರ್ಡ್​ಗಳ ಲಿಂಕ್ ಮಾಡುವುದಕ್ಕೆ 2022ರ ಮಾರ್ಚ್ 31ರ ಗಡುವು ನೀಡಲಾಗಿತ್ತು. ಈ ಗಡುವಿನ ಒಳಗೆ ಲಿಂಕ್ ಮಾಡದವರು ಈಗ ದಂಡ ಪಾವತಿಸುವ ಮೂಲಕ ಲಿಂಕ್ ಮಾಡುವ ಅವಕಾಶ ಹೊಂದಿದ್ದಾರೆ. ಆದರೆ, 2023ರ ಮಾರ್ಚ್ 31ರ ಬಳಿಕ ಈ ಅವಕಾಶವೂ ಇಲ್ಲವಾಗಲಿದೆ.

ಈ ವಿಚಾರವಾಗಿ ಎಚ್ಚರಿಕೆ ನೀಡಿ ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ‘ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ಪಡೆದ ವರ್ಗದಲ್ಲಿ ಬರದ ಎಲ್ಲಾ ಪ್ಯಾನ್ ಹೊಂದಿರುವವರಿಗೆ ಆಧಾರ್‌ನೊಂದಿಗೆ ಅದನ್ನು ಲಿಂಕ್ ಮಾಡಲು ಕೊನೆಯ ದಿನಾಂಕ 2023ರ ಮಾರ್ಚ್ 31 ಕೊನೆಯ ದಿನವಾಗಿದೆ. ಅಷ್ಟರೊಳಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗಲಿದೆ. ತಡ ಮಾಡಬೇಡಿ, ಇಂದೇ ಲಿಂಕ್ ಮಾಡಿ’ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಆಧಾರ್, ಪ್ಯಾನ್ ಆನ್​ಲೈನ್​ನಲ್ಲಿ ಲಿಂಕ್ ಮಾಡುವುದು ಹೇಗೆ?

TV9 Kannada


Leave a Reply

Your email address will not be published. Required fields are marked *