ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನ ಇನ್ನು ಹತ್ತು ವರ್ಷಗಳ ಕಾಲ ಯಾರು ಟಚ್ ಮಾಡೋಕೆ ಆಗಲ್ಲ ಮಾಜಿ ಕ್ರಿಕೆಟಿಗ ಅನ್ಷುಮನ್ ಗಾಯಕ್ವಾಡ್ ಅಭಿಪ್ರಾಯಟ್ಟಿದ್ದಾರೆ.
ವಿರಾಟ್ ಕೊಹ್ಲಿ ಫಿಟ್ನೆಸ್ ನೋಡಿದ್ರೆ ಅವರು ಇನ್ನೂ ಒಂದು ದಶಕ ಕ್ರಿಕೆಟ್ ಆಡೋ ಸಾಧ್ಯತೆ ಇದೆ. ಅಲ್ಲದೇ ಸಚಿನ್ ತೆಂಡುಲ್ಕರ್ರ 200 ಟೆಸ್ಟ್ ಪಂದ್ಯಗಳ ದಾಖಲೆಯನ್ನ ಕೊಹ್ಲಿ ಮುರಿದರೂ ಅಚ್ಚರಿ ಇಲ್ಲ ಎಂದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಆಡುವ ಮೂಲಕ ವಿರಾಟ್ ಕೊಹ್ಲಿ, ಭಾರತದ ಪರ ಟೆಸ್ಟ್ ಕ್ರಿಕಟ್ನಲ್ಲಿ ನೂರು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಗೆ ಸೇರಿದ್ರು. 2012ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಕೊಹ್ಲಿ ಕೇವಲ 10 ವರ್ಷಗಳಲ್ಲಿ ನೂರು ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ.
ಇದರಿಂದ ಸದ್ಯ 33 ವರ್ಷದ ಕೊಹ್ಲಿ ಇನ್ನು ಎಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಬಹುದು ಎನ್ನೋ ಚರ್ಚೆ ಶುರುವಾಗಿದೆ.