‘ಇನ್ನೊಮ್ಮೆ ನಮ್ಮನ್ನು ಬಿಟ್ಟು ಊರಿಗೆ ಹೋಗಬೇಡ ಅಜ್ಜಾ’ ಅಜ್ಜಮೊಮ್ಮಗನ ಬಾಂಧವ್ಯಕ್ಕೆ ಕರಗುತ್ತಿರುವ ನೆಟ್ಟಿಗರು – Young boy breaks down after grandfather gives him a heartwarming surprise Video will make you cry happy tears


Surprize Visit : ಯಾರಿಗೆ ತಾನೆ ಒಂಟಿಯಾಗಿರಲು ಇಷ್ಟ, ಬಂಧಗಳೇ ಬಲ ಕೊಡುವುದಲ್ಲವೆ? ಅಜ್ಜ ಮೊಮ್ಮಕ್ಕಳ ಬಾಂಧವ್ಯವಂತೂ ಅತೀ ಅಮೂಲ್ಯ. ಅಜ್ಜ ಮೊಮ್ಮಗನಿಗೆ ಸರ್​​ಪ್ರೈಝ್​ ಕೊಟ್ಟ ಈ ವಿಡಿಯೋ ನೋಡಿ.

‘ಇನ್ನೊಮ್ಮೆ ನಮ್ಮನ್ನು ಬಿಟ್ಟು ಊರಿಗೆ ಹೋಗಬೇಡ ಅಜ್ಜಾ’ ಅಜ್ಜಮೊಮ್ಮಗನ ಬಾಂಧವ್ಯಕ್ಕೆ ಕರಗುತ್ತಿರುವ ನೆಟ್ಟಿಗರು

Young boy breaks down after grandfather gives him a heartwarming surprise Video will make you cry happy tears

Viral Video : ಸಣ್ಣವರಿಗೆ ದೊಡ್ಡವರು ಬೇಕು, ದೊಡ್ಡವರಿಗೆ ಸಣ್ಣವರು ಬೇಕು. ಅವರ ನಡುವಿನ ಭಾವನಾತ್ಮಕ ಬಂಧ ವಿವರಿಸಲಾಧ್ಯ. ಈ ಆಧುನಿಕ ಯುಗದಲ್ಲಿ ಎಲ್ಲರೂ ಒಂದೊಂದು ಊರು, ದೇಶಗಳಲ್ಲಿ ಬದುಕುತ್ತ ತಂತ್ರಜ್ಞಾನದ ಮೂಲಕ ಸಂಪರ್ಕ ಹೊಂದುತ್ತ ಹೇಗೋ ಒಟ್ಟು ಬದುಕುತ್ತಿದ್ದೇವೆ. ಬೇಸರವಾದಾಗ ಸಣ್ಣ ನೆಮ್ಮದಿ, ನಗುವನ್ನರಳಿಸಿಕೊಳ್ಳಲು ಆನ್​ಲೈನ್​ಗೆ ಮೊರೆಹೋಗುತ್ತಿದ್ದೇವೆ. ಎಷ್ಟೋ ಸಲ ನಮ್ಮ ಮನಸ್ಸು ಬಯಸುವಂಥ ವಿಡಿಯೋಗಳು ಸಿಗದೆ ಬೇಸರಗೊಳ್ಳುತ್ತಿರುತ್ತೇವೆ. ಈಗ ಇಲ್ಲಿರುವ ಈ ವಿಡಿಯೋ ನೋಡಿ, ಬಹುಶಃ ನಿಮಗೂ ಖುಷಿಯಾಗಬಹುದೇನೋ. ನಿಮ್ಮ ಅಜ್ಜ ಅಜ್ಜಿ ನಿಮಗೆ ನೆನಪಾಗದೇ ಇರರು. ನವೆಂಬರ್ 9 ರಂದು ಈ ವಿಟಿಯೋ ಅನ್ನು ಆನ್​ಲೈನ್​ನಲ್ಲಿ ಹಂಚಿಕೊಳ್ಳಲಾಗಿದೆ.

ಈ ಹುಡುಗ ತನ್ನ ಪಾಡಿಗೆ ತಾನು ಫುಟ್​ಬಾಲ್​ನಲ್ಲಿ ಮಗ್ನನಾಗಿದ್ದಾನೆ. ಆಗ ಈತನ ಅಜ್ಜ ಮೈದಾನಕ್ಕೆ ಬಂದು ಸರ್​ಪ್ರೈಝ್​ ಕೊಟ್ಟಿದ್ದಾನೆ. ಈ ಹುಡುಗನ ತಮ್ಮ ಈ ವಿಡಿಯೋ ಅನ್ನು ರೆಕಾರ್ಡ್ ಮಾಡಿದ್ದಾನೆ. ಆಟದ ಗುಂಗಿನಲ್ಲಿದ್ದವನಿಗೆ ಹೀಗೆ ಪ್ರೀತಿಯ ಅಜ್ಜ ಕಣ್ಣೆದುರಿಗೆ ಧುತ್ತನೇ ಪ್ರತ್ಯಕ್ಷವಾದಾಗ ಹೇಗನ್ನಿಸಿರಬೇಡ? ಮನಸಾರೆ ತಬ್ಬಿಕೊಂಡು ಖುಷಿಯಿಂದ ಕಣ್ಣೀರು ಸುರಿಸಿದ್ದಾನೆ.

ನೀವು ಮತ್ತೊಮ್ಮೆ ನಮ್ಮನ್ನೆಲ್ಲ ಬಿಟ್ಟು ಪೆರುವಿಗೆ ಹೋಗಬೇಡಿ ಎಂದು ಹೇಳಿದ್ದಾನೆ ಅಜ್ಜನಿಗೆ. ಇಷ್ಟೊಂದು ಪ್ರೀತಿ ದಕ್ಕಿದಾಗ ಅಜ್ಜನಿಗೆ ಎಷ್ಟೊಂದು ಖುಷಿ ಆಗಿರಬೇಡ?

ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರೂ ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ನಿಮಗೆ ಈ ವಿಡಿಯೋ ಇಷ್ಟವಾಯಿತಾ?

TV9 Kannada


Leave a Reply

Your email address will not be published.