ಇನ್ಮುಂದೆ ಆಸ್ಪತ್ರೆಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ

ಇನ್ಮುಂದೆ ಆಸ್ಪತ್ರೆಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ

ನವದೆಹಲಿ: ಸರ್ಕಾರಿ ಅಥವಾ ಖಾಸಗಿ ಕೋವಿಡ್‌ ಆಸ್ಪತ್ರೆಗೆ ದಾಖಲಾಗಲು ಕೊರೊನಾ ಪಾಸಿಟಿವ್‌ ವರದಿ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಸುತ್ತೋಲೆ ಹೊರಡಿಸಿದೆ.

ಸೋಂಕಿತರು ಕೋವಿಡ್ ಕೇಂದ್ರಗಳಿಗೆ ದಾಖಲಾಗುವ ಸಂಬಂಧ ಇರುವ ರಾಷ್ಟ್ರೀಯ ನೀತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕರಿಸಿದ್ದು, ಇದರ ಅನ್ವಯ ಯಾವುದೇ ರೋಗಿಗೂ ಆರೋಗ್ಯ ಸೇವೆಯನ್ನು ನಿರಾಕರಿಸುವಂತಿಲ್ಲ. ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಕೋವಿಡ್​ ಕೇರ್ ಸೆಂಟರ್​​ನಲ್ಲಿ, ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವವರನ್ನ ಡೆಡಿಕೇಟೆಡ್ ಕೋವಿಡ್​ ಹೆಲ್ತ್ ಸೆಂಟರ್​ನಲ್ಲಿ ಹಾಗೂ ತೀವ್ರವಾಗಿ ಸೋಂಕಿಗೊಳಗಾದವರನ್ನ ಡೆಡಿಕೇಟೆಡ್ ಕೋವಿಡ್​ ಆಸ್ಪತ್ರೆಯ ವಾರ್ಡ್‌ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ.

ಒಂದು ವೇಳೆ ರೋಗಿ ಬೇರೆ ನಗರದವರಾಗಿದ್ದರೂ ಆಮ್ಲಜನಕ ಅಥವಾ ಔಷಧಿ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಚಿವಾಲಯ ಹೇಳಿದೆ.

The post ಇನ್ಮುಂದೆ ಆಸ್ಪತ್ರೆಗೆ ದಾಖಲಾಗಲು ಕೊರೊನಾ ಪಾಸಿಟಿವ್ ವರದಿ ಕಡ್ಡಾಯವಲ್ಲ appeared first on News First Kannada.

Source: newsfirstlive.com

Source link