ಬೆಂಗಳೂರು: ರಾಜ್ಯಾದ್ಯಂತ ಕೆಲವು ಜಿಲ್ಲೆಗಳು ಹಾಗೂ ಬೆಂಗಳೂರಿನಲ್ಲಿ20 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರ ನಡುವೆ ತೀರ್ಮಾನ ತೆಗೆದುಕೊಳ್ಳಬೇಕು. ಈ ಸಂಬಂಧ ಸಂಪುಟ ಸಹೋದ್ಯೋಗಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಕೆಲವರ ಆತಂಕ ನಮಗೂ ತಿಳಿದಿದೆ. ರೋಗದ ಲಕ್ಷಣ ಇಲ್ಲದಿದ್ರೂ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ಧಾವಿಸೋರ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆ ಆಗ್ತಿದೆ. ರೋಗಲಕ್ಷಣ ಇಲ್ಲದ ಸೋಂಕಿತರು ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದರು.

ಹೆಚ್ಚಿನ ಚಿಕಿತ್ಸೆ ಬೇಕಿರೋರು ಮಾತ್ರ ಆಸ್ಪತ್ರೆಗೆ ಬಂದ್ರೆ ಬಿಕ್ಕಟ್ಟು ಕಡಿಮೆ ಆಗಲಿದೆ. ಆಕ್ಸಿಜನ್ ಸಿಗಲಿದೆ. ಅನಗತ್ಯವಾಗಿ ಆಘಾತಕ್ಕೆ ಒಳಗಾಗಬೇಡಿ. ಪಾಸಿಟಿವ್ ಬಂದ ಕೂಡಲೆ ಹೆದರುತ್ತಿದ್ದೀರಿ. ಇದು ಸೋಂಕು ಅಲ್ಲ. ಐಸಿಎಂಆರ್, ಅಮೆರಿಕಾ ವೈದರು ಹೇಳಿದ್ದಾರೆ. ಕೆಮ್ಮು, ನೆಗಡಿ ಕೆಮ್ಮಿನ ರೀತಿ ಸಾಮಾನ್ಯ ಸೋಂಕು. ನಾವು ಎರಡನೇ ಅಲೆಯಲ್ಲಿದ್ದೇವೆ, ಬೇರೆ ದೇಶದವರು ನಾಲ್ಕನೇ ಹಂತದಲ್ಲಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರೋದು ಬೇಡ ಎಂದರು.

ಒಂದು ಅಲೆ 90 ದಿನಗಳವರೆಗೂ ಇರಲಿದೆ. ಇನ್ನೂ ನಲವತ್ತು ದಿನ ಇರಲಿದೆ ಅಂತ ತಜ್ಞರು ಹೇಳಿದ್ದಾರೆ. ಅಲ್ಲಿಯವರೆಗೂ ಮನೆಯಲ್ಲೇ ಇರೋದು ಸೂಕ್ತ. ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಜನ ಸೋಂಕಿತರಾಗಿದ್ದಾರೆ ಎಂದು ಹೇಳಿದ್ರು.

ನೆರೆಯ ರಾಜ್ಯದ ವಿಚಾರಗಳ ಬಗ್ಗೆ ಗಮನದಲ್ಲಿಟ್ಟುಕೊಂಡಿದ್ದೇವೆ. ಕೋವಿಡ್ ಹಿನ್ನೆಲೆ ಅನಿವಾರ್ಯತೆ ಕಂಡಿದ್ದೇವೆ. ಕ್ಯಾಬಿನೆಟ್ನಲ್ಲಿ ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತೇವೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜಕೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸುಧಾಕರ್ ತಿಳಿಸಿದ್ರು.

The post ಇನ್ನೂ 40 ದಿನ ಕೊರೊನಾ 2ನೇ ಅಲೆ ಇರಲಿದೆ ಅಂತ ತಜ್ಞರು ಹೇಳಿದ್ದಾರೆ -ಸುಧಾಕರ್ appeared first on News First Kannada.

Source: News First Kannada
Read More