ಇನ್ನೂ ಮಂಜುಗಾಲ ಪೂರ್ತಿ ಆವರಿಸಿಲ್ಲ, ಅದಾಗಲೇ ಕೇದಾರನಾಥ ದೇಗುಲ ವಾತಾವರಣ ಹೀಗಿದೆ ನೋಡಿ | Uttarakhand Kedarnath temple covered under a thick blanket of snow

1/5

ಉತ್ತರಾಖಂಡದ ಎತ್ತರದ ಪ್ರದೇಶಗಳಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದೆ. ಭಾರಿ ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೇದಾರನಾಥ ದೇವಾಲಯವು ದಟ್ಟವಾದ ಹಿಮದ ಹೊದಿಕೆಯಿಂದ ಆವೃತವಾಗಿದೆ. ಕೇದಾರನಾಥದಲ್ಲಿ ಈಗಿನ ತಾಪಮಾನ ಮೈನಸ್ 6 ಡಿಗ್ರಿ ಸೆಲ್ಸಿಯಸ್ ಇದೆ.

2/5

ಚಳಿಗಾಲದ ಸಮಯದಲ್ಲಿ ಕಂಡು ಬರುವ ಕೇದರನಾಥ ದೇಗುಲ

3/5

ಸಾಮಾನ್ಯವಾಗಿ ಕೇದಾರನಾಥ ದೇವಾಲಯ ಈ ಸಮಯದಲ್ಲಿ ಈ ರೀತಿ ಇರುತ್ತದೆ. ಮಂಜು ಸರಿದು ದೇವಾಲಯದ ಇಡೀ ಸೊಬಗನ್ನು ಸವಿಯಬಹುದಿತ್ತು. ಆದ್ರೆ ಹಿಮಪಾತವಾಗುತ್ತಿರುವ ಕಾರಣ ಮಂಜು ಆವರಿಸಿದೆ. ಬದರಿನಾಥ್ ಜೊತೆಗೆ ಯಮುನೋತ್ರಿ, ಗಂಗೋತ್ರಿ ಮತ್ತು ಔಲಿಯಲ್ಲಿ ಹಿಮಪಾತವಾಗಿದೆ. ರಾಜ್ಯದ ಎತ್ತರದ ಪ್ರದೇಶಗಳಲ್ಲಿ ಭಾನುವಾರದಿಂದ ಹಿಮ ಸುರಿಯುತ್ತಿದೆ. ಔಲಿ, ಬದರಿನಾಥ್ ಧಾಮ್, ಹೇಮಕುಂಡ್ ಸಾಹಿಬ್, ನಿತಿ ಮಲಾರಿ ಕಣಿವೆ ಮತ್ತು ಇತರ ಎತ್ತರದ ಪ್ರದೇಶಗಳಲ್ಲಿನ ಪರ್ವತಗಳು ಹಿಮದ ಬಿಳಿ ಹೊದಿಕೆಯಿಂದ ಆವೃತವಾಗಿವೆ. ಹಿಮಪಾತದಿಂದಾಗಿ ರಾಜ್ಯದಲ್ಲಿ ಚಳಿ ಹೆಚ್ಚುತ್ತಿದೆ.

4/5

ಚಮೋಲಿಯ ಎತ್ತರದ ಪ್ರದೇಶಗಳಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದ್ರೆ ಇದೇ ಸಮಯದಲ್ಲಿ, ಪ್ರವಾಸಿಗರು ಹಿಮದೊಂದಿಗೆ ಆಟವಾಡುತ್ತ ಖುಷಿ ಪಡುತ್ತಿದ್ದಾರೆ. ಔಲಿ ಸೇರಿದಂತೆ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಹಿಮಪಾತದಿಂದಾಗಿ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತರಾಖಂಡದಲ್ಲಿ ಇನ್ನಷ್ಟು ಹಿಮಪಾತವಾಗುವ ಎಚ್ಚರಿಕೆಯನ್ನು ನೀಡಲಾಗಿದೆ.

5/5

ಕೇದಾರನಾಥ ದೇವಾಲಯವು ವರ್ಷದಲ್ಲಿ ಆರು ತಿಂಗಳು ಅಂದರೆ ಏಪ್ರಿಲ್ ಅಂತ್ಯದಿಂದ ನವೆಂಬರ್ ಆರಂಭದವರೆಗೆ ತೆರೆದಿರುತ್ತದೆ. ಚಳಿಗಾಲದ ಸಮಯದಲ್ಲಿ ದೇವಾಲಯವನ್ನು ಮುಚ್ಚುತ್ತಾರೆ. ಶಿವನ ವಿಗ್ರಹವನ್ನು ಉಖಿಮತ್ ಓಂಕಾರೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಿ, ಶಿವನ ವಿಗ್ರಹವನ್ನು ಮತ್ತೆ ತರಲಾಗುತ್ತದೆ. ಮತ್ತು ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ಮಾಸ ಅವಧಿಯಲ್ಲಿ 6 ತಿಂಗಳ ನಂತರ ದೇವಾಲಯವನ್ನು ಮತ್ತೆ ತೆರೆಯಲಾಗುತ್ತದೆ. ಶಿವನ ದರ್ಶನವ ಬೆಳಗ್ಗೆ 4ರಿಂದ 3 ಗಂಟೆಯವರೆಗೆ ಮತ್ತು ಸಂಜೆ 5 ರಿಂದ 9 ಗಂಟೆಯವರೆಗೆ ಪಡೆಯಬಹುದು.

TV9 Kannada

Leave a Reply

Your email address will not be published. Required fields are marked *