ನವದೆಹಲಿ: ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ವ್ಯಾಕ್ಸಿನ್ ಕೊರತೆ ಆಗಲ್ಲ. ಮುಂದಿನ ಎರಡು ತಿಂಗಳಲ್ಲಿ ಬೇಕಾದಷ್ಟು ಲಸಿಕೆಗಳು ಲಭ್ಯ ಇರಲಿದೆ ಅಂತಾ ದೆಹಲಿಯ AIIMS ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಡಾ.ರಂದೀಪ್ ಗುಲೇರಿಯಾ, ಭಾರತಕ್ಕೆ ಶೀಘ್ರದಲ್ಲೇ ಹೊರಗಿನಿಂದ ವ್ಯಾಕ್ಸಿನ್ ಬರಲಿದೆ. ಲಸಿಕೆ ತಯಾರಿಸುವ ಕಂಪನಿಗಳು ಹೆಚ್ಚುವರಿಯಾಗಿ ಉತ್ಪಾದನಾ ಘಟಕ ತೆರೆಯಲು ಆರಂಭಿಸಿರೋದ್ರಿಂದ ಹೆಚ್ಚು ವ್ಯಾಕ್ಸಿನ್​ಗಳು ಲಭ್ಯವಾಗಲಿದೆ. ಜೊತೆಗೆ ಆದಷ್ಟು ಬೇಗ ವಯಷ್ಕರಿಗೆ ಮತ್ತು ಇತರೆ ಸಮಸ್ಯೆಗಳನ್ನ ಹೊಂದಿರೋರಿಗೆ ವ್ಯಾಕ್ಸಿನ್ ನೀಡಬೇಕಿದೆ ಎಂದು ಎಚ್ಚರಿಸಿದ್ದಾರೆ.

ಯಾಕೆಂದರೆ ಆರೋಗ್ಯದಲ್ಲಿ ಇತರೆ ಸಮಸ್ಯೆಗಳು ಇರೋರಿಗೆ ಕೊರೊನಾ ಬಂದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಅಂತವರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ನಾವು ಒತ್ತು ನೀಡಬೇಕಿದೆ. ಅಲ್ಲದೇ ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯ ವೇಗವನ್ನ ಹೆಚ್ಚಿಸಬೇಕಿದೆ ಅಂತಾ ಹೇಳಿದರು.

The post ಇನ್ನೆರಡು ತಿಂಗಳಲ್ಲಿ ಲಸಿಕೆ ಭಾರೀ ಪ್ರಮಾಣದಲ್ಲಿ ಲಭ್ಯವಾಗಲಿದೆ- ಏಮ್ಸ್​ ಮುಖ್ಯಸ್ಥ appeared first on News First Kannada.

Source: newsfirstlive.com

Source link