ದಾವಣಗೆರೆ: ಕೊರೊನಾ ಸೋಂಕಿನಿಂದಾಗಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರೊಫೆಸರ್ ಸಾವನ್ನಪ್ಪಿದ್ದಾರೆ. ಮುರುಗಯ್ಯ(62) ಸಾವನ್ನಪ್ಪಿದವರು.

ಮುರುಗಯ್ಯ ದಾವಣಗೆರೆಯ ಎಂಬಿ ವಿಭಾಗದ ಪ್ರೊಫೆಸರ್ ಆಗಿದ್ದರು. ಒಂದು ವಾರದಿಂದ ಕೊರೊನಾದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಮುರುಗಯ್ಯ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಇವರು ಬೆಳಗಾವಿ ಆವರಣ, ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯ ಸೇರಿ ಹಲವು ಕಡೆ ಸೇವೆ ಸಲ್ಲಿಸಿದ್ದರು. ಇದೇ ಜೂನ್ 30 ರಂದು ಪ್ರೊಫೆಸರ್ ಮುರುಗಯ್ಯ ಸೇವೆಯಿಂದ ನಿವೃತ್ತಿಯಾಗಲಿದ್ದರು ಎನ್ನುವ ಮಾಹಿತಿ ಇದೆ.

The post ಇನ್ನೆರಡು ತಿಂಗಳಲ್ಲಿ ನಿವೃತ್ತಿ ಹೊಂದಬೇಕಿದ್ದ ದಾವಣಗೆರೆ ವಿ ವಿ ಪ್ರೊಫೆಸರ್.. ಕೊರೊನಾದಿಂದ ಸಾವು appeared first on News First Kannada.

Source: newsfirstlive.com

Source link