ಇನ್ನೂ ನಿಗದಿಯಾಗದ ಓಲಾ ಹಾಗೂ ಉಬರ್​ ಪ್ರಯಾಣ ದರ: ಹೈಕೋರ್ಟ್ ನಿರ್ಧಾರದಂತೆ ನಾಳೆ ದರ ನಿಗದಿ ಸಾಧ್ಯತೆ – karnataka high court may decide ola uber transport charge


ಓಲಾ, ಉಬರ್, ರ್ಯಾಪಿಡೋ ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಕಾಟಚಾರಕ್ಕೆ ಮೀಟಿಂಗ್ ಮಾಡಿ ಸುಮ್ಮನಾಗಿದ್ದಾರೆ. ಹೈಕೋರ್ಟ್ ನಿರ್ಧಾರದಂತೆ ನಾಳೆ ದರ ನಿಗದಿ ಮಾಡುವ ಸಾಧ್ಯತೆ ಇದೆ.

ಇನ್ನೂ ನಿಗದಿಯಾಗದ ಓಲಾ ಹಾಗೂ ಉಬರ್​ ಪ್ರಯಾಣ ದರ: ಹೈಕೋರ್ಟ್ ನಿರ್ಧಾರದಂತೆ ನಾಳೆ ದರ ನಿಗದಿ ಸಾಧ್ಯತೆ

ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು: ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಓಲಾ ಹಾಗೂ ಉಬರ್​ ಪ್ರಯಾಣ ದರವನ್ನು ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ 15 ದಿನಗಳ ಕಾಲಾವಕಾಶ ನೀಡಿದೆ ಆದೇಶ ಹೊರಡಿಸಿದೆ. ಆದ್ರೆ ಕಾಟಾಚಾರಕ್ಕೆ ಸಭೆ ಮಾಡಿ ಸುಮ್ಮನಾಗಿರುವ ಸಾರಿಗೆ ಇಲಾಖೆ ಈ ವರೆಗೂ ದರ ನಿಗದಿ ಮಾಡಿಲ್ಲ. ಈಗಾಗಲೇ ಹೈಕೋರ್ಟ್​ನ ಕಾಲಾವಕಾಶ ಮುಗಿಯುತ್ತಿದ್ದು ಹೈಕೋರ್ಟ್ ಮಧ್ಯ ಪ್ರವೇಶಿಸಿ ದರ ನಿಗದಿ ಮಾಡುತ್ತೆ ಎನ್ನಲಾಗುತ್ತಿದೆ. ನಾಳೆ ಹೈಕೋರ್ಟ್​​ನಲ್ಲೇ ಪ್ರಯಾಣದ ದರ ಫೈನಲ್​ ಆಗುತ್ತಾ? ಎಂಬ ಪ್ರಶ್ನೆ ಎದ್ದಿದೆ.

ಸರ್ಕಾರ ನಿಗದಿ ಮಾಡಿದ್ದ ದರ ಹಾಗೂ ನಿಯಮವನ್ನು ಉಲ್ಲಂಘಿಸಿ ಸೇವೆ ನೀಡುತ್ತಿದ್ದ ಓಲಾ, ಉಬರ್, ಱಪಿಡೋ ಸೇವೆ ಬಂದ್ ಮಾಡಲು ಸರ್ಕಾರ ನಿರ್ಧರಿಸಿತ್ತು. ಬಳಿಕ ಹೈಕೋರ್ಟ್ ಮಧ್ಯ ಪ್ರವೇಶಿಸಿ ಆ್ಯಪ್ ಆಧರಿತ ಆಟೋ, ಕ್ಯಾಬ್​ಗಳನ್ನು ಜನ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಹೀಗಾಗಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಓಲಾ, ಉಬರ್ ಕಂಪನಿಗಳ ಜೊತೆ ಸಭೆ ನಡೆಸಿ 15 ದಿನದೊಳಗೆ ಹೊಸ ದರ ನಿಗದಿಗೆ ಹೈಕೋರ್ಟ್ ಆದೇಶಿಸಿತ್ತು. ಆದ್ರೆ ಡೆಡ್​ಲೈನ್​ ಮುಗಿದರೂ ಸಾರಿಗೆ ಇಲಾಖೆ ಮಾತ್ರ ಇನ್ನೂ ದರ ಫಿಕ್ಸ್ ಮಾಡಿಲ್ಲ.

TV9 Kannada


Leave a Reply

Your email address will not be published.